ಬೆಂಗಳೂರು, (www.thenewzmirror.com) ;
ನವೆಂಬರ್ ತಿಂಗಳಿನಲ್ಲಿ ವಾಯು ಮಾಲಿನ್ಯ ನಿಯಂತ್ರಣ ಮಾಸವನ್ನಾಗಿ ಸಾರಿಗೆ ಇಲಾಖೆ ಆಚರಣೆ ಮಾಡುತ್ತಾ ಬರುತ್ತಿದೆ. ಅದೇ ರೀತಿ ಕಸ್ತೂರಿನಗರದಲ್ಲಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ (ಪೂರ್ವ)ಯಲ್ಲಿ ಆಚರಣೆ ಮಾಡಲಾಯಿತು.
ಕಲಬೆರಕೆ ಇಂಧನ ಬಳಕೆ ಮಾಡುವುದರಿಂದ ಪರಿಸರದ ಮೇಲಾಗುತ್ತಿರುವ ಅನಾಹುತ.., ಟ್ರಾಫಿಕ್ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸಲಾಯ್ತು. ಹಾಗೆನೇ ಶುದ್ಧಗಾಳಿಯಿಂದ ಪರಿಸರ ಜತೆಗೆ ಜೀವನ ನಡೆಸಲು ಯಾವ ರೀತಿ ಸಹಕಾರಿಯಾಗುತ್ತೆ ಅನ್ನುವುದರ ಬಗ್ಗೆಯೂ ತಿಳಿಹೇಳಲಾಯಿತು.
ಕಚೇರಿ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು. ಕಸ್ತೂರಿನಗರ ಕಚೇರಿಯ ಆರ್ ಟಿಓ ಅಧಿಕಾರಿ ನೇಫಾನಂದ್, ಎಆರ್ ಟಿಓ ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು.
ಇದೇ ವೇಳೆ ಕಚೇರಿಯಲ್ಲಿ ಕಣ್ಣು ತಪಾಸಣಾ ಶಿಬಿರವನ್ನ ಆಯೋಜಿಸಲಾಗಿತ್ತು. ಶಂಕರ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಿದ್ದ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡರು.