ಬೆಂಗಳೂರು, (www.thenewzmirror.com) :
ಬಿಎಂಟಿಸಿ ಬಡ ಹಾಗೂ ಶ್ರಮಿಕ ವರ್ಗದ ಹೊಟ್ಟೆ ಮೇಲೆ ಹೊಡೆಯೋ ಕೆಲ್ಸವನ್ನ ಮಾಡಿದೆ.., ನೋಂದಾಯಿತ ಕಾರ್ಮಿಕರಿಗೆ ಕೆಲಸದ ಸ್ಥಳಗಳಿಗೆ ತೆರಳಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ಬಸ್ ಪಾಸ್ ಅನ್ನ ಕೆಲ ತಿಂಗಳ ಹಿಂದೆಯಷ್ಟೇ ನೀಡಿತ್ತು. ಆದ್ರೀಗ ಅದನ್ನ ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ರದ್ದು ಮಾಡಿದೆ.
ಕಾರ್ಮಿಕ ಇಲಾಖೆಯಿಂದ ನೀಡಿದ್ದ ಬಸ್ ಪಾಸ್ ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳೂ ಕೇಳಿಬಂದಿದ್ವು.., ಶ್ರಮಿಕ ಹಾಗೂ ಬಡ ವರ್ಗದವ್ರಿಗೆ ಪಾಸ್ ನೀಡಿದ್ದೀವಿ ಅಂತ ಸರ್ಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿತ್ತು. ಇತರರು ಇನ್ನೇನು ಬೆನ್ನು ತಟ್ಟಬೇಕು ಅಂತ ಅನ್ಕೊಳ್ತಿರುವಾಗ್ಲೇ ಯೋಜನೆಯನ್ನೇ ರದ್ದು ಮಾಡಿರೋದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.
ಲಕ್ಷಾಂತರ ಕಟ್ಟಡ ಕಾರ್ಮಿಕ್ರು ಸರ್ಕಾರಿ ಸಂಸ್ಥೆಯ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಾ ಇದ್ರು.., ಸಹಾಯ ಹಸ್ತ ಪಾಸ್ ಹೆಸರಿನಲ್ಲಿ ನೀಡಿದ್ದ ಬಸ್ ಪಾಸ್ ಅನ್ನ ಜೂನ್ 1 ರಿಂದ ಜಾರಿಗೆ ಬರುವಂತೆ ವಾಪಾಸ್ ಪಡೆದುಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಹೇಗಿತ್ತು ಯೋಜನೆ..?
ಕಾರ್ಮಿಕರಿಗೆ ಬಿಎಂಟಿಸಿಯಿಂದ ನೀಡಿರುವ ಪಾಸ್‌ನಲ್ಲಿ ಯಾವುದೇ ಮಿತಿ ಇಲ್ಲ. ನಗರದಾದ್ಯಂತ ಬಿಎಂಟಿಸಿ (ಸಾಮಾನ್ಯ ಬಸ್) ಬಸ್‌ಗಳಲ್ಲಿ ಸಂಚರಿಸಬಹುದು. ಆದರೆ. ಕೆಎಸ್‌ಆರ್‌ಟಿಸಿ ಬಸ್ ಪಾಸ್‌ನಲ್ಲಿ ನಿರ್ದಿಷ್ಟ ದೂರದ ಮಿತಿ ವಿಧಿಸಲಾಗುತ್ತಿದೆ. ಕಾರ್ಮಿಕ ವಾಸವಿರುವ ಸ್ಥಳದಿಂದ 50 ಕಿ.ಮೀ ವ್ಯಾಪ್ತಿಯಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಮಾಡಿಕೊಡಲು ಚರ್ಚಿಸಲಾಗಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು. ರಾಜ್ಯದ ಶ್ರಮಿಕ ವರ್ಗದ ಕ್ಷೇಮಕ್ಕೆ ಶ್ರಮಿಸುತ್ತಿರುವ ಕಾರ್ಮಿಕ ಇಲಾಖೆಯ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಇದಾಗಿತ್ತು.