![](https://thenewzmirror.com/wp-content/uploads/2021/10/IMG-20211023-WA0055-1024x472.jpg)
ಬೆಂಗಳೂರು,( www.thenewzmirror.com):
ಮಲ್ಲೇಶ್ವರಂ ಚೌಡಯ್ಯ ಸ್ಮಾರಕ ಭವನದಲ್ಲಿ ಮಂದ್ರ ಕಲ್ಚರಲ್ ಫೌಂಡೇಷನ್ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯ ಮಹನೀಯರುಗಳಿಗೆ ದಿ.|ಎಸ್.ಪಿ.ಬಾಲಸುಬ್ರಮಣ್ಯಂ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲಾಗಿತ್ತು .
ದೀಪಾ ಬೆಳಗಿಸಿ ಕಾರ್ಯಕ್ರಮವನ್ನ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಮಾಜಿ ಮಹಾಪೌರ ಗೌತಮ್ ಕುಮಾರ್ ಮತ್ತು ನಿವೃತ್ತ ಪೋಲಿಸ್ ಮಹಾ ನಿರ್ದೇಶಕ ಡಾ.ಶಂಕರ್ ಮಹದೇವ್ ಬಿದರಿ ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಮೃತ್ ರಾಜ್ ರವರು ದೀಪಾ ಬೆಳಗಿಸಿ ಉದ್ಘಾಟನೆ ಮಾಡಿದರು.
ಎಸ್.ಪಿ.ಬಾಲಸುಬ್ರಮಣ್ಯಂ ಪ್ರಶಸ್ತಿ ಪುರಸ್ಕೃತರಾದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಭರಣ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ,ದೃಶ್ಯ ಕಲಾವಿದರಾದ ಬಿ.ಕೆ.ಎಸ್.ವರ್ಮಾ ಹಾಗೂ ವೈದ್ಯರಾದ ಡಾ||ಮದನ್ ,ಸಾರ್ವಜನಿಕ ಸಂರ್ಪಕ ಅಧಿಕಾರಿ ಎಂ.ಜಿ.ಜಯರಾಂ ,ಪ್ರಸ್ ಕ್ಲಬ್ ಅಧ್ಯಕ್ಷರಾದ ಸದಾಶಿವ್ ಶೆಣೈ ,ಉದ್ಯಮಿ ಎಸ್.ವಿ.ವೆಂಕಟೇಶ್ ಮತ್ತು ಗಾಯಕರಾದ ಬಸವರಾಜ್ ಮಗಿರವರಿಗೆ ಎಸ್.ಪಿ.ಬಿ.ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮಾತನಾಡಿ ಎಸ್.ಪಿ.ಬಾಲಸುಬ್ರಮಣ್ಯರವರ ಗಾಯನ ಕ್ಷೇತ್ರದ ಅಮೂಲ್ಯ ವಜ್ರ .ನಾನಗೂ ಸಹ ಸಂಗೀತ ,ಕ್ರೀಡೆಯಲ್ಲಿ ಹೆಚ್ಚು ಆಸಕ್ತಿಇದೆ. ರಾಮಕೃಷ್ಟ ಪರಮಹಂಸ, ವಿವೇಕಾನಂದರವರ ಆದರ್ಶ ಮಾರ್ಗದರ್ಶನದಲ್ಲಿ ನನ್ನ ಜೀವನದಲ್ಲಿ ಆಳವಡಿಸಿಕೊಂಡೆ ಹಾಗೆನೇ ಎಸ್.ಪಿ.ಬಾಲಸುಬ್ರಮಣ್ಯಂ ಸಾವಿರಾರು ಗೀತೆಗಳನ್ನು ಹಾಡಿ ಕನ್ನಡಿಗರ ಮನ ಗೆದ್ದಿದಾರೆ ಅಂತ ಅಭಿಪ್ರಾಯ ಪಟ್ರು.
ನಾದಬ್ರಹ್ಮ ಹಂಸಲೇಖ ಮಾತನಾಡಿ ಮಂದ್ರ ಕಲ್ಚರಲ್ ಫೌಂಡೇಷನ್ ಕನ್ನಡ ಸಾಹಿತ್ಯ ,ಸಂಗೀತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚು ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಮೈಸೂರು ರಾಜಮನೆತನ ಅಪೂರ್ವ ಕೊಡುಗೆ ನೀಡಿದ್ದಾರೆ .ಎಸ್.ಪಿ.ಬಿ.ಎಲ್ಲ ಧರ್ಮ ,ವರ್ಗದವರ ಪ್ರೀತಿ ಗಳಿಸಿದ್ದರು .ಅವರ ಹೆಸರಿನ ಪ್ರಶಸ್ತಿ ಲಭಿಸಿರುವುದು ಸಂತೋಷದಾಯಕವಾಗಿದೆ. ಮುಂದಿನ ಜನ್ಮದಲ್ಲಿ ಕರ್ನಾಟಕದಲ್ಲಿ ಹುಟ್ಟುತ್ತೇನೆ ಎಂದು ಎಸ್.ಪಿ.ಬಿ.ಹೇಳುತ್ತಿದ್ದರು ಎಂದು ಹೇಳಿದರು.
ಟಿ.ಎಸ್.ನಾಗಭರಣ ಮಾತನಾಡಿ ಎಸ್.ಪಿ.ಬಾಲಸುಬ್ರಮಣ್ಯಂರವರು ಸಂಗೀತ ಲೋಕದ ದಿಗ್ಗಜ ಅವರ ಸ್ನೇಹ ಪಡೆದಿರುವುದು ಹೃದಯ ತುಂಬಿ ಬರುವುದು ಅದ್ಬುತ ಕ್ಷಣಗಳು .50ಸಾವಿರ ಹಾಡುಗಳುನ್ನ ಡಿಜಿಟಲ್ ಲೈಬರಿ ಸ್ಥಾಪನೆ ಕಂಪ್ಯೂಟರ್ ಆಳವಡಿಸಿದರೆ ಸಾರ್ವಜನಿಕರಿಗೆ ಅಧ್ಯಯನ ಮಾಡಲು ಸುಲಭವಾಗುತ್ತದೆ ಎಂದು ಹೇಳಿದರು.