ಬೆಂಗಳೂರು,(www.thenewzmirror.com) :
ಅಚ್ಚರಿ ಅನ್ಸಿದ್ರೂ ಇದು ಸತ್ಯ.., ಬಿಎಂಟಿಸಿ ಅಂದ್ರೆ ಅಕ್ರಮ.., ಅವ್ಯವಸ್ಥೆ ಅಂತೆಲ್ಲಾ ಹಣೆ ಪಟ್ಟಿಕಟ್ಟಿಕೊಂಡು ನಗರದಲ್ಲಿ ಓಡಾಟ ಮಾಡ್ತಿದೆ.., ಇಂಥ ಅವ್ಯವಸ್ಥೆಗೆ ಮತ್ತೊಂದು ಉದಾಹರಣೆ ಸಿಕ್ಕಿದ್ದು, ಆಡಳಿತದ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.., ಹೌದು, ಡಿಪೋ 16 ಕ್ಕೆ ಸಂಬಂಧ ಪಟ್ಟ ಬಿಎಂಟಿಸಿಯ ಬಸ್ ವೊಂದಕ್ಕೆ ಎರಡೆರಡು ನಂಬರ್ ಅನ್ನ ನೀಡಲಾಗಿದೆ.., ಬಸ್ ನ ಮುಂಭಾಗ ಒಂದು ನಂಬರ್ ಇದ್ರೆ.., ಬಸ್ ನ ಹಿಂಭಾಗ ಮತ್ತೊಂದು ನಂಬರ್ ಇದೆ..,
ಅರೇ ಇದ್ಯಾವ ಕಾನೂನು..,? ಅದ್ಯಾವಾಗಿನಿಂದ ಬಿಎಂಟಿಸಿ ಬಸ್ ಗಳಿಗೆ ಎರಡೆರಡು ನಂಬರ್ ಗಳನ್ನ ಸಾರಿಗೆ ಇಲಾಖೆ ಕೊಡ್ತಾ ಇದೆ ಅಂತ ಪ್ರಶ್ನೆ ಮಾಡ್ಬೇಡಿ.., ಯಾಕಂದ್ರೆ ನಂಬರ್ ಇರೋದು ಒಂದೇ ಆದ್ರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಎರಡು ನಂಬರ್ ಪ್ಲೇಟ್ ನೋಡೋಕೆ ಸಿಗ್ತಿದೆ..,
ಪ್ರತಿ ದಿನ ಮೆಜೆಸ್ಟಿಕ್ ಟು ಅವಲಹಳ್ಳಿ ಬಿಡಿಎ ಕಾಂಪ್ಲೆಕ್ಸ್ ನಡುವೆ ಸಂಚಾರ ಮಾಡ್ತಿರೋ ಈ ಬಸ್ ಗೆ ಎರಡು ನಂಬರ್ ಪ್ಲೇಟ್ ಇರೋದು ಗೊಂದಲಕ್ಕೂ ಕಾರಣವಾಗಿದೆ. ಏನಾದ್ರೂ ಅಫಘಾತವಾದ್ರೆ ಯಾವ ನಂಬರ್ ಗೆ ವಿರುದ್ಧ ದೂರು ಕೊಡ್ಬೇಕು ಅನ್ನೋ ಗೊಂದಲ ಉಂಟಾಗ್ತಿದೆ. ಕಾರಣ ಬಸ್ ನ ಮುಂಭಾಗ KA01F8558 ಅಂತ ಇದ್ರೆ ಬಸ್ ನ ಹಿಂಭಾಗ KA01F855 ಅಂತ ಮಾತ್ರ ಇದೆ.., ಹಾಗೆನೇ KA01F8558 ನಂಬರಿನ ಬಸ್ ನಾಲ್ಕು ಬಾರಿ, KA01F855 ನಂಬರಿನ ಬಸ್ ಎರಡು ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದೆ. ಹೀಗಿದ್ರೆ ದಂಡ ಯಾವ ನಂಬರ್ ಗೆ ಹಾಕಬೇಕು ಅನ್ನೋದೂ ಸಂಚಾರಿ ಪೊಲೀಸ್ರಿಗೆ ಗೊಂದಲ ಉಂಟಾಗ್ತಿದೆ..,
ಇನ್ನು ಡಿಪೋ ಮ್ಯಾನೇಜರ್ ಚಂದ್ರಕಲಾ ಮಾತ್ರ ತನಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ವರ್ತನೆ ಮಾಡ್ತಿದ್ದಾರಂತೆ…, ಡಿಪೋದಲ್ಲಿರೋ ಪ್ರತಿಯೊಂದು ಬಸ್ ಕೂಡ ಎಲ್ಲಾ ರೀತಿಯಲ್ಲೂ ಸಮರ್ಥವಾಗಿದ್ದಾವಾ ಅನ್ನೋದನ್ನ ನೋಡಿಕೊಂಡು ಆನಂತರ ರಸ್ತೆ ಮೇಲೆ ಓಡಿಸೋಕೆ ಅವಕಾಶ ನೀಡಬೇಕು.., ತಮ್ಮ ಕೆಳ ಹಂತದ ಅಧಿಕಾರಿಗಳ ಮೂಲಕ ಅದನ್ನ ಮಾನಿಟರ್ ಮಾಡುವ ಕೆಲ್ಸವನ್ನ ಮಾಡಬೇಕು.., ಆದ್ರೀದು ತನಗೆ ಸಂಬಂಧವೇ ಇಲ್ಲ ಎನ್ನುವ ರೀತಿ ವರ್ತನೆ ಮಾಡ್ತಿರೋದು ಅಮಾಯಕರಿಗೆ ಸಂಕಷ್ಟ ತಂದೊಡ್ಡಿದೆ..,
ಕೂಡಲೇ ನಿಗಮ ವ್ಯವಸ್ಥಾಪಕರು ಇತ್ತ ಗಮನ ಹರಿಸಬೇಕಿದೆ., ನಂಬರ್ ಪ್ಲೇಟ್ ನಲ್ಲಿ ಉಂಟಾಗಿರೋ ಎಡವಟ್ಟುಗಳನ್ನ ಸರಿಪಡಿಸೋ ಕೆಲ್ಸವನ್ನೂ ಮಾಡಬೇಕಿದೆ. ಇಲ್ಲದಿದ್ರೆ ಮುಂದೊಂದು ದಿನ ಏನಾದರೂ ಅನಾಹುತವಾದರೆ ಅದಕ್ಕೆ ಕಾರಣ ಯಾರು..? ಡಿಪೋ ಮ್ಯಾನೇಜರ್ ಚಂದ್ರಕಲಾ ಅವರಾ ಇಲ್ಲಾ ವ್ಯವಸ್ಥಾಪಕ ನಿರ್ದೇಶಕರಾ..? ಇದಕ್ಕೆ ಕಾಲವೇ ಉತ್ತರ ಕೊಡ್ಬೇಕಿದೆ.