ಬೆಂಗಳೂರು: (www.thenewzmirror.com):
ಬೆಲೆ ಏರಿಕೆ ಬಿಸಿ ನಡುವೆಯೂ ರಾಜ್ಯದ ಜನರಿಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಆಯಿತು. ಇದೀಗ ವಿದ್ಯುತ್ ದರ ಏರಿಕೆ ಸರದಿ. ಈ ತಿಂಗಳಿನಿಂದಲೇ ವಿದ್ಯುತ್ ದರ ಪ್ರತಿ ಯೂನಿಟ್ ಗೆ ಬರೋಬ್ಬರಿ 35 ಪೈಸೆ ಏರಿಕೆ ಮಾಡಿದೆ. ದರ ಏರಿಕೆಗಳ ನಡುವೆ ತತ್ತರಿಸಿರೋ ರಾಜ್ಯದ ಜನತೆಗೆ KERC ಮತ್ತೊಂದು ಶಾಕ್ ಕೊಟ್ಟಿದ್ದು, ಏಪ್ರಿಲ್ 1 ರಿಂದಲೇ ಜಾರಿಗೆ ಬರುವಂತೆ ವಿದ್ಯುತ್ ದರ ಏರಿಕೆ ಮಾಡಿದೆ.
ಬೆಲೆ ಏರಿಕೆ. ಬೆಲೆ ಏರಿಕೆ. ಬೆಲೆ ಏರಿಕೆ. ಏನು ಖರೀದಿಸಿದ್ರೂ ಬೆಲೆ ಏರಿಕೆ ಬಿಸಿ ಜನಸಾಮಾನ್ಯರಿಗೆ ತಟ್ಟುತ್ತಿದೆ. ಕಳೆದೊಂದು ವಾರದಿಂದ ಪೆಟ್ರೋಲ್, ಡೀಸೆಲ್ ದರ ಏರುತ್ತಲೇ ಇದೆ. ಯುದ್ಧದ ಪರಿಣಾಮ ಎಣ್ಣೆ ಬೆಲೆ ಏರಿಕೆಯಾಗ್ತಿದೆ. ಹೋಟೆಲ್ ನಲ್ಲಿ ದರ ಏರಿಸಲು ಮುಂದಾಗಿದೆ. ಇದೀಗ ವಿದ್ಯುತ್ ದರವನ್ನೂ ಸರ್ಕಾರ ಪ್ರತಿ ಯೂನಿಟ್ ಗೆ 35 ಪೈಸೆ ಹೆಚ್ಚಳ ಮಾಡಿದೆ. ಅಂದ್ರೆ ಈಗ ಕಟ್ಟುವ ಬಿಲ್ ಗಿಂತ ಇನ್ಮುಂದೆ ಶೇ.4.33ರಷ್ಟು ಹೆಚ್ಚು ದುಡ್ಡು ತೆರಬೇಕಾಗಿದೆ. ಈ ಕುರಿತು ಕರ್ನಾಟಕ ವಿದ್ಯುಚ್ಛಕ್ತಿ ದರ ಪರಿಷ್ಕರಣೆ ಮಾಡಿ ಅನುಮೋದಿಸಿ ಸುದ್ದಿಗೋಷ್ಟಿಯಲ್ಲಿ ಪ್ರಕಟಣೆ ಮಾಡಿದರು. ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಎಲ್ಲಾ ನಿಗಮಗಳಲ್ಲೂ ಸರಾಸರಿ 35 ಪೈಸೆ ಹೆಚ್ಚಳ ಮಾಡಲಾಗಿದೆ. ಕೇವಲ ವಿದ್ಯುತ್ ದರ ಏರಿಕೆ ಮಾತ್ರವಲ್ಲ, ವಿದ್ಯುತ್ ನಿಗದಿತ ಶುಲ್ಕವೂ ಹೆಚ್ಚಿಸಿದ್ದಾರೆ. ಫಿಕ್ಸೆಡ್ ದರವನ್ನು ಪ್ರತಿ ಹೆಚ್ ಪಿ/ಕಿ.ವ್ಯಾ/ಕೆ.ವಿ.ಎಗೆ 10 ರಿಂದ 30 ರೂಪಾಯಿಯಷ್ಟು ಏರಿಕೆ ಮಾಡಲಾಗಿದೆ. ಏಪ್ರಿಲ್ 1ರಿಂದಲೇ ಇದು ಜಾರಿಯಾಗಲಿದೆ.
2159 ಕೋಟಿ ಆರ್ಥಿಕ ಹೊರೆ ಇದ್ದಿದ್ದರಿಂದ ರಾಜ್ಯದ ಎಲ್ಲಾ ಎಸ್ಕಾಂಗಳು ಸರಾಸರಿ 183 ಪೈಸೆ ಏರಿಕೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ವು. ಅಳೆದು ತೂಗಿ ಗ್ರಾಹಕ್ರಿಗೆ ಹೆಚ್ಚಿನ ಹೊರೆಯಾಗದಂತೆ ಪ್ರತಿ ಯೂನಿಟ್ ಗೆ ಸರಾಸರಿ 35 ಪೈಸೆ ಏರಿಸಿದೆ.., ನೂತನ ದರ ಏಪ್ರಿಲ್ 1 ರಿಂದಲೇ ಪೂರ್ವಾನ್ವಯ ಆಗುವಂತೆ ಜಾರಿಯಾಗಲಿದ್ದು, ಆರ್ಥಿಕ ಹೊರೆ ತಗ್ಗಿಸೋಕೆ ಈ ತೀರ್ಮಾನ ಅಂತ KERC ಸ್ಪಷ್ಟಪಡಿಸಿದೆ.
ಯಾವ್ಯಾವುದಕ್ಕೆ ದರ ಹೆಚ್ಚಳ, ಇಳಿಕೆ?
- ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಹೆಚ್ಚಳ ಮಾಡಿಲ್ಲ
- ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ವರುಷದವರೆಗೆ ಪ್ರತಿ ಯೂನಿಟ್ ಗೆ 50 ಪೈಸೆ ರಿಯಾಯಿತಿ
- ಮಳೆಗಾಲದಲ್ಲಿ ಸಂಜೆ 4ರಿಂದ ರಾತ್ರಿ 10ರವರೆಗೆ ವಿದ್ಯುತ್ ದರ ಸಡಲಿಕೆ ಮುಂದುವರಿಕೆ
- ಹೈಟೆನ್ಶನ್ ವಿದ್ಯುತ್ ಗ್ರಾಹಕರಿಗೆ ರಾತ್ರಿ 10 ಬೆಳಗಿನವರೆಗೆ ಪ್ರತಿ ಯೂನಿಟ್ ಗೆ 2 ರೂ. ಪ್ರೋತ್ಸಾಹಧನ
- ಪೀಕ್ ಅವಧಿಯಲ್ಲಿ ಸಂಜೆ 4ರಿಂದ ರಾತ್ರಿ 10ರವರೆಗೆ ಹೈಟೆನ್ಶನ್ ವಿದ್ಯುತ್ ಗ್ರಾಹಕರಿಗೆ ಪ್ರತಿ ಯೂನಿಟ್ ಗೆ 1. ರೂ. ದಂಡ
- ಸೀಸನಲ್ ಇಂಡಸ್ಟ್ರೀಸ್ – ಪ್ರತಿ ಯೂನಿಟ್ ರೂ.1 ರಿಯಾಯಿತಿ
— ದಿನ ಬಳಕೆ ವಿದ್ಯುತ್ ಪ್ರತಿ ಯೂನಿಟ್ ಗೆ 5 ಪೈಸೆ ಹೆಚ್ಚಳ - ಫಿಕ್ಸೆಡ್ ಜಾರ್ಚ್ 10 ರೂ ನಿಂದ 20 ರೂ ಗೆ ಹೆಚ್ಚಳ
- ಸರಾಸರಿ ಯೂನಿಟ್ ದರ 35 ಪೈಸೆ ಹೆಚ್ಚಳ
- ಸಣ್ಣ ಕೈಗಾರಿಕೆಗಳಿಗೆ ೫೦ ಪೈಸೆ ರಿಯಾಯಿತಿ
- ಸೀಸನಲ್ ಕೈಗಾರಿಕೆಗಳಿಗೆ ೧ ರೂ ವಿನಾಯಿತಿ
- ಸಮಯಾಧರಿತ ವಿದ್ಯುತ್ ಬಳಕೆಯ ದರ ಯಥಾ ಸ್ಥಿತಿ
- ನವೀಕರಿಸಬಹುದಾದ ವಿದ್ಯುತ್ ಬಳಕೆಗೆ ೫೦ ಪೈಸೆ ರಿಯಾಯಿತಿ
- ೧೦ ಹೆಚ್ ಪಿ ನೀರಾವರಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್
- ಭಾಗ್ಯ ಜ್ಯೋತಿ/ ಕುಟೀರ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್
ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು 11320 ಕೋಟಿ ಕಂದಾಯ ಕೊರತೆ ನೀಗಿಸಲು ಪ್ರತಿ ಯೂನಿಟ್ ಗೆ ಸರಾಸರಿ 1.85 ಪೈಸೆ ಹೆಚ್ಚಳ ಮಾಡಲು ಅಂದ್ರೆ ಶೇ.23.83ರಷ್ಟು ದರ ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದವು. 2023 ವರ್ಷ 2159 ಕೋಟಿ ಕಂದಾಯ ಕೊರತೆ ನೀಗಿಸಲು ಪ್ರತಿ ಯೂನಿಟ್ ಗೆ 5 ಪೈಸೆ ಇಂಧನ ಶುಲ್ಕ ಹೆಚ್ಚಳ ಮಾಡಿದೆ. ಈ ಮಧ್ಯೆ ಎಲೆಕ್ಟ್ರಿಕ್ ವಾಹನ ಬಳಕೆ ಪ್ರೋತ್ಸಾಹಿಸಲಿ ಬ್ಯಾಟರಿ ಚಾರ್ಜಿಂಗ್ ಸ್ಟೇಷನ್ ವಿದ್ಯುತ್ ಬಳಕೆ ದರ ಹೆಚ್ಚಳ ಮಾಡಿಲ್ಲ. ಈ ಮೊದಲಿದ್ದಂತೆ ಯೂನಿಟ್ ಗೆ 5 ರೂ. ಇರಲಿದೆ. 26.39 ಲಕ್ಷ ಭಾಗ್ಯ ಜ್ಯೋತಿ ಹಾಗೂ ಕುಟೀರ ಜ್ಯೋತಿ ಸಂಪರ್ಕಕ್ಕೆ ಉಚಿತ ವಿದ್ಯುತ್ ಸರಬರಾಜು ಮಾಡಲು 618 ಕೋಟಿ ರೂ.ಗಳನ್ನು ಸರ್ಕಾರ ಸಹಾಯಧನ ನೀಡಬೇಕಿದೆ.
ಯಾವ ಯಾವ ವರ್ಷದಲ್ಲಿ ಎಷ್ಟು ಹೆಚ್ಚಳ?
2009 ರಲ್ಲಿ ಪ್ರತಿ ಯೂನಿಟ್ ಗೆ 34 ಪೈಸೆ ಹೆಚ್ಚಳವಾಗಿತ್ತು
2010 ರಲ್ಲಿ ಪ್ರತಿ ಯೂನಿಟ್ ಗೆ 30 ಪೈಸೆ ಏರಿಕೆ
2011 ರಲ್ಲಿ ಪ್ರತಿ ಯೂನಿಟ್ ಗೆ 28 ಪೈಸೆ
2012 ರಲ್ಲಿ ಪ್ರತಿ ಯೂನಿಟ್ ಗೆ 13 ಪೈಸೆ
2013 ರಲ್ಲಿ ಪ್ರತಿ ಯೂನಿಟ್ ಗೆ 13 ಪೈಸೆ
2017 ರಲ್ಲಿ ಪ್ರತಿ ಯೂನಿಟ್ ಗೆ 48 ಪೈಸೆ
2019 ರಲ್ಲಿ ಪ್ರತಿ ಯೂನಿಟ್ ಗೆ 35 ಪೈಸೆ
2020 ರಲ್ಲಿ ಪ್ರತಿ ಯೂನಿಟ್ ಗೆ 30 ಪೈಸೆ ಹೆಚ್ಚಳ
2021 ರಲ್ಲಿ ಪ್ರತಿ ಯೂನಿಟ್ ಗೆ 30 ಪೈಸೆ ಹೆಚ್ಚಳ
ಪ್ರತಿ ಯೂನಿಟ್ ಖರೀದಿಗೆ 6.43 ಪೈಸೆ ಆಗುತ್ತೆ. ಸರಬರಾಜು ಮಾಡಲು 8.43 ಪೈಸೆ ಖರ್ಚಾಗುತ್ತೆ. ಸರ್ಕಾರ ಹೆಚ್ಚುವರಿ ಹಣವನ್ನು ಭರಿಸಬೇಕಾಗುತ್ತದೆ. ಒಟ್ಟು ಶೇ. 13ರಷ್ಟು ವಿದ್ಯುತ್ ಸೋರಿಕೆಯಿಂದ ನಷ್ಟ ಅನುಭವಿಸುತ್ತಿದೆ. ಎಲ್ಲ ದರ ಏರಿಕೆ ಮಧ್ಯೆ ವಿದ್ಯುತ್ ದರವೂ ಏರಿಕೆ ಜನಸಾಮಾನ್ಯರ ಜೀವನ ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ.