ಬೆಂಗಳೂರು,(www.thenewzmirror.com):
ಸಾರಿಗೆ ಇಲಾಖೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಯ ಆಟಾಟೋಪಕ್ಕೆ ಕಡಿವಾಣ ಯಾವಾಗ ಎನ್ನುವ ಪ್ರಶ್ನೆ ಇದೀಗ ಮೂಡಿದೆ.
ಅದು ಸಾರಿಗೆ ಇಲಾಖೆಯಲ್ಲೇ ಅತಿ ಹೆಚ್ಚು ಆದಾಯ ತರೋ ಕಚೇರಿ…, ಅಲ್ಲಿ ಯಾವುದೇ ವಾಹನಗಳ ವರ್ಗಾವಣೆ ಹಾಗೆನೇ ದಾಖಲೆ ಬೇಕು ಅಂದ್ರೆ ತಕ್ಷಣಕ್ಕೆ ಸಿಗೋದಿಲ್ಲ.., ಬ್ರೋಕರ್ ಗಳ ಮೂಲಕ ಹೋದ್ರೆ ಎಲ್ಲವೂ ಫಟಾಫ್ ಅಂತ್ ಮುಗಿದು ಹೋಗುತ್ತೆ.., ಬ್ರೋಕರ್ ಇಲ್ಲದೇ ನೇರವಾಗಿ ಹೋದ್ರೆ ನಿಮ್ ಕೆಲ್ಸ ಆಗೋಕೆ ತಿಂಗಳುಗಟ್ಟಲೇಬೇಕು..,
ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ತರೋ ಇಲಾಖೆ ಅಂದ್ರೆ ಅದು ಸಾರಿಗೆ ಇಲಾಖೆ.., ಈ ಇಲಾಖೆಯಲ್ಲಿ ಅತಿ ಹೆಚ್ಚು ರೆವೆನ್ಯೂ ತರೋ ಕಚೇರಿ ಅಂದ್ರೆ ಬೆಂಗಳೂರು ಕೇಂದ್ರ ಆರ್ ಟಿಓ ಕಚೇರಿ. ಹೆಚ್ಚು ಆದಾಯ ಬರುತ್ತೆ ಅಂದ್ರೆ ಅಲ್ಲಿ ಮದ್ಯವರ್ತಿಗಳಿಗೇನೂ ಕಮ್ಮಿ ಇಲ್ಲ. ಅದೇ ರೀತಿ ಬ್ರೋಕರ್ಸ್ ಗಳ ಹಾವಳಿಯಿಂದಾಗಿ ಸಾರ್ವಜನಿಕ್ರು ಪ್ರತಿ ದಿನ ಪರಿತಪಿಸುವಂತಾಗಿದೆ.
ಕಚೇರಿಯಲ್ಲಿದೆಯಂತೆ ಅಲಿಖಿತ ನಿಯಮ…!
ಹೆಚ್ ಎಸ್ ಆರ್ ಲೇಔಟ್ ನಲ್ಲಿರೋ ಆರ್ ಟಿಓ ಕಚೇರಿಯಲ್ಲಿ ವಾಹನಗಳ ದಾಖಲೆ ಪಡೀಬೇಕು ಅಂದ್ರೆ.., ಎಫ್ ಸಿ ಮಾಡಿಸ್ಬೇಕು ಅಂದ್ರೆ ಮದ್ಯವರ್ತಿಗಳ ಕೈ ಬಿಸಿ ಮಾಡ್ಲೇಬೇಕಂತೆ.., ಬ್ರೋಕರ್ ಇಲ್ಲದೆ ಎಲ್ಲಾದ್ರೂ ಕಚೇರಿಗೆ ಹೋದರೆ ಆರ್ ಟಿಓ ಕಚೇರಿಯಲ್ಲಿ ಇಲ್ಲ.. ನಾಳೆ ಬನ್ನಿ ನಾಡಿದ್ದು ಬನ್ನಿ ಅಂತ ವಾಪಾಸ್ ಕಳುಹಿಸುತ್ತಾರೆ. ಈ ಕುರಿತಂತೆ ಅಲ್ಲಿನ ಅಧಿಕಾರಿಗಳಿಗೆ ಈ ರೀತಿ ಹೇಳ್ಬೇಕು ಅಂತ ಟ್ರೈನಿಂಗ್ ಕೊಟ್ಟಿದ್ದಾರಂತೆ. ಅಷ್ಟೇ ಅಲ್ಲದೆ ಬೆಂಗಳೂರು ನಗರ ಸಾರಿಗೆ ಇಲಾಖೆ ಜಂಟಿ ಆಯುಕ್ತರ ಜತೆಗೆ ಕೋರಮಂಗಲ( ಕೇಂದ್ರ) ದ ಆರ್ ಟಿಓ ಆಗಿರೋ ಹಾಲಸ್ವಾಮಿ ಈ ರೀತಿಯ ಅಲಿಖಿತ ನಿಯಮವನ್ನ ಮಾಡಿದ್ದಾರಂತೆ..,
ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಏನು ಅಂದ್ರೆ ಆರ್ ಟಿಓ ಕಚೇರಿಯಲ್ಲಿ ಇದ್ರೂ ನೇರವಾಗಿ ಭೇಟಿಗೆ ಅಂತ ಹೋದ್ರೆ ಇಲ್ಲ ಅನ್ನೋ ಉತ್ತರ ಅವ್ರ ಸಿಬ್ಬಂದಿಯಿಂದ ಬರುತ್ತಂತೆ.., ಬ್ರೋಕರ್ ಗಳು ಇಲ್ಲಾಂದ್ರೆ ಇಲ್ಲಿ ಯಾವ ಫೈಲ್ ಗಳೂ ಮೂವ್ ಆಗೋದೇ ಇಲ್ಲವಂತೆ.., ಯಾರೆಲ್ಲಾ ಬ್ರೋಕರ್ ಗಳ ಮೂಲಕ ಕಚೇರಿಗೆ ಬರ್ತಾರೋ ಅವ್ರ ಕೆಲ್ಸವೆಲ್ಲಾ ಕ್ಷಣಮಾತ್ರದಲ್ಲಿ ಆಗಿ ಹೋಗುತ್ತಂತೆ.., ಕಚೇರಿಯ ಹಿರಿಯ ಅಧಿಕಾರಿಗಳೂ ಸಿಗ್ತಾರಂತೆ.., ನೇರವಾಗಿ ಹೋಗಿ ಕೆಲ್ಸ ಮಾಡಿಸಿಕೊಳ್ಳಬೇಕು ಅಂದ್ರೆ ದಿನಗಟ್ಟಲೇ ಇಲ್ಲಾಂದ್ರೆ ತಿಂಗಳುಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆಯಂತೆ..,
ಒಂದು ದಾಖಲೆ ಬದಲಾವಣೆಗೆ ಕನಿಷ್ಠ ಒಂದೂವರೆ ತಿಂಗಳು ಬೇಕು..!
ಇನ್ನು ಕೇಂದ್ರ ಕಚೇರಿಯಿಂದ ಒಂದೊಂದು ಕಚೇರಿಯಲ್ಲಿ ಇಂತಿಷ್ಟು ಆದಾಯ ತರ್ಬೇಕು ಅನ್ನೋ ಒತ್ತಡನೂ ಕೂಡ ಬ್ರೋಕರ್ ಗಳ ಹಾವಳಿ ಹೆಚ್ಚಾಗೋಕೆ ಕಾರಣ ಅನ್ನೋ ಮಾತುಗಳೂ ಕೇಳಿ ಬರ್ತಿವೆ.., ಬ್ರೋಕರ್ ಮೂಲಕ ಎಫ್ ಸಿ, ದಾಖಲೆ ಬದಲಾವಣೆ, ಟ್ರಾನ್ಸ್ ಫರ್ ಆಗ್ಬೇಕು ಅಂದ್ರೆ ಒಂದೇ ದಿನದಲ್ಲಿ ಕೆಲ್ಸ ಮುಗಿದು ಬಿಡುತ್ತಂತೆ. ಅದೇ ರೀತಿ ನೇರವಾಗಿ ಹೋದ್ರೆ ತಿಂಗಳುಗಟ್ಟಲೇ ಅಲೆಯಬೇಕಂತೆ ಅಂತ ಹೇಳುತ್ತಾರೆ ಕಾರು ಮಾಲೀಕ ಅರುಣ್ ಕುಮಾರ್
ಇನ್ನು ಅದೇ ಸಾರಿಗೆ ಕಚೇರಿಗೆ ಬಂದಿದ್ದ ಲಾರಿ ಮಾಲೀಕ ಮಾತನಾಡಿ, ನನ್ನ ವಾಹನದ ದಾಖಲೆ ಬೇಕು ಅಂತ ಒಂದು ತಿಂಗಳಿನಿಂದ ಅಲೆಯುತ್ತಿದ್ದೇನೆ. ಕಚೇರಿಗಡ ಬಂದು ಕೇಳಿದ್ರೆ ಆರ್ ಟಿಓ ಕಚೇರಿಯಲ್ಲಿ ಇಲ್ಲ ಎಂಬ ಉತ್ತರ ಬರುತ್ತೆ. ‘ಬೇರೆಯವರ’ ಮೂಲಕ ಹೋದರೆ ಕಚೇರಿಯಲ್ಲಿ ಇಲ್ಲ ಅಂತ ಅಂದವರು ತಕ್ಷಣದಲ್ಲೇ ಪ್ರತ್ಯಕ್ಷರಾಗಿ ಕೆಲ್ಸ ಮಾಡಿಸಿಕೊಡುತ್ತಾರೆ ಅಂತ ದೂರುತ್ತಾರೆ.
ಈಗಲಾದ್ರೂ ಸಾರಿಗೆ ಸಚಿವರು ಆರ್ ಟಿಓ ಕಚೇರಿಗಳಲ್ಲಿ ಆಗ್ತಿರೋ ಸಮಸ್ಯೆಗೆ ಕಡಿವಾಣ ಹಾಕೋ ಜತೆಗೆ ಸಾರ್ವಜನಿಕರ ಕೈಗೆ ಸಿಗೋ ಅಧಿಕಾರಿಗಳನ್ನ ನೇಮಿಸುವ ಕೆಲ್ಸ ಮಾಡ್ಬೇಕಿದೆ.
ಬೆಂಗಳೂರಿನಲ್ಲಿ ಇರುವ ಸಾರಿಗೆ ಕಚೇರಿಗಳ ಪೈಕಿ ಹೆಚ್ಚು ರೆವೆನ್ಯೂ ಬರುತ್ತಿರೋ ಕಚೇರಿಗೆ ಸಾರ್ವಜನಿಕರ ಪರವಾಗಿಲ್ಲದ ಅಧಿಕಾರಿಯ ಬದಲು ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ ಮಡುವಂಥ ಪ್ರಾಮಣಿಕ ಅಧಿಕಾರಿ ನೇಮಿಸುವುದು ಸೂಕ್ತ ಅಂತ ಹೇಳುತ್ತಾರೆ ಸಾರ್ವಜನಿಕರು.