ಬೆಂಗಳೂರು, (www.thenewzmirror.com) :
ಬಿಡಿಎ ಕಾರ್ನರ್ ಸೈಟ್ ಗೆ ಭಾರೀ ಬೇಡಿಕೆ.., ಒಂದೊಂದು ಸೈಟ್ ಕೋಟಿಗೆ ಬೆಲೆ ಬಾಳುತ್ತೆ.., ಕರೋನಾ ಆರ್ಥಿಕ ಸಂಕಷ್ಟದಲ್ಲಿದ್ದ ಬಿಡಿಎ ಅಂಥ ಸೈಟ್ ಗಳನ್ನ ಹರಾಜು ಮಾಡಲು ಮುಂದಾಗಿತ್ತು. ಇದ್ರಿಂದ ಸಾಕಷ್ಟು ಹಣ ಬರುತ್ತೆ ಅನ್ಕೊಂಡಿದ್ದ ಪ್ರಾಧಿಕಾರಕ್ಕೆ ಅಧಿಕಾರಿಗಳ ಹಣದಾಸೆ ಅದಕ್ಕೆ ಬ್ರೇಕ್ ಹಾಕಿದೆ.., ಬ್ರೋಕರ್ ಗಳ ಜತೆ ಶಾಮೀಲಾಗಿ ಕೋಟಿ ಕೋಟಿ ವಂಚನೆ ಮಾಡಿರೋದು ತಡವಾಗಿ ಬೆಳಕಿಗೆ ಬಂದಿದೆ..,
ಬಿಡಿಎ ಅಂದ್ರೆ ಭ್ರಷ್ಟಚಾರ.., ಯಾವುದೇ ಕೆಲ್ಸ ಆಗ್ಬೇಕಂದ್ರೂ ದುಡ್ಡು ಕೊಡ್ಬೇಕು.., ಹಣ ಕೊಟ್ರೆ ಕಾನೂನೇ ಇಲ್ಲಿ ಮಾಯವಾಗುತ್ತೆ ಅನ್ನೋದು ಪದೇ ಪದೇ ಸಾಬೀತಾಗ್ತಾನೇ ಇದೆ. ಅದಕ್ಕೆ ಸ್ವತಃ ಪ್ರಾಧಿಕಾರದ ಅಧಿಕಾರಿಗಳೇ ಶಾಮೀಲಾಗ್ತಿದ್ದಾರೆ.., ಇದ್ರಿಂದ ಕೋಟ್ಯಾಂತರ ರೂಪಾಯಿ ನಷ್ಟವುಂಟಾಗಿದ್ದು, ಅಂಥವ್ರ ವಿರುದ್ಧ ಇದೀಗ ಬಿಡಿಎ ಕಾನೂನು ಹೋರಾಟಕ್ಕೆ ಮುಂದಾಗಿದೆ.
ಅಕ್ರಮ ಹೇಗೆ ನಡೆದಿದೆ..?
- ಇ ಹರಾಜಿನಲ್ಲಿ ವಂಚಕರು ಖರೀದಿದಾರೆಂದು ಭಾಗಿ
- ಸೈಟ್ ಖರೀದಿ ಮಾಡಿ ಬ್ಲಾಕ್ ಮಾಡಿದ್ದ ವಂಚಕರು
- ವಿಶ್ವೇಶ್ವರಯ್ಯ ಲೇಔಟ್ ನ ಹರಾಜಿನಲ್ಲಿ ಬ್ಲಾಕ್ ಮಾಡಿದ್ದ ವಂಚಕರು
- ಖಾಸಗಿ ಬ್ಯಾಂಕ್ ಗಳಿಂದ ನಕಲಿ ದಾಖಲೆ ಸೃಷ್ಟಿಸಿದ್ದ ವಂಚಕರು
- ಸೈಟ್ ನ ಸ್ಥಳ ಬದಲಾವಣೆ ಮಾಡಿ ಮಾರಾಟಕ್ಕೆ ಯತ್ನ
ಅಂಜನಾಪುರ, ಅರ್ಕಾವತಿ ಲೇಔಟ್, ಬನಶಂಕರಿ, ಎಚ್‌ಬಿಆರ್ ಲೇಔಟ್, ಜೆಪಿ ನಗರ, ನಾಡಪ್ರಭು ಕೆಂಪೇಗೌಡ ಲೇಔಟ್, ನಾಗರಭಾವಿ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ ಎಂಬ ಎಂಟು ವಸತಿ ಬಡಾವಣೆಗಳಲ್ಲಿ ಬಿಡಿಎ ನಿವೇಶನಗಳನ್ನು ಹರಾಜು ಹಾಕಿತ್ತು. ಇದ್ರಲ್ಲಿ ಅಕ್ರಮ ಹೇಗೆ ಆಗುತ್ತೆ ಅನ್ನೋದದನ್ನ ನೋಡೋದಾದ್ರೆ.., ಇ ಹರಾಜಿನಲ್ಲಿ ವಂಚಕರು ತಾವೇ ಖರೀದಿದಾರರೆಂದು ಭಾಗಿಯಾಗಿ ತಮಗಿಷ್ಟವಾದ ಕಾರ್ನರ್ ಸೈಟ್ ಅನ್ನ ಬ್ಲಾಕ್ ಮಾಡ್ತಾರೆ.., ಇದಾದ ಬಳಿಕ ಟೌನ್ ಪ್ಲಾನಿಂಗ್ ನಲ್ಲಿರೋ ಬಿಡಿಎ ಅಧಿಕಾರಿಗಳು ಇವ್ರ ಹೆಸರಿನಲ್ಲಿ ನಕಲಿ ದಾಖಲೆ ಜತೆಗೆ ಟ್ಯೂಪ್ಲಿಕೇಟ್ ಬ್ಯಾಂಕ್ ಬಿಲ್ ಗಳನ್ನ ಸೃಷ್ಟಿಸಲು ಸಹಕಾರಿ ಮಾಡಿ ಅದನ್ನ ಮತ್ತೊಬ್ಬರಿಗೆ ಮಾರಾಟ ಮಾಡೋಕೆ ಮುಂದಾಗಿದ್ರು. ವಿಶ್ವೇಶ್ವರಯ್ಯ ಲೇಔಟ್ ನ ಇ ಹರಾಜಿನಲ್ಲಿ ಮೂರು ಸೈಟ್ ಇದೇ ರೀತಿ ವಂಚನೆ ಮಾಡಿದ್ದನ್ನ ಬಿಡಿಎ ಜಾಗೃತದಳ ತಡವಾಗಿ ಪತ್ತೆ ಹಚ್ಚಿದೆ.
ಈ ಕುರಿತಂತೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಇದ್ರಲ್ಲಿ ಬಿಡಿಎ ಟೌನ್ ಪ್ಲಾನಿಂಗ್ ನ ಅಧಿಕಾರಿಗಳು ಶಾಮೀಲಾಗಿದ್ದಾರೆ. ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಅಂತ ಮನವಿ ಮಾಡಿದ್ದಾರೆ. ಅದೇನೇ ಇರ್ಲಿ, ಬಿಡಿಎ ಭ್ರಷ್ಟಚಾರದ ಕೂಪವಾಗಿದ್ದು, ಇದಕ್ಕೆ ಸ್ವತಃ ಅಧಿಕಾರಿಗಳೇ ಶಾಮೀಲಾಗಿದ್ದು ಮಾತ್ರ ದುರಂತವೇ ಸರಿ.