ಬೆಂಗಳೂರು, (www.thenewzmirror.com) :
ಬೆಂಗಳೂರು ಕರೋನಾ ಹಾಟ್ ಸ್ಪಾಟ್ ಆಗ್ತಿದ್ಯಾ ಅನ್ನೋ ಅನುಮಾನ ಮೂಡ್ತಿದೆ. ಕಳೆದ 11ದಿನದಲ್ಲಿ ಬರೋಬ್ಬರಿ 62691 ಕರೋನಾ ಸೋಂಕು ರಾಜ್ಯದಲ್ಲಿ ಪತ್ತೆಯಾಗಿದೆ.
ದಿನದಿಂದ ದಿನಕ್ಕೆ ಏರಿಕೆ ಕಾಣ್ತಿರೋ ಸೋಂಕಿತರ ಸಂಖ್ಯೆಯಿಂದ ಆರೋಗ್ಯ ಇಲಾಖೆಯ ನಿದ್ದೆಕೆಡಿಸಿದ್ದು, ಇನ್ನಷ್ಟು ಟೈಟ್ ರೂಲ್ಸ್ ತರೋ ನಿಟ್ಟಿನಲ್ಲಿ ಚಿಂತನೆ ನಡಸುತ್ತಿದೆ.
ಅಷ್ಟೇ ಅಲ್ದೆ ಕಳೆದ 11 ದಿನದಲ್ಲಿ ಶೇಕಾಡ 6% ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದು ನೆಮ್ಮದಿಯ ವಿಚಾರವಾಗಿದ್ರೆ ಲಸಿಕೆ ಪಡೆದವರಲ್ಲಿ ಬಾಧತೆ ಕಡಿಮೆ ಎಂದು ಹೇಳಲಾಗುತ್ತಿದೆ.
ಹೋಂ ಐಸೋಲೇಷನ್ ಗೆ ಹೆಚ್ಚಿನ ಒಲವು ತೋರಿದ್ದರಿಂದ ಕೋವಿಡ್ ಕೇರ್ ಸೆಂಟರ್ (CCC) ಕಡೆ ಹೆಚ್ಚು ಸೋಂಕಿತರು ಮನಸು ಮಾಡುತ್ತಿಲ್ಲ.
ಕಳೆದ 11 ದಿನದ ಅಂಕಿ ಅಂಶ
ಆಕ್ಟಿವ್ ಕೇಸ್ – 74 ಸಾವಿರ
ಆಸ್ಪತ್ರೆ ಚಿಕಿತ್ಸೆ ಯಲ್ಲಿ – 3761
ಹೋಮ್ ಕ್ಯಾರೆಂಟೈನ್ – 57 ಸಾವಿರ
ಕರೊನಾ CCC – 425
ಆಸ್ಪತ್ರೆ ಸೋಂಕಿತರಲ್ಲಿ ವಿವಿಧ ಚಿಕಿತ್ಸೆ
ಸಾಮಾನ್ಯ ಹಾಸಿಗೆ – 3511
ಆಕ್ಸಿಜನ್ ಹಾಸಿಗೆ -178
ಐಸಿಯು -53
ವೆಂಟಿಲೇಟರ್ -19