ಬೆಂಗಳೂರು, (www.thenewzmirror.com) :
ಕಿರಿಕ್ ಪಾರ್ಟಿ ಚೆಲುವೆ ರಶ್ಮಿಕಾ ಮಂದಣ್ಣ ಮದುವೆಯಾಗ್ತಿದ್ದಾರಾ..? ಅವ್ರನ್ನ ಮದುವೆಯಾಗೋ ಹುಡುಗ ಯಾರು ಅನ್ನೋ ಸಾಕಷ್ಟು ಗೊಂದಲಗಳಿವೆ.., ಆ ಎಲ್ಲಾ ಗೊಂದಲಗಳಿಗೆ ಇಂಬು ನೀಡುವ ದೃಶ್ಯಗಳು ಕಾಣುತ್ತಿವೆ,.,
ಮುಂಬೈ ನ ರೆಸ್ಟೋರೆಂಟ್ ವೊಂದರಲ್ಲಿ ನಟಿ ರಶ್ಮಿಕಾ ಹಾಗೂ ವಿಯಜ್ ದೇವರಕೊಂಡ ಒಟ್ಟಿಗೆ ಕಾಣಿಸಿಕೊಂಡಿದ್ದು, ಇವರಿಬ್ಬರೂ ಮದುವೆಯಾಗುತ್ತಾರೆ ಅಂತಾನೇ ಹೇಳಲಾಗುತ್ತಿದೆ.
ಈ ಇಬ್ಬರು ನಟ- ನಟಿಯರ ನಡುವೆ ಪ್ರೇಮಾಂಕರವಾಗಿದೆ. ಶೀಘ್ರದಲ್ಲೆ ಇಬ್ಬರು ಮದುವೆಯಾಗುತ್ತಾರೆ ಎಂಬ ಗಾಸಿಪ್ ಕಏಳಿ ಬರ್ತಾ ಇತ್ತು. ಆದ್ರೆ ನಮ್ಮಿಬ್ಬರ ನಡುವೆ ಅಂತಹ ಯಾವುದೇ ಸಂಬಂಧವಿಲ್ಲ, ಸ್ನೇಹಿತರಷ್ಟೆ ಎಂದು ರಶ್ಮಿಕಾ ಹಾಗೂ ವಿಜಯ್ ಆಗಾಗೇ ಸ್ಪಷ್ಟ ಪಡಿಸುತ್ತಿದ್ದರು..,
ಮುಂಬೈ ನ ಬಾಂದ್ರಾದಲ್ಲಿರೋ ರೆಸ್ಟೋರೆಂಟ್ ಒಂದರಲ್ಲಿ ಡಿನ್ನರ್ ಮುಗಿಸಿ ಹೊರ ಬರುವಾಗ ಒಟ್ಟಿಗೆ ಕಾಣಿಸಿಕೊಂಡಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.