ಬೆಂಗಳೂರು, (www.thenewzmirror.com) ;
ಸರ್ಕಾರಿ ಅಧಿಕಾರಿ ಅಂದ್ರೆ ಅವ್ರಿಗೆ ಕೆಲ್ಸದ ಅವಧಿಯಲ್ಲಿ ಮಾತ್ರ ಕೆಲ್ಸ ಮಾಡ್ತಾರೆ.., ಗಂಟೆ ಹೊಡೆದಂತೆ ಮಾತ್ರ ಕೆಲ್ಸ ಮಾಡುತ್ತಾರೆ.., ಕಚೇರಿ ಅವಧಿ ಮುಗಿದ್ರೆ ಜಪ್ಪಯ್ಯ ಅಂದ್ರೂ ಆಫೀಸ್ ಕಡೆ ತಲೆಹಾಕಿ ಮಲಗೊಲ್ಲ ಅಂತೆಲ್ಲ ಆರೋಪಗಳಿದಾವೆ…, ಆದ್ರೆ ಇಲ್ಲೊಬ್ಬ ಅಧಿಕಾರಿ ಈ ಎಲ್ಲಾ ಆರೋಪಗಳಿಂದ ಮುಕ್ತವಾಗಿ ರಾಜ್ಯದ ಇತರ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ..,
ಅಷ್ಟಕ್ಕೂ ಯಾರೊನ್ನೋ ಹೊಗಳೋಕೆ ಅಥವಾ ತೆಗಳೋದಿಕ್ಕೆ ಈ ವರದಿ ಮಾಡ್ತಿಲ್ಲ.., ಒಬ್ಬ ಸರ್ಕಾರಿ ಅಧಿಕಾರಿಗೆ ತಾನು ಮಾಡುವ ಕೆಲ್ಸದಲ್ಲಿ ಎಷ್ಟು ಬದ್ಧತೆ ಇರಬೇಕು.., ಅದ್ರಿಂದ ಏನೆಲ್ಲಾ ಉಪಯೋಗ ಆಗುತ್ತೆ…, ಅನ್ನೋದನ್ನ ಹೇಳುವ ಪ್ರಯತ್ನ ಮಾಡಲಾಗುತ್ತಿದೆ..,
ವಿಚಾರ ಏನು ಅನ್ನೋದನ್ನ ಆಮೇಲೆ ಹೇಳ್ತೀನಿ ಅದಕ್ಕೂ ಮೊದಲು ಬಹುತೇಕ ಸರ್ಕಾರಿ ಅಧಿಕಾರಿಗಳು ಯಾವ ರೀತಿ ಕೆಲ್ಸ ಮಾಡ್ತಿದ್ದಾರೆ.., ಕಷ್ಟ ಅಂತ ಬಂದಾಗ ಯಾವ ರೀತಿ ವರ್ತನೆ ಮಾಡ್ತಾರೆ ಅನ್ನೋದನ್ನ ಹೇಳ್ತೀನಿ.., ಸಾಮಾನ್ಯವಾಗಿ ಗೌರ್ನಮೆಂಟ್ ಆಫೀಸರ್ ಅಂದ್ರೆ ಬೆಳಗ್ಗೆ 10.30 ಕ್ಕೆ ಆಫೀಸ್ ಗೆ ಬರ್ತಾರೆ.., ಟೀ ಕುಡಿಯೋಕೆ ಅರ್ಧಗಂಟೆ ಹೋಗ್ತಾರೆ.., ಊಟ ಸಂಜೆ ಕಾಫಿ ಅಂತ ದಿನದ ಕೆಲ್ಸ ಮುಗಿಸ್ತಾರೆ.., ಅದ್ರಲ್ಲೂ ಯಾವುದಾರೊಂದು ಫಂಕ್ಷನ್ ಇದೆ ಅಂದ್ರೆ ಮುಗಿದೇ ಹೋಯ್ತು.., ಆ ದಿನದ ಸರ್ಕಾರಿ ಕೆಲಸ, ಕಡತಗಳ ವಿಲೇವಾರಿಗೆ ಫುಲ್ ಬ್ರೇಕ್ ಬೀಳುತ್ತೆ ಅಲ್ವಾ..?
ಬಹುತೇಕರ ಬಾಯಲ್ಲಿ ಇದೇ ಅಭಿಪ್ರಾಯ ಬರುತ್ತೆ. ಆದ್ರೆ ಬಿಎಂಟಿಸಿಯಲ್ಲಿರೋ ಈ ಅಧಿಕಾರಿ ಇತರ ಎಲ್ಲ ಆಫೀಸರ್ ಗಳಿಗಿಂತ ತುಂಬಾನೇ ಡಿಫರೆಂಟ್.., ಕೆಲವೇ ತಿಂಗಳ ಹಿಂದೆಯಷ್ಟೇ ಕೆಎಸ್ಸಾರ್ಟಿಸಿಯಿಂದ ಬಿಎಂಟಿಸಿಗೆ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿಯಾಗಿ ನಿಯುಕ್ತಿಗೊಂಡಿರೋ ಅಧಿಕಾರಿ ರಾಧಾ ಎಸ್ ಗುಂಡಳ್ಳಿ. ನವೆಂಬರ್ ಆಗಿದ್ರಿಂದ ನಿಗಮದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗ್ತಾ ಇತ್ತು. ಬೆಂಗಳೂರಿನ ನಯನಾ ಸಭಾಂಗಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ.
ಹಾಗಂತ ಅವ್ರೇನು ಯಾರೂ ಮಾಡದ್ದನ್ನ ಮಾಡಿಲ್ಲ.., ಸಮಯ ನಿಷ್ಠೆ ಸಾವು ಬದುಕಿನ ನಡುವೆ ಹೋರಾಟ ನಡೆಸ್ತಿದ್ದ ಒಂದು ಮುಗ್ದ ಜೀವವನ್ನ ಉಳಿಸಿದೆ.
ಹೌದು ಕನ್ನಡಾಭಿಮಾನಿಗಳೇ.., ಬಿಎಂಟಿಸಿಯಲ್ಲಿ ಕೆಲ್ಸ ಮಾಡ್ತಿದ್ದ ಅಟೆಂಡರ್ ಒಬ್ಬರ ಮಗಳಿಗೆ ಬ್ರೈನ್ ಟ್ಯೂಮರ್ ಆಗಿತ್ತು.., ಆಕೆ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ಮಾಡ್ತಿದ್ದಾರೆ…, ಆಸ್ಪತ್ರೆಯಲ್ಲಿ ತಕ್ಷಣವೇ ಚಿಕಿತ್ಸೆ ಮಾಡಬೇಕು.., ಇದಕ್ಕೆ ಅಗತ್ಯವಿರುವ ಹಣವನ್ನ ತಕ್ಷಣದಲ್ಲೇ ಕಟ್ಟಿ ಅಂತ ಸೂಚನೆ ಕೊಟ್ರು. ಮೊದಲೇ ಅಟೆಂಡರ್ ಅವ್ರಿಗೆ ಲಕ್ಷಗಟ್ಟಲೇ ಹಣ ಎಲ್ಲಿಂದ ತರ್ಬೇಕು…, ಕೆಲ್ಸ ಮಾಡ್ತಿರೋ ಬಿಎಂಟಿಸಿಯಲ್ಲಿ ಅವಕಾಶವಿದ್ದರೂ ತಕ್ಷಣದಲ್ಲಿ ಬಿಡುಗಡೆ ಅನ್ನೋದೇ ಮರಿಚಿಕೆ ಅನ್ನೋ ಆತಂಕ.., ಇದೇ ಆತಂಕದಲ್ಲಿ ಆ ಕಾರ್ಮಿಕ ಒಲ್ಲದ ಮನಸ್ಸಿನಿಂದ ಬಿಎಂಟಿಸಿ ಎಂಡಿ ಸತ್ಯವತಿ ಅವ್ರ ಬಳಿ ಹೋಗಿ ವಾಸ್ತವಾಂಶ ತಿಳಿಸಿದ್ರು.
ಕಾರ್ಮಿಕರ ಸಂಕಷ್ಟ ಏನು..? ನಿಗಮದ ಉನ್ನತಿಗೆ ಯಾವ ರೀತಿ ಶ್ರಮಿಸುತ್ತಿದ್ದಾರೆ ಅನ್ನೋದನ್ನ ಅರಿತ ಎಂಡಿ ಮೇಡಂ ತಕ್ಷಣವೇ ಮುಖ್ಯ ಕಾರ್ಮಿಕಾಧಿಕಾರಿಗೆ ಕರೆ ಮಾಡಿ ಹಣ ಬಿಡುಗಡೆಗೆ ಸೂಚಿಸಿದ್ದಾರೆ.., ಎಷ್ಟೇ ಆದ್ರೂ ಎಂಡಿ ಹೇಳಿದ್ದು ಅಲ್ವಾ ಮಾಡಿದ್ರಾಯ್ತು.., ಅದೂ ಸಂಜೆ 7.30 ಆಗಿದೆ ನಾಳೆ ಕಡತ ವಿಲೇವಾರಿ ಮಾಡಿದ್ರೆ ಆಗುತ್ತೆ ಅಂತ ಸುಮ್ಮನಿರಬಹುದಿತ್ತು ರಾಧಾ ಮೇಡಂ.., ಆದ್ರೆ ಅವ್ರು ಹಾಗೆ ಮಾಡಲಿಲ್ಲ.., ಸರ್ಕಾರಿ ಕೆಲ್ಸದ ಅವಧಿ ಮುಗಿದಿದ್ರೂ ಕಾರ್ಯಕ್ರಮದಲ್ಲಿ ಇದ್ರೂ ಅದ್ರ ನಡುವೆನೇ ಅವ್ರು ಮೆಡಿಕಲ್ ಕುರಿತಾದ ಕಡತಕ್ಕೆ ಸಹಿ ಮಾಡಿದ್ದಾರೆ..,
ಕೆಸ್ಸಾರ್ಟಿಸಿಯಿಂದ ಬಿಎಂಟಿಸಿಗೆ ಬಂದಿರುವ ರಾಧಾ ಮೇಡಂಗೆ ಕಾರ್ಮಿಕರ ಕಷ್ಟ ಏನು ಅನ್ನೋದು ಗೊತ್ತಿರೊ ಕಾರಣಕ್ಕೆ ಎಂಡಿ ಮೇಡಂ ಕಳುಹಿಸಿದ ಕಡತವನ್ನ ತಕ್ಷಣದಲ್ಲೇ ವಿಲೇವಾರಿ ಮಾಡಿದ್ದಾರೆ.., ಅಲ್ಲರೀ ಈಗಿನ ಕಾಲದಲ್ಲಿ ಯಾವ ಸರ್ಕಾರಿ ಅಧಿಕಾರಿ ಹೀಗೆಲ್ಲಾ ಬದ್ಧತೆ ಇಟ್ಟುಕೊಂಡು ಕೆಲ್ಸ ಮಾಡ್ತಾರೆ ಹೇಳಿ..? ಅವ್ರು ತೋರಿದ ಒಂದು ಸಮಯ ನಿಷ್ಠೆಯಿಂದ ವಿದ್ಯಾಭ್ಯಾಸ ಮಾಡ್ತಿರೋ ಬಾಲಕಿಯ ಜೀವ ಉಳಿಸೋಕೆ ಸಹಾಯವಾಗಿದೆ.
ಈ ಲೇಖನದ ಉದ್ದೇಶ ಮಾನವ ಜನ್ಮ ಅನ್ನೋದು ಅಮೂಲ್ಯವಾದ ಕ್ಷಣ ಅದನ್ನ ತೆಗೆಯೋಕೆ ಕಾಯುತ್ತಿರೋ ಇತ್ತೀಚಿನ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಮಾಡಿದ ಕರ್ತವ್ಯ ನಿಷ್ಠೆ ಇದೀಗ ಒಂದು ಜೀವವನ್ನ ಉಳಿಸೋ ಕೆಲ್ಸ ಮಾಡಿದೆ.., ರಾಧಾ ಅವ್ರ ಈ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ.
ಕಾರ್ಮಿಕ ಮುಖಂಡರಿಂದಲೂ ಮೆಚ್ಚುಗೆಯ ಮಹಾಪೂರ
ರಾಧಾ ಎಸ್ ಗುಂಡಳ್ಳಿ ಯಂಥಾ ನಿಷ್ಠಾವಂತ ಅಧಿಕಾರಿಗಳು ಬಿಎಂಟಿಸಿಗೆ ಅಗತ್ಯವಿತ್ತು.. ಕಾರ್ಮಿಕರ ಕಲ್ಯಾಣಾಧಿಕಾರಿ ಅಂತ ಹೇಳಿಕೊಂಡು ಬರುವ ಅದೆಷ್ಟೋ ಅಧಿಕಾರಿಗಳು ಕಾರ್ಮಿಕ ಪರವಾಗಿ ಒಂದು ದಿನವೂ ನಿಲ್ಲೋದಿಲ್ಲ.., ಕಷ್ಟ ಅಂತ ಬಂದಾಗ ಅದನ್ನ ಮೂಸಿಯೂ ನೋಡೋದಿಲ್ಲ.. ಇಂಥದ್ರಲ್ಲಿ ರಾಧಾ ಮೇಡಂ ಅವ್ರ ನಡೆ ಇತರರಿಗೆ ಮಾದರಿ. ಇಂಥ ನಿಷ್ಠಾವಂಥ ಅಧಿಕಾರಿ ಕೇವಲ ಬಿಎಂಟಿಸಿ ಮಾತ್ರವಲ್ಲ ನಾಲ್ಕೂ ನಿಗಮಗಳಲ್ಲಿ ಇರುವಂತೆ ನೋಡಿಕೊಳ್ಳಬೇಕು ಅಂತ ಸಲಹೆ ಕೊಡ್ತಿದ್ದಾರೆ ಕಾರ್ಮಿಕ ಮುಖಂಡ ಯೊಗೀಶ್ ಗೌಡ.