ಬೆಂಗಳೂರು, (www.thenewzmirror.com):
ಹೊರವಲಯದಲ್ಲಿ ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
KA-02 MM- 7749 ಕಾರಿನಲ್ಲಿದ್ದ, ನಿಖಿತಾ ರಾಣಿ (29), ವೀಣಮ್ಮ(42), ಇಂದ್ರಕುಮಾರ್ (14) ಕೀರ್ತಿಕುಮಾರ್ (40), KA 05 MJ 9924 ಕಾರಿನಲ್ಲಿದ್ದ ಟೊಯೋಟಾ ಕಂಪೆನಿಯ ಸಿಬ್ಬಂದಿ ಟಿ.ಜೆ ಶಿವಪ್ರಕಾಶ್, ಬೈಕ್ ನಲ್ಲಿದ್ದ ಜಿತಿನ್ ಬಿ. ಜಾರ್ಜ್ ಮೃತ ಸವಾರರು. ಒಟ್ಟು ಆರು ಮಂದಿ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕುಂಬಳಗೋಡಿನ ಕಣಿಮಿಣಿಕೆ ಬಳಿ ಘಟನೆ ನಡೆದಿದೆ.., ರಸ್ತೆ ಕಾಮಗಾರಿಯೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ರಸ್ತೆ ಕಾಮಗಾರಿ ನಡೆಯುತ್ತಿತ್ತು, ವೇಗವಾಗಿ ಬಂದ ಲಾರಿ ಕಂಟ್ರೋಲ್ ತಪ್ಪಿ ಪಲ್ಟಿಯಾಗಿದೆ. ಆಗ ಜಲ್ಲಿ ತುಂಬಿದ್ದ ಲಾರಿ ಪಲ್ಟಿಯಾಗಿ ಎರಡು ಕಾರು, ಒಂದು ಬೈಕ್ ಮೇಲೆ ಬಿದ್ದಿದೆ. ಈ ವೇಳೆ ಪಕ್ಕದಲ್ಲಿ ನಿಂತಿದ್ದ ಇತರೇ ವಾಹನಗಳು ಜಖಂ ಆಗಿವೆ.
ಆರು ಮೃತದೇಹಗಳನ್ನು ರಾಜರಾಜೇಶ್ವರಿ ನಗರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪಘಾತದ ಸ್ಥಳದಿಂದ ಎರಡು ಕಡೆಗಳಲ್ಲಿ ಸುಮಾರು ಐದು ಕಿಲೋಮೀಟರ್ ನಷ್ಟು ಟ್ರಾಫಿಕ್ ಜಾಮ್ ಆಗಿತ್ತು. ಸದ್ಯ ಲಾರಿಯನ್ನು ಕ್ರೆನ್ ಮೂಲಕ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.