ಬೆಂಗಳೂರು,(www.thenewzmirror.com):
ಕರೋನಾ ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ಜನರ ಪರದಾಟ ಇನ್ನೂ ಕಣ್ಣಿಗೆ ಕಟ್ಟಿದಂತೆಯೇ ಇದೆ. ಈ ವೇಳೆಯಲ್ಲಿ ಖಾಸಗಿ ಆಸ್ಪತ್ರೆಗಳು ಜನರಿಂದ ದುಬಾರಿ ದರ ಪಡೆದು, ಲಕ್ಷ ಲಕ್ಷ ಬಿಲ್ ಮಾಡಿ ಜನರು ಹೈರಾಣಾಗುವಂತೆ ಮಾಡಿದ್ದು ಎಲ್ರಿಗೂ ಗೊತ್ತಿದೆ.., ಆದ್ರೀಗ ಒಮಿಕ್ರಾನ್ ನಿಂದ ಮೂರನೇ ಅಲೆ ಭೀತಿ ಎದುರಾಗಿರೋ ಹೊತ್ತಲ್ಲೇ ನಗರದ ಖಾಸಗಿ ಆಸ್ಪತ್ರೆಗಳಿಗೆ ನೋಟೀಸ್ ಜಾರಿ ಮಾಡಿ ಖಡಕ್ ಎಚ್ಚರಿಕೆ ಕೊಟ್ಟಿದೆ.
ಮೊದಲ ಮತ್ತು ಎರಡನೇ ಅಲೆ ಸಮಯದಲ್ಲಿ ಜನರು ಕಂಡು ಕೇಳರಿಯದ ರೀತಿಯಲ್ಲಿ ಆಸ್ಪತ್ರೆ ಬಿಲ್ ಕಂಡು ದಂಗಾಗಿ ಹೋಗಿದ್ರು., ಬೆಡ್ ಬೇಕು ಅಂದ್ರೆ ಲಕ್ಷ.. ಐಸಿಯೂ ಬೇಕು ಅಂದ್ರೆ ಲಕ್ಷ ಲಕ್ಷ.. ಹೀಗೆ ಲಕ್ಷ ಲಕ್ಷದ ಬಿಲ್ಗಳನ್ನು ಆಸ್ಪತ್ರೆಗಳು ನೀಡುತ್ತಿದ್ದವು. ಒಂದು ಕಡೆ ಕರೋನಾ ಹೊಡೆತ ಮತ್ತೊಂದು ಕಡೆ ಖಾಸಗಿ ಆಸ್ಪತ್ರೆಗಳಿಂದ ಆಗ್ತಿದ್ದ ಸುಲಿಗೆ.., ಇದ್ರಿಂದ ಜನರು ಅಕ್ಷರಶಃ ನಲುಗಿ ಹೋಗಿದ್ರು.., ಈ ಕುರಿತಂತೆ ಸಾರ್ವಜನಿಕ್ರಿಂದ ಸಾಕಷ್ಟು ದೂರುಗಳೂ ಕೇಳಿ ಬರ್ತಿದ್ವು.., ಈ ಬಾರಿ ಓಮಿಕ್ರಾನ್ ಮೂರನೇ ಅಲೆ ಭೀತಿ ಹುಟ್ಟಿಸಿದ ಬೆನ್ನಲ್ಲೇ ಪಾಲಿಕೆ ಎಚ್ಚೆತ್ತುಕೊಂಡಿದೆ.., ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಲಗಾಮು ಹಾಕೋಕೆ ಮುಂದಾಗಿದೆ.
ಎರಡನೇ ಅಲೆಯಲ್ಲಿ ಸೋಂಕಿತರಿಂದ ಮನಸೋ ಇಚ್ಚೆ ಆಸ್ಪತ್ರೆಗಳು ಹಣ ವಸೂಲಿ ಮಾಡಿತ್ತು. ಸರ್ಕಾರ ನಿಗದಿ ಮಾಡಿದ್ದ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿತ್ತು. ಜನರಲ್ ಬೆಡ್ ಗೆ 10 ಸಾವಿರ.., HDU ಬೆಡ್ ಗೆ 12 ಸಾವಿರ.., ಹಾಗೆನೇ ICU ಬೆಡ್ ಗೆ 15 ಸಾವಿರ.., ICU ವೆಂಟಿಲೇಟರ್ ಗೆ 25 ಸಾವಿರ ಮಾತ್ರ ಬಿಲ್ ಮಾಡ್ಬೇಕು ಇದು ಸರ್ಕಾರದ ಆದೇಶವಾಗಿದ್ದು, ಇದನ್ನ ಮೀರಿ ಹಣ ವಸೂಲಿ ಜತೆಗೆ ಬೆಡ್ ಬ್ಲಾಕಿಂಗ್ ದಂಧೆಯೂ ಅವ್ಯಾಹತವಾಗಿ ನಡೆಯುತ್ತಿತ್ತು.., ಹೀಗಾಗಿ ಸರ್ಕಾರ ನಿಗದಿ ಮಾಡಿರೋ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಿದ್ದು ಕಂಡು ಬಂದ್ರೆ ಕಾನೂನಾತ್ಮಕ ಕ್ರಮದ ಬಗ್ಗೆ ನೊಟೀಸ್ ನಲ್ಲಿ ಉಲ್ಲೇಖಿಸಿ ನೀಡಲಾಗ್ತಿದೆ.
ಈಗಾಗಲೇ ಈ ಬಗ್ಗೆ ನಗರದ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಸೂಚನೆ ಕೊಟ್ಟಿದ್ದು, ಒಮಿಕ್ರಾನ್ನಿಂದ ಮೂರನೇ ಅಲೆ ಭೀತಿ ಹೆಚ್ಚಿದ ನಡುವೆಯೇ ಬೆಡ್ ರೇಟ್ ನಿಗದಿ ಮಾಡಿದೆ. ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದೆ.., ಹೆಚ್ಚಿನ ದರ ವಸೂಲಿ ಮಾಡಿದ್ದು ಕಂಡು ಬಂದರೆ ಖುದ್ದು ಸಾರ್ವಜನಿಕರೇ ಪಾಲಿಕೆಗೆ ತಿಳಿಸಬಹುದು. ಇದಕ್ಕಂತಲೇ ಬಿಬಿಎಂಪಿಯಿಂದ ಹೆಲ್ಪ್ ಲೈನ್ ನಂಬರ್ ತೆರೆದಿದ್ದು, 080-22660000 ನಂಬರ್ ಕರೆ ಮಾಡಿ ದೂರು ದಾಖಲಿಸಿದರೆ ಅಂಥಾ ಆಸ್ಪತ್ರೆ ವಿರುದ್ದ ಪಾಲಿಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.