ಕೊನೆಗೂ ರದ್ದಾಯ್ತು KSRTC ಯಲ್ಲಿದ್ದ ಆ ಹುದ್ದೆ…!

ಬೆಂಗಳೂರು, (www.thenewzmirror.com):

ನಾಲ್ಕೂ ಸಾರಿಗೆ ನಿಗಮಗಳನ್ನ ವಿಲೀನ ಮಾಡಿ.. ಆ ಮೂಲಕ ಆರ್ಥಿಕ ಹೊರೆ ತಗ್ಗಿಸಿ ಅಂತ ಇತ್ತೀಚೆಗೆ ಸರ್ಕಾರ ನೇಮಕಮಾಡಿರೋ ಸಮಿತಿಯೊಂದಕ್ಕೆ ಸಾರಿಗೆ ನೌಕರರ ಸಂಘಟನೆಗಳು ಮನವಿಯೊಂದನ್ನ ಕೊಟ್ಟಿತ್ತು.

RELATED POSTS

ಇದರ ಬೆನ್ನಲ್ಲೇ ಇತ್ತೀಚೆಗೆ ಸಮಿತಿಯ ಮುಖ್ಯಸ್ಥರು ಸಿಎಂ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ಎಂಡಿಗಳ ಜತೆ ಸಭೆಯನ್ನೂ ನಡೆಸಿದ್ದರು.

ಸಭೆ ಆಗ್ತಾ ಇದ್ದಂತೆ ಸಾರಿಗೆ ನಿಗಮಗಳ ಆರ್ಥಿಕ ಪುನಶ್ಚೇತ್ಯನ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು, ಇದರ ಮೊದಲ ಹೆಜ್ಜೆ ಎನ್ನುವಂತಹ ಬದಲಾವಣೆ KSRTCಯಲ್ಲಿ ನಡೆದಿದ್ದು ಸಾರಿಗೆ ನೌಕರರ ಮನದಲ್ಲಿ ಆಶಾಭಾವನೆ ಮೂಡಿದೆ.

ಸದ್ಯ ನಾಲ್ಕೂ ನಿಗಮಗಳ ಬಾಸ್ ಅಂತ ಕರೆಸಿಕೊಳ್ಳೋದು KSRTC. ನಾಲ್ಕೂ ನಿಗಮಗಳಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಕಾದ್ರೂ KSRTC ಎಂಡಿ ಅದರ ಒಂದು ಭಾಗವಾಗಿರ್ತಾಇದ್ರು. ಇಂಥ ಬಾಸ್ ನಿಗಮದಲ್ಲಿ ಕಳೆದ ಹಲವು ವರ್ಷಗಳಿಂದ ಹೆಚ್ಚುವರಿ ಹುದ್ದೆ ಸೃಷ್ಟಿಮಾಡಲಾಗಿತ್ತು.

ಸಿಬ್ಬಂದಿ ಮತ್ತು ಪರಿಸರ ನಿರ್ದೇಶಕ. ಇದಕ್ಕೊಬ್ಬರು IAS ಅವರಿಗೆ ಒಂದು ಕಚೇರಿ ಆಳು ಕಾಳು, ಸರ್ಕಾರಿ ಕಾರು ಅಂತೆಲ್ಲಾ ವರ್ಷಕ್ಕೆ ಲಕ್ಷಗಟ್ಟಲೇ ಖರ್ಚು ಮಾಡಲಾಗುತ್ತಿತ್ತು‌. ಇದರ ಜತೆಗೆ ಭದ್ರತೆ ಮತ್ತು ಜಾಗೃತ ದಳ ಅನ್ನೋ ಮತ್ತೊಂದು ಇಲಾಖೆ. ಇದಕ್ಕೊಬ್ಬರು IAS ಅವರಿಗೆ ಒಂದು ಕಚೇರಿ ಆಳು ಕಾಳು, ಸರ್ಕಾರಿ ಕಾರು ಅಂತೆಲ್ಲಾ ವರ್ಷಕ್ಕೆ ಲಕ್ಷಗಟ್ಟಲೇ ಖರ್ಚು ಮಾಡಲಾಗುತ್ತಿತ್ತು‌.

ಸಿಬ್ಬಂದಿ ಮತ್ತು ಪರಿಸರ ನಿರ್ದೇಶಕರು, ಸಿಬ್ಬಂದಿಯ ನೇಮಕಾತಿ, ಪರಿಸರಕ್ಕೆ ಸ್ನೇಹಿಯಾಗುವ ಯೋಜನಗೆಗಳನ್ನ ಜಾರಿಗೆ ತರುವ ಹೊಣೆ ಹೊತ್ತು ಕೆಲ್ಸ ಮಾಡ್ತಾ ಇದ್ರು. ಇನ್ನು ಭದ್ರತೆ ಮತ್ತು ಜಾಗೃತ ದಳದ ನಿರ್ದೇಶಕರು ನಿಗಮದಲ್ಲಿ ಆಗ್ತಿದ್ದ ಅಕ್ರಮ, ನಿಗಮದ ಡಿಪೋಗಳಿಗೆ, ಪ್ರಯಾಣಿಕರಿಗೆ ಅಗತ್ಯವಿರೋ ಭದ್ರತೆ ಅಕ್ರಮ ನಡೆಯುತ್ತಿದ್ದರೆ ಅದನ್ನ ತಡೆಯೋ ಜವಾಬ್ದಾರಿ ನಿರ್ವಹಣೆ ಮಾಡ್ತಾ ಇದ್ರು.

ಆದ್ರೆ ಇನ್ಮುಂದೆ ಸಿಬ್ಬಂದಿ ಮತ್ತು ಪರಿಸರ ಹಾಗೂ ಭದ್ರತೆ ಮತ್ತು ಜಾಗೃತ ದಳ ಅಂತ ಎರಡು ಇಲಾಖೆ ಇರೋದಿಲ್ಲ. ಬದಲಾಗಿ ಇವೆರಡೂ ಇಲಾಖೆಗಳನ್ನ ವಿಲೀನ ಗೊಳಿಸಿ ಪರಿಸರ ಮತ್ತು ಜಾಗೃತ ದಳ ಅಂತ ಒಂದೇ ಇಲಾಖೆ ಮಾಡಲಾಗಿದೆ.

ವಿಲೀನ ಕುರಿತಂತೆ ಹೊರಡಿಸಿರುವ ಆದೇಶದ ಪ್ರತಿ

ಈ ಕುರಿತಂತೆ ಆದೇಶ ಹೊರಬಿದ್ದಿದ್ದು ಎರಡೂ ಇಲಾಖೆಗಳಿಗೆ ಒಬ್ಬರೇ IAS ಅಧಿಕಾರಿ ಜವಾಬ್ದಾರಿ ನಿರ್ವಹಣೆ ಮಾಡಲಿದ್ದಾರೆ.

ನಿಗಮದ ದೃಷ್ಟಿಯಿಂದ ಆರ್ಥಿಕ ಹೊರೆ ತಗ್ಗಿಸೋ ಕೆಲ್ಸ ಅಂತ ಹೇಳಾಗುತ್ತಿದೆಯಾದರೂ ನಾಲ್ಕೂ ನಿಗಮಗಳ ವಿಲೀನ ಮಾಡಬೇಕೆಂಬ ಕೂಗಿಗೆ ಇದು ಮೊದಲ ಹೆಜ್ಜೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಈ ರೀತಿ ಕೇವಲ KSRTC ಅಷ್ಟೇ ಅಲ್ಲ ಬಿಎಂಟಿಸಿ ಸೇರಿದಂತೆ ಉಳಿದ ಮೂರು ಇಲಾಖೆಗಳಲ್ಲೂ ಇಂಥದ್ದೇ ಆರ್ಥಿಕ‌ಹೊರೆ ಹುದ್ದೆಗಳಿವೆ. ಅವುಗಳನ್ನೂ ಶೀಘ್ರವೇ ವಿಲೀನ ಮಾಡಿದರೆ ನಷ್ಟದಲ್ಲಿರೋ ಸಂಸ್ಥೆ ಲಾಭದತ್ತ ಹಾಗೂ ಸಿಬ್ಬಂದಿಗೆ ವೇತನ ನೀಡೋಕೆ‌ ಪರದಾಡುತ್ತಿರೋ ಸಂಸ್ಥೆಗಳಿಗೆ ಆಗ್ತಿರೋ ಸಮಸ್ಯೆ ಬಗೆಹರಿಸಬಹುದಾಗಿದೆ.

ಆದಷ್ಟು ಬೇಗ ಇಂಥ ಮಹಾನ್ ಕಾರ್ಯಗಳು ನಾಲ್ಕೂ ಸಾರಿಗೆ ನಿಗಮದಿಂದ ಆಗಲಿ ಅನ್ನೋದೇ ನಮ್ಮ ಆಶಯ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist