ಬೆಂಗಳೂರು,(www.thenewzmirror.com):
ವಿಧಾನಪರಿಷತ್ ನ ವಿಪಕ್ಷ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸಿಎಂ ಇಬ್ರಾಹಿಂ ಗೆ ನಿರೀಕ್ಷೆಯಾಗಿದೆ. ಸಿದ್ಧರಾಮಯ್ಯ ಮೇಲೆ ಇಟ್ಟಿದ್ದ ನಂಬಿಕೆ ಈ ಮೂಲಕ ಕಡಿಮೆಯಾಗಿದ್ದು ಶೀಘ್ರದಲ್ಲೇ ಕಾಂಗ್ರೆಸ್ ತೊರೆಯುವ ಮಾತನ್ನಾಡಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವ್ರು, AICC ಪರಿಷತ್ ವಿಪಕ್ಷ ನಾಯಕರಾಗಿ ಬಿಕೆ ಹರಿಪ್ರಸಾದ್ರವರನ್ನು ನೇಮಕ ಮಾಡಿದೆ. ಇದನ್ನ ಸ್ವಾಗತ ಮಾಡುವುದಾಗಿ ತಿಳಿಸಿದ ಇಬ್ರಾಹಿಂ, ಮುಂದಿನ ನಡೆಯನ್ನ ಶೀಘ್ರದಲ್ಲೇ ತಿಳಿಸೋದಾಗಿ ಹೇಳಿದ್ದಾರೆ.
ಸದ್ಯದ ವೆಳವಣಿಗೆ ಆಧಾರದ ಮೇಲೆ ಹೇಳೋದಾದ್ರೆ ನನಗೂ ಕಾಂಗ್ರೆಸ್ ಗೂ ಮುಗಿದ ಅಧ್ಯಾಯವಾಗಿದೆ. ಸಿದ್ದುಗಾಗಿ ನಾನು ದೇವೇಗೌಡರನ್ನ ಬಿಟ್ಟು ಬಂದೆ ಅಂತ ತಮ್ಮ ರಾಜಕೀಯ ಇತಿಹಾಸವನ್ನ ನೆನಪಿಸಿಕೊಂಡರು.
ಚಾಮುಂಡಿ ಕ್ಷೇತ್ರದಲ್ಲಿ ಸಿದ್ಧರಾಮಯ್ಯ ಸೋಲುತ್ತಾರೆ ಅನ್ನೋದು ನನಗೆ ಮೊದಲೇ ತಿಳಿದಿತ್ತು. ಹೀಗಾಗಿ ನಾನೇ ಬಾದಾಮಿಯಲ್ಲಿ ನಿಲ್ಲುವಂತೆ ಸಲಗೆ ಕೊಟ್ಟಿದ್ದಲ್ಲದೆ ಗೆಲ್ಲಿಸೋ ಕೆಲ್ಸವನ್ನೂ ಮಾಡಿದೆ ಎಂದು ಮಾಹಿತಿ ನೀಡಿದ್ರು.
ಮಮತಾ ಬ್ಯಾನರ್ಜಿಯವರ TMC, ಮುಲಾಯಂ ಸಿಂಗ್ ಯಾದವ್ ಅವ್ರ SP ಪಕ್ಷಗಳಿಂದ ಆಫರ್ ಬಂದಿದ್ದು ದೇವೇಗೌಡರ ಜತೆ ಮೊದಲು ಚರ್ಚೆ ನಡೆಸಿ ಅವರ ಅಭಿಪ್ರಾಯ ಪಡೆದು ನಾನು ಮುಂದಿನ ನಡೆ ಇಡುತ್ತೇನೆ ಎಂದು ಕಾಂಗ್ರೆಸ್ ತ್ಯಜಿಸುವ ಕುರಿತಂತೆ ಮಾಹಿತಿ ನೀಡಿದರು.