ಬೆಂಗಳೂರು, ( www.thenewzmirror.com) :
ಸ್ಯಾಂಡಲ್ ವುಡ್ ನಲ್ಲಿ ಶ್ಯಾನೇ ಟಾಪಾಗವ್ಳೆ ಅನ್ನೋ ಹಾಡಿನ ಮೂಲಕ ಪಡ್ಡೆ ಹುಡುಗರ ಮನಸ್ಸು ಕದ್ದಿದ್ದ ನಟಿ ಅದಿತಿ ಪ್ರಭುದೇವ.., ಲಕ್ಷಾಂತರ ಯುವಕರ ಮನಸ್ಸು ಕದ್ದಿದ್ದ ಕ್ಯೂಟ್ ನಟಿ ಇದೀಗ ಸದ್ದಿಲ್ಲದೇ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ..,
ಚಿಕ್ಕಮಂಗಳೂರಿನ ಕಾಫಿ ತೋಟದ ಮಾಲೀಕ ಯಶಸ್ ಜತೆ ಅದಿತಿ ಎಂಗೇಜ್ ಆಗಿದ್ದು, ಮೊದಲಿನಿಂದಲೂ ರೈತನನ್ನೇ ಮದುವೆ ಆಗ್ಬೇಕು ಅಂತ ಕನಸು ಇಟ್ಟುಕೊಂಡಿದ್ದರು. ಅದೇ ರೀತಿ ಇದೀಗ ರೈತನನ್ನೇ ವರಿಸಲು ನಟಿ ಮುಂದಾಗಿದ್ದಾರೆ. ದಾವಣಗೆರೆ ಮೂಲದ ಅದಿತಿ ನಾಗಕನ್ನಿಕೆ ಸೀರಿಯಲ್ ನಲ್ಲಿ ಮೊದಲು ಬಣ್ಣ ಹಚ್ಚಿದ್ರು.., ಧೈರ್ಯಂ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಕಾಲಿಟ್ಟಿದ್ದ ನಟಿ, ಸಿಂಗ, ಬಜಾರ್, ರಂಗನಾಯಕಿ, ಬ್ರಹ್ಮಚಾರಿ ಮತ್ತು ಈಗ ಬಿಡುಗಡೆಯಾಗಿರೋ ‘ಆನ’ ಚಿತ್ರದಲ್ಲಿ ನಟಿಸಿದ್ದಾರೆ. ಇದಲ್ಲದೇ ಇನ್ನೂ 12 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಅದಿತಿ ಪ್ರಭುದೇವ..,
ಸದ್ಯ ಅದಿತಿ ಪ್ರಭುದೇವ ಎಂಗೇಜ್ಮೆಂಟ್ ಮಾಡಿಕೊಂಡಿರುವ ಹುಡುಗನ ಜೊತೆ ಫೋಟೋ ಹಾಕಿಕೊಂಡು, ಒಂದು ಕನಸಿನಂತೆ ಈ ಕನಸು ನನಸಾಯಿತು ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಅದಿತಿ ಕೈಯಲ್ಲಿರುವ ಉಂಗುರ ಹೈಲೈಟ್ ಆಗಿದೆ.