ಬೆಂಗಳೂರು, (www.thenewzmirror.com) :
ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಮೊದಲ ಬಾರಿಗೆ ಕನ್ನಡಿಗ ಕೆ. ಎಲ್ . ರಾಹುಲ್ ಗೆ ನಾಯಕನ ಪಟ್ಟ ಲಭಿಸಿದೆ.
ಮಂಡಿನೋವಿನಿಂದ ಬಳಲುತ್ತಿರೋ ರೋಹಿತ್ ಚೇತರಿಸಿಕೊಳ್ಳದ ಹಿನ್ನಲೆಯಲ್ಲಿ ರೋಹಿತ್ ಶರ್ಮಾ ಬದಲಿಗೆ ಕೆಎಲ್ ರಾಹುಲ್ ಏಕದಿನ ತಂಡವನ್ನು ಮುನ್ನಡೆಸುವ ಅವಕಾಶ ಲಭಿಸಿದೆ. ಹಾಗೆನೇ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾಗೆ ಉಪನಾಯಕನ ಪಟ್ಟ ಒಲಿದು ಬಂದಿದೆ.
ಏಕದಿನ ಸರಣಿಗೆ ತಂಡ- ಕೆಎಲ್ ರಾಹುಲ್, ಶಿಖರ್ ಧವನ್, ರಿತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ಪಂತ್, ಇಶಾನ್ ಕಿಶನ್, ಆರ್ ಅಶ್ವಿನ್, ಯುಜ್ವೇಂದ್ರ ಚಹಾಲ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್, ಸಿರಾಜ್..,
ಟೆಸ್ಟ್ ಸರಣಿಯ ನಂತರ, ODI ಸರಣಿಯು ಜನವರಿ 19 ರಿಂದ ಪಾರ್ಲ್‌ನ ಬೋಲ್ಯಾಂಡ್ ಪಾರ್ಕ್‌ನಲ್ಲಿ ಪ್ರಾರಂಭವಾಗಲಿದೆ. ಎರಡನೇ ಏಕದಿನ ಪಂದ್ಯ ಕೂಡ ಇದೇ ಮೈದಾನದಲ್ಲಿ ಜನವರಿ 21 ರಂದು ನಡೆಯಲಿದೆ. ಅಂತಿಮ ಏಕದಿನ ಪಂದ್ಯ ಜನವರಿ 23 ರಂದು ಕೇಪ್ ಟೌನ್‌ನಲ್ಲಿ ನಡೆಯಲಿದೆ.