ಮುಂಬೈ, (www.thenewzmirror.com) :
ಗಾನ ನಿಲ್ಲಿಸಿದ ಭಾರತೀಯ ಸಮಗೀತ ಲೋಕದ ಸರಸ್ವತಿ ಹಿಂದಿ ಚಿತ್ರರಂಗದ ಸ್ವರ ಸರಸ್ವತಿ ಲತಾ ಮಂಗೇಷ್ಕರ್ ನಿಧನರಾಗಿದ್ದಾರೆ.
92ನೇ ವಯಸ್ಸಲ್ಲಿ ಇಹಲೋಕ ಯಾತ್ರೆ ಮುಗಿಸಿದ ಲತಾ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 1942ರಲ್ಲಿ ಗಾಯನ ವೃತ್ತಿ ಆರಂಭಿಸಿದ್ದ ಲತಾ ಮಂಗೇಷ್ಕರ್ 13ನೇ ವಯಸ್ಸಿನಲ್ಲೇ ಲತಾ ದೀದಿಯ ವೃತ್ತಿಜೀವನ ಆರಂಭವಾಗಿತ್ತು.
ರಂಗನಟ ಪಂಡಿತ್ ದೀನಾನಾಥ್ ಮಂಗೇಶ್ಕರ್ ಅವರ ಪುತ್ರಿಯಾಗಿದ್ದ ಲತಾಗೆ ತಂದೆ ತಾಯಿ ಇಟ್ಟ ಹೆಸರು ಹೇಮಾ ಅಂತ.
ಲತಾ ಮಂಗೇಶ್ವರ್, ದೇಶ ವಿದೇಶದ ಸುಮಾರು 36 ಭಾಷೆಗಳಲ್ಲಿ ಲತಾ ಹಾಡಿದ್ದಾರೆ. 30,000ಕ್ಕೂ ಹೆಚ್ಚು ಗೀತೆಗಳನ್ನು ಇದೂವರೆಗೂ ಗಾನ ಕೋಗಿಲೆ ಕಂಠದಿದಂ ಬಂದಿದೆ.., ಕನ್ನಡದಲ್ಲೂ ಒಂದು ಹಾಡನ್ನ ಹಾಡಿದ್ದರು ಗಾನಸುಧೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಲತಾ ಗಾನಸುಧೆ ‘ಬೆಳ್ಳನೆ ಬೆಳಗಾಯಿತು’ ಎಂಬ ಗೀತೆಗೆ ಸ್ವರ ತುಂಬಿದ್ದರು. ಅವರ ಕಂಠ ಸಿರಿಗೆ ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ. ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಯ ಕಿರೀಟ ಸಿನಿರಂಗದ ಅತ್ಯುನ್ನತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಗರಿಯೂ ಸಂದಿದೆ.
‘ಯೇ ಮೇರೆ ವತನ್ ಕೆ ಲೋಗೋ’ ಅತ್ಯಂತ ಜನಪ್ರಿಯ ಗೀತೆ ‘ಲಗ್ ಜಾ ಗಲೇ’, ‘ಯೇ ಗಲಿಯಾನ್ ಯೇ ಚೌಬಾರಾ’, ‘ಪ್ಯಾರ್ ಕಿಯಾ ತೊ ಡರ್ನಾ ಕ್ಯಾ’, ‘ಬಹೋನ್ ಮೇ ಚಲೇ ಆವೋ’, ವೀರ್ ಜರಾ ಚಿತ್ರದ ‘ತೇರೆ ಲಿಯೇ’ ಲತಾ ಅವ್ರ ಜನಪ್ರಿಯ ಹಾಡುಗಳು.
ಮಾಸ್ಟರ್ ವಿನಾಯಕ್ ರ ಬಡಿ ಮಾ ಚಿತ್ರದಲ್ಲಿ ಲತಾ ದೀದಿ ಅಭಿನಯವನ್ನೂ ಮಾಡಿದ್ದರು. ಗುಲಾಮ್ ಹೈದರ್ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಬೆಸ್ಟ್ ಮ್ಯೂಸಿಕ್ ಕಂಪೋಸರ್ ಅನ್ನೋ ಖ್ಯಾತಿಗೆ ಒಳಗಾಗಿದ್ರು.
ಕೋಟ್ಯಾಂತರ ಹೃದಯಗಳ ಮನಸುಗೆದ್ದಿರೋ ಲತಾ ಅವ್ರು ಆರಂಭದಲ್ಲಿ ಸಾಕಷ್ಟು ನೋವುಗಳನ್ನ ಅನುಭವಿಸಿದ್ದರು. ಲತಾ ದೀದಿ ವಾಯ್ಸ್ ಸಿಕ್ಕಾಪಟ್ಟೆ ಥಿನ್ ಆಗಿದೆ ಎಂದು ರಿಜೆಕ್ಟ್ ಮಾಡಲಾಗಿತ್ತಂತೆ.
ಇನ್ನು ಲತಾ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ಮೋದಿ, ರಾಷ್ಟ್ರಪತಿ, ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಲತಾ ಅವರ ಇತಿಹಾಸ
- 1929 ಸೆಪೆಂಬರ್ 28ರಂದು ಜನನ
- ಮಧ್ಯಪ್ರದೇಶದ ಇಂದೋರ್‍ನಲ್ಲಿ ಜನನ
- ಹಿನ್ನಲೆ ಗಾಯಕಿ ಹಾಗೂ ಸಂಗೀತ ನಿರ್ದೇಶಕಿ
- 1000ಕ್ಕೂ ಹೆಚ್ಚು ಹಿಂದಿ ಸಿನಿಮಾಗಳಿಗೆ ಹಾಡಿದ್ದಾರೆ
- 36 ಭಾಷೆಗಳಲ್ಲಿ – 30 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
- ಲತಾ ತಂದೆ – ಪಂಡಿತ್ ದೀನಾನಾಥ್ ಮಂಗೇಶ್ಕರ್
ಲತಾ ತಾಯಿ- ಶೇವಂತಿ - ಲತಾ ಮಂಗೇಶ್ಕರ್ ತಂದೆ ಶಾಸ್ತ್ರೀಯ ಸಂಗೀತಗಾರರು ಮತ್ತು ರಂಗಭೂಮಿ ನಟರು
- ಲತಾಮಂಗೇಶ್ಕರ್ ಗೆ ತಂದೆಯೇ ಸಂಗೀತದ ಮೊದಲ ಗುರು
- ಲತಾ ಮಂಗೇಶ್ಕರ್ ತಂದೆ – ಜಲವಂತ್ ಸಂಗೀತ್ ಮಂಡಳಿಯನ್ನು ನಡೆಸುತ್ತಿದ್ರು.
- 1942ರಲ್ಲಿ ಲತಾ 13ವರ್ಷದವರಾಗಿದ್ದಾಗ ತಂದೆ ಹೃದಯಾಘಾತದಿಂದ ಸಾವಿಗೀಡಾಗಿದ್ರು.
- ತಂದೆ ಕಾಲವಾದ ಬಳಿಕ ಲತಾ ಮಂಗೇಶ್ಕರ್ ಗೆ ಮಾಸ್ಟರ್ ವಿನಾಯಕ್ ನೆರವಿಗೆ ಬಂದರು
- ಮಾಸ್ಟರ್ ವಿನಾಯಕ್- ನವಯುಗ್ ಛತ್ರಪತಿ ಮರಾಠಿ ಮೂವೀ ಕಂಪೆನಿಯ ಓನರ್ ಆಗಿದ್ದರು ಜೊತೆಗೆ ಮಂಗೇಶ್ಕರ್ ಕುಟುಂಬಕ್ಕೆ ಆಪ್ತರಾಗಿದ್ದರು.
- ತಂದೆಯನ್ನು ಕಳೆದುಕೊಂಡಿದ್ದ ಲತಾಗೆ ಗಾಯಕಿಯಾಗಿ ಮತ್ತು ನಾಯಕಿಯಾಗಿ ವೃತ್ತಿಯನ್ನು ಆರಂಭ ಮಾಡುವುದಕ್ಕೆ ಮಾಸ್ಟರ್ ವಿನಾಯಕ್ ಸಹಾಯ ಮಾಡ್ತಾರೆ.
- 1942ರಲ್ಲಿ ಕಿಟಿ ಹಸಾಲ್ ಎನ್ನುವ ಮರಾಠಿ ಚಿತ್ರಕ್ಕೆ ಹಾಡ್ತಾರೆ. ಆದರೆ ಈ ಹಾಡನ್ನು ಸಿನಿಮಾದಿಂದ ಕೈ ಬಿಡಲಾಗುತ್ತೆ.
- ಕೊನೆಗೆ ಮಾಸ್ಟರ್ ವಿನಾಯಕ್ ಅವರು ತಮ್ಮದೇ ನಿರ್ಮಾಣ ಕಂಪನೆಯಲ್ಲಿ ತಯ್ಯಾರಾಗುತ್ತಿದ್ದ `ಪಾಹಿಲ್ ಮಂಗಾಲ – ಗೌರ್’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಅವಕಾಶ ನೀಡ್ತಾರೆ.
- `ನಟಾಲಿ ಚೈತ್ರಾಚಿ ನವಲಾಲಿ’ ಹಾಡಿಗೆ ಧ್ವನಿಯಾಗ್ತಾರೆ.
- 1943ರಲ್ಲಿ `ಗಜಬಾಹು’ ಮರಾಠಿ ಚಿತ್ರದ ಏಕ್ ಸಪೂತ್ ದುನಿಯಾ ಬದಲ್ ದೇ ತು’ ಹಾಡಿಗೆ ಕಂಠಕುಣಿಸ್ತಾರೆ.
- 1945ರಲ್ಲಿ ಲತಾ ಮುಂಬೈಗೆ ಶಿಫ್ಟ್ ಆಗ್ತಾರೆ. ಮಾಸ್ಟರ್ ವಿನಾಯಕ್ ಹೆಡ್‍ಕ್ವಾರ್ಟರ್ಸ್ ಮುಂಬೈ ನಲ್ಲಿರುತ್ತೆ.