ಬೆಂಗಳೂರು,(www.thenewzmirror.com):
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಕಾಲಿಕ ಸಾವನ್ನ, ಇನ್ನೂ ಕೂಡ ಯಾರಿಗೂ ನಂಬೋಕಾಗ್ತಿಲ್ಲ.. ಅಪ್ಪು ದಿಢೀರ್ ಸಾವಿಗೆ ಕಾರಣ ಏನು ಅಂತ, ಎಲ್ರೂ ಹುಡುಕ್ತಿದ್ದಾರೆ.. ಅಷ್ಟೊಂದು ಫಿಟ್ ಌಂಡ್ ಫೈನ್ ಆಗಿದ್ದ ಪುನೀತ್ಗೆ, ಏಕಾಎಕಿ ಹೃದಯ ಸ್ತಂಭನವಾಗಿದ್ದೇಗೆ ಎಂಬ ಪ್ರಶ್ನೆಗೆ, ಯಾರ್ಗೂ ಉತ್ತರ ಸಿಕ್ಕಿಲ್ಲ.. ಹೀಗಿರುವಾಗ್ಲೆ ಅವರ ಕೊನೆ ಕ್ಷಣದ ವಿಡಿಯೋ ವೈರಲ್ ಆಗ್ತಿದೆ
ಅಕ್ಟೋಬರ್ 29ರಂದು ಬೆಳಗ್ಗೆ 11.45ರ ಸುಮಾರಿಗೆ, ಪುನೀತ್ ಆರೋಗ್ಯ ಸ್ಥಿತಿ ಗಂಭೀರ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು.. ಆದ್ರೆ ಅದಕ್ಕೂ ಕೆಲವೇ ನಿಮಿಷಗಳ ಮೊದಲು, ಪುನೀತ್ ಮನೆಯಿಂದ ಹೊರಟಿದ್ದ ವಿಡಿಯೋ ಇದೀಗ ವೈರಲ್ ಆಗಿದೆ.. ಸ್ವಲ್ಪ ಸುಸ್ತು ಕಾಣಿಸಿಕೊಂಡ ಹಿನ್ನೆಲೆ, ಸದಾಶಿವನಗರದ ನಿವಾಸದಿಂದ ಪತ್ನಿ ಅಶ್ವಿನಿ ಜೊತೆ 11 ಗಂಟೆ 1 ನಿಮಿಷಕ್ಕೆ ರಮಣಶ್ರೀ ಕ್ಲಿನಿಕ್ಗೆ ಹೊರಟಿದ್ದಾರೆ.. ಅದ್ರ ಸಿಸಿಟಿವಿ ಫೂಟೇಜ್ ಇದೀಗ ಲಭ್ಯವಾಗಿದೆ.. ಈ ದೃಶ್ಯವನ್ನ ನೋಡ್ದಾಗ, ಹೆಚ್ಚಿನ ಸೀರಿಯಸ್ ಏನು ಇರಲಿಲ್ಲ ಅನ್ಸತ್ತೆ..
ಆದ್ರೆ ರಮಣಶ್ರೀ ಕ್ಲಿನಿಕ್ ಹೋಗಿ ಇಸಿಜಿ ಮಾಡಿಸುವವರೆಗೂ, ಎಲ್ಲವೂ ಸಹಜವಾಗೇ ಇತ್ತು.. ಆದ್ರೆ ಅಲ್ಲಿಂದ ವಿಕ್ರಂ ಆಸ್ಪತ್ರೆಗೆ ಹೋಗುವಷ್ಟರಲ್ಲಿ, ಅಪ್ಪು ಸ್ಥಿತಿ ಗಂಭೀರವಾಗಿತ್ತು.. ವಿಕ್ರಂ ಆಸ್ಪತ್ರೆ ತಲುಪುವ ಹೊತ್ತಿಗಾಗ್ಲೆ ಪುನೀತ್ ಸಾವನ್ನಪ್ಪಿದ್ರು ಎಂಬ ಮಾಹಿತಿ ಇದೆ.. ಆಸ್ಪತ್ರೆಯಲ್ಲಿ ಅವರನ್ನ ಎತ್ತಿಕೊಂಡು ಹೋಗ್ತಿರೋ ಫೋಟೋ ಕೂಡ ಈಗ ಲಭ್ಯವಾಗಿದೆ..
ಒಟ್ನಲ್ಲಿ ಪುನೀತ್ ಅಕಾಲಿಕ ಸಾವು, ಎಲ್ರಿಗೂ ಭಾರೀ ಶಾಕ್ ತಂದಿದೆ.. ಹೀಗೆ ಏಕಾಎಕಿ ಅಪ್ಪು ಸಾವನ್ನಪ್ಪಿದ್ದು, ಹತ್ತು ಹಲವು ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ.