ಬೆಂಗಳೂರು, (www.thenewzmirror.com):
ಇಡೀ ಜಗತ್ತನ್ನು ನಡುಗಿಸಿದ್ದ ಡೆಲ್ಟಾ ರೂಪಾಂತರಿ ಕೊರೋನಾ ವೈರಸ್ಗಿಂತಲೂ ಬಹಳ ಅಪಾಯಕಾರಿ ಎನಿಸಿರುವ Omicron ಹೆಸರಿನ ರೂಪಾಂತರಿ ವೈರಸ್ ಇದೀಗ ವಿಶ್ವಾದ್ಯಂತ ಪಸರಿಸಲು ಆರಂಭಿಸಿದೆ. ಕರ್ನಾಟಕದಲ್ಲಿ ಈಗಲೇ ಕಟ್ಟೆಚ್ಚರಿಕೆ ವಹಿಸಲಾಗುತ್ತಿದೆ. ಇದ್ರ ಎಫೆಕ್ಟ್ ಇದೀಗ ಕಡಲೇಕಾಯಿ ಪರೀಷೆ ಮೇಲೂ ತಟ್ಟೋ ಸಾಧ್ಯತೆಯಿದೆ.
ಈ ಕುರಿತಂತೆ ಚಂದ್ರಶೇಖರ್ ಎನ್ನುವವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದು, ಕಡಲೇಕಾಯಿ ಪರೀಷೆ ನಿಲ್ಲಿಸಿ, ಏಕೆಂದರೆ ಹೊಸ ರೂಪಾಂತರಿ ಕರೋನಾ ಅತ್ಯಂತ ಅಪಾಯಕಾರಿ ಎಂಬ ವಿಚಾರ ಕೇಂದ್ರ ಸರ್ಕಾರ ತಿಳಿಸಿದೆ, ಇನ್ನೂ ಜನರ ಪ್ರಾಣದ ಮೇಲೆ ತಮ್ಮ ಸರ್ಕಾರಕ್ಕೆ ಗೌರವ ಇದ್ದರೆ, ಎಲ್ಲಾ ರೀತಿಯ ಜಾತ್ರೆ, ಸಮಾರಂಭ, ಚುನಾವಣೆ ಎಲ್ಲವನ್ನೂ ತಕ್ಷಣವೇ ಬಂದ್ ಮಾಡಿ ಇಲ್ಲದೇ ಹೋದರೆ ಸ್ಮಶಾನದ ಸಂಖ್ಯೆ ಹೆಚ್ಚಿಸಿ ಅಂತ ಮನವಿ ಮಾಡಿದ್ದಾರೆ.