ಬೆಂಗಳೂರು, ( www.thenewzmirror.com) ;
ಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ ಕರೆ ನೀಡಲಾದ ಸಾರಿಗೆ ನೌಕರರ ಮುಷ್ಕರದ ಪೂರ್ವಭಾವಿ ಹೋರಾಟಕ್ಕೆ ಈಗಾಗಲೇ ಚಾಲನೆ ದೊರಕಿದೆ.
ಸರ್ಕಾರಿ ನೌಕರರ ಸರಿಸಮಾನ ವೇತನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನೌಕರರು ಇದೇ ತಿಂಗಳ 24 ರಂದು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಇದರ ಮೊದಲ ಹಂತವಾಗಿ ಕೆಎಸ್‌ಆರ್‌ಟಿಸಿ ನೌಕರರ ಕೂಟದ ಅಧ್ಯಕ್ಷ ಆರ್.ಚಂದ್ರಶೇಖರ್ (ಚಂದ್ರು) ಶಾಂತಿನಗರದಲ್ಲಿರುವ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಆವರಣದಲ್ಲಿ ಈಗಾಗಲೇ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಆ ಮೂಲಕ ಮಾರ್ಚ್ 24ರಿಂದ ನಡೆಯಲಿರುವ ಸಾರಿಗೆ ಮುಷ್ಕರದಲ್ಲಿ ಯಾವುದೇ ಬದಲಾವಣೆ ಇಲ್ಲ. ಬೇಡಿಕೆ ಈಡೇರುವವರೆಗೂ ಹಿಂದೆಸರಿಯುವ ಪ್ರಶ್ನೆಯೇ ಇಲ್ಲ ಎಂಬ ಸಂದೇಶ ಕೊಟ್ಟಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರೋ ನೌಕರರ ಒಕ್ಕೂಟ ಓಟ್ ಮಾಡಿ ಮುಷಗಕರ ಬೆಂಬಲಿಸಿ ಎಂಬ ಮನವಿ ಮಾಡುತ್ತಿದೆ. ಇದಕ್ಕೆ ಆನ್ ಲೈನ್ ಓಟಿಂಗ್ ವ್ಯವಸ್ಥೆ ಮಾಡಿದ್ದು, ಮುಷ್ಕರಕ್ಕೆ ಶೇಕಡಾ 99 ರಷ್ಟು ಮಂದಿ ಬೆಂಬಲ ಸೂಚಿಸಿದ್ದಾರೆ.

ನೀವೂ ಮುಷ್ಕರ ಬೆಂಲಿಸುತ್ತೀರೋ ಇಲ್ವೋ ಈ ಕೆಳಗಿನ ಲಿಂಕ್ ಒತ್ತಿ ನಿಮ್ಮ ಓಟ್ ಮಾಡಿ
https://strawpoll.com/polls/eNg69oa5jnA
ಒಂದು ವೇಳೆ ಮುಷ್ಕರ ನಡೆದಿದ್ದೇ ಆದರೆ ಯುಗಾದಿ ಹಬ್ಬಕ್ಕೆ ತೆರಳಿದವರಿಗೆ ಇದರ ಬಿಸಿ ತಟ್ಟುವ ಸಾಧ್ಯತೆ ಇದೆ.