ಅಮಿತ್ ಷಾ ಎಂಟ್ರಿ ರಾಜ್ಯಕ್ಕೆ ಸಿಗುತ್ತಾ ಟಾನಿಕ್..?

ಬೆಂಗಳೂರು, ( www.thenewzmirror.com) ;

ತಮ್ಮ ಭಾಷಣಗಳಲ್ಲಿ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದಿಂದ ರಾಜ್ಯಕ್ಕೆ ಯಾವುದೇ ಒಳಿತು ಮಾಡದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೇಲೆ ಅಮಿತ್ ಶಾ ತೀಕ್ಷ್ಣವಾಗಿ ಹರಿ ಹಾಯಲಿದ್ದಾರೆ.
ತಮ್ಮ ಹಿಂದಿನ ಭಾಷಣಗಳಲ್ಲಿ ಕರ್ನಾಟಕ ಕಾಂಗ್ರೆಸ್ ದೆಹಲಿ ಗಾಂಧಿ ಕುಟುಂಬದ ಏಟಿಎಂ ಆಗಿ ಕಾರ್ಯ ನಿರ್ವಹಿಸುತ್ತದೆ ಎಂದು ಟೀಕಿಸಿದ್ದರು.

RELATED POSTS

ಅಮಿತ್ ಶಾ ಸೂಚನೆಯ ಮೇರೆಗೆ ಭಾಜಪ ಕಾರ್ಯಕರ್ತರು ಪೂರ್ಣ ಬಹುಮತಕ್ಕಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಪ್ರಸ್ತುತ ಕರ್ನಾಟಕ ವಿಧಾನಸಭೆಯಲ್ಲಿ ಭಾಜಪ 117 ಸೀಟುಗಳನ್ನು ಹೊಂದಿದ್ದರೆ, ಕಾಂಗ್ರೆಸ್ 69 ಮತ್ತು ಜೆಡಿಎಸ್ 32 ಸೀಟುಗಳನ್ನು ಹೊಂದಿದೆ. ಉಳಿದ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಗೆ, ಈ ಚುನಾವಣೆ ತುಂಬಾ ಪರಿಣಾಮ ಬೀರಲಿರುವುದು ಶಾಗೆ ಚೆನ್ನಾಗಿಯೇ ತಿಳಿದಿದೆ. ಆದಕಾರಣ ಚುನಾವಣೆ ಆಯೋಗ ಎಲೆಕ್ಷನ್ ಘಂಟೆ ಬಾರಿಸುವ ಮುನ್ನವೇ ಅಮಿತ್ ಶಾ ಅಖಾಡಕ್ಕೆ ಇಳಿದಿದ್ದಾರೆ.

ರಾಜಕೀಯ ಚಾಣಕ್ಯನೆಂಬ ಹೆಸರಿಗೆ ಅನ್ವರ್ಥವೆಂಬಂತೆ, ಕಳೆದ ಡಿಸೆಂಬರ್‌ನಲ್ಲಿ ತಮ್ಮ ಮೊದಲ ಚುನಾವಣಾ ರ್ಯಾಲಿಗೆ ಒಕ್ಕಲಿಗರೇ ಹೆಚ್ಚಾಗಿರುವ, ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಾಬಲ್ಯ ಹೆಚ್ಚಾಗಿರುವ ಮೈಸೂರು ಭಾಗದ ಮಂಡ್ಯವನ್ನು ಆರಿಸಿದರು. 61 ಸೀಟುಗಳನ್ನು ಹೊಂದಿರುವ ಈ ಭಾಗ ಬಿಜೆಪಿಗೆ ಪೂರ್ಣಬಹುಮತ ನೀಡಲು ತುಂಬಾ ಅವಶ್ಯಕ. ಇದರ ಜೊತೆ ಜೊತೆಗೆ ಶಾ ಪೂರ್ಣ ಬಹುಮತದ ಸಂಕಲ್ಪಕ್ಕೆ ತುಂಬಾ ಅವಶ್ಯವಾಗಿರುವ ಬೆಂಗಳೂರು ಮತ್ತು ಬಳ್ಳಾರಿಯಲ್ಲಿಯೂ ರ್ಯಾಲಿ ನಡೆಸಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist