ಒಂದೇ ವರ್ಷದಲ್ಲಿ 3255 ಕೆಜಿ ಡ್ರಗ್ಸ್‌ ವಶ

ಬೆಂಗಳೂರು, (www.thenewzmirror.com):

ಕರೋನಾ ಸಮಯದಲ್ಲಿ ಹಣ ಓಡಾಟ ನಡೆಸ್ತಿಲ್ಲ ಅಂತ ಯಾರು ಹೇಳಿದ್ದು, ಪೊಲೀಸ್ ಇಲಾಖೆಯನ್ನ ಕೇಳಿದ್ರೆ ಕರೋನಾ ಸಮಯದಲ್ಲೇ ಅತಿ ಹೆಚ್ಚು ಹಣದ ವಹಿವಾಟು ನಡೆದಿದೆ ಅಂತ ಹೇಳುತ್ತಿದ್ದಾರೆ. ಇದಕ್ಕೆ ಸೂಕ್ತ ಉದಾಹರಣೆ ಒಂದೇ ವರ್ಷದಲ್ಲಿ ಪೊಲೀಸರು ವಶ ಪಡಿಸಿಕೊಂಡ ಡ್ರಗ್ಸ್ ನ ಮಾಹಿತಿ.

RELATED POSTS

2021 ರಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳ ಮೌಲ್ಯ 45 ಕೋಟಿ ರೂಗೂ ಹೆಚ್ಚು.., ಕಳೆದೆರಡು ವರ್ಷಕ್ಕೆ ಹೋಲಿಸಿದರೆ ವಶ ಪಡಿಸಿಕೊಂಡ ಡ್ರಗ್ಸ್ ನ ಪ್ರಮಾಣ ಶೇಕಡಾ 13 ರಷ್ಟು ಹೆಚ್ಚಾಗಿದೆ.

ಹೀಗಾಗಿಯೇ ನಗರ ಪೊಲೀಸರು ಮಾದಕ ವಸ್ತುಗಳ ಮಾರಾಟ, ಸಾಗಾಟ ಮತ್ತು ವ್ಯಸನಿಗಳ ಮೇಲೆ ನಿಗಾ ಇಟ್ಟಿದ್ದಾರೆ. ಬೆಂಗಳೂರಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಬೃಹತ್ ಪ್ರಮಾಣದಲ್ಲಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತುಗಳಿಗೆ ಸಂಬಂಧಿಸಿದ 3337 ಪ್ರಕರಣ ದಾಖಲಿಸಿಕೊಂಡು 3255 ಕೆಜಿ ಮಾದಕ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 4210 ಜನರನ್ನ ಬಂಧಿಸಲಾಗಿದೆ.

ಈ ಹಿಂದಿನ ವರ್ಷಗಳ ಮಾಹಿತಿ
ವರ್ಷ ಪ್ರಕರಣ ವಶಪಡಿಸಿಕೊಂಡ ಡ್ರಗ್ಸ್
2019 768 1053 ಕೆಜಿ
2020 2766 3912 ಕೆಜಿ
2021 4210 3255 ಕೆಜಿ

ನೆರೆ ರಾಜ್ಯಗಳಿಂದ ರಾಜ್ಯಕ್ಕೆ ಕಳ್ಳ ಸಾಗಣೆ ಮೂಲಕ ಗಾಂಜಾ ಹೆಚ್ಚಾಗಿ ಸಾಗಿಸಲಾಗುತ್ತಿದೆ. ವ್ಯಾಪಾರಿಗಳು, ಗ್ರಾಹಕರಿಂದ 2021ರಲ್ಲಿ ಈವರೆಗೆ 3182 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. 2019ರಲ್ಲಿ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳಲ್ಲಿ 1047 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist