ಬೆಂಗಳೂರು,(www.thenewzmirror.com) :
KSRTC ಯಲ್ಲಿ ಅಪರೂಪದಲ್ಲಿ ಅಪರೂಪದ ಪ್ರಕರಣ.., ಮಗಳು ಮಾಡಿದ ಮನವಿಗೆ ಸ್ಪಂದನೆ.., ಸುದೀರ್ಘ ರಜೆ ಹಾಕಿದ್ರೂ ಸಿಗ್ತು ಸರ್ಕಾರಿ ಕೆಲ.., ನಿಗಮದಲ್ಲೇ ಇಂಥ ಪ್ರಕರಣ ಮೊದಲು.
ಮಗಳು ಭೂಮಿಕಾ ವಯಸ್ಸು ಏಳು ಆದರೂ ಮಾಡಿದ ಕಾರ್ಯ ಎಲ್ಲರೂ ಮೆಚ್ಚುವಂಥದ್ದು. ಚಿಕ್ಕ ವಯಸ್ಸಿನಲ್ಲಿ ಆಟ ಪಾಠ ಅಂತ ಕಾಲ ಕಳೆಬೇಕಿದ್ದ ಬಾಲಕಿ ತನ್ನ ತಂದೆಗೆ ಸರ್ಕಾರಿ ಕೆಲಸ ಕೊಡಿಸಿದ್ದಾಳೆ.
ಈ ಬಾಲಕಿಯ ತಂದೆ ದೀರ್ಘಾವಧಿ ಗೈರುಹಾಜರಿ ಪ್ರಕರಣದಲ್ಲಿ ನಿಗಮದಿಂದ ವಜಾ ಆಗಿದ್ದು , ಕೆಲಸವಿಲ್ಲದೆ ಜೀವನ ನಡೆಸುವುದಕ್ಕೆ ಕಷ್ಟ ಪಡುತ್ತಿದ್ದು, ಮಗುವಿಗೆ ಒಳ್ಳೆಯ ಚಿಕಿತ್ಸೆ ಕೊಡಿಸುವುದು ದೂರದ ಮಾತು.
ನಿಗಮದ ವ್ಯವಸ್ಥಾಪಕ ನಿರ್ದೇಶಕರ ಅಂತಃಕರಣ ಬಗ್ಗೆ ಈಗಾಗಲೇ ಸಿಬ್ಬಂದಿಗಳಿಗೆ ತಿಳಿದಿದ್ದು, ಅದರ ಪ್ರಯತ್ನವಾಗಿ ಸದರಿ ಚಾಲಕ ತನ್ನ ಮಗಳೊಂದಿಗೆ ,ಕೆ ಎಸ್ ಆರ್ ಟಿ ಸಿ ಕೇಂದ್ರ ಕಛೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿದಾಗ, ವ್ಯವಸ್ಥಾಪಕ ನಿರ್ದೇಶಕರು ಆ ಮಗುವನ್ನು ಮಾತನಾಡಿಸಿ, ಚಾಕೋಲೇಟ್ ನೀಡಿ ಅಪ್ಪನಿಗೆ ಕೆಲಸ ಕೊಡಬೇಕಾ ಎಂದಾಗ ನನ್ನ ಅಪ್ಪನಿಗೆ ಕೆಲಸ ಕೊಡಿ ಸರ್ ಎಂದು ಆ ಮಗುವು ಕೇಳಿದ ಕ್ಷಣ ನಿಜಕ್ಕೂ ಮರುಕಹುಟ್ಟಿಸುವಂತಹದ್ದು.
ಇಂದು ವ್ಯವಸ್ಥಾಪಕ ನಿರ್ದೇಶಕರು, ಲೋಕೇಶ್ ಚಾಲಕ -ಕಂ-ನಿರ್ವಾಹಕ ಬಿಲ್ಲೆ ಸಂಖ್ಯೆ 283 , ಚಿಕ್ಕಮಗಳೂರು ವಿಭಾಗರವರಿಗೆ ಮರುನೇಮಕ ಆದೇಶ ನೀಡಿ ಆ ಮಗುವಿಗಾಗಿ ಮತ್ತೊಮ್ಮೆ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದು, ಮತ್ತೊಮ್ಮೆ ಗೈರುಹಾಜರಿ ಆದರೆ ಯಾವುದೇ ವಿನಾಯಿತಿ ನೀಡದೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.