ಬೆಂಗಳೂರು, (www.thenewzmirror.com) :
ರಾಜ್ಯದಲ್ಲಿ ನಿಧಾನಗತಿಯಲ್ಲಿ ಕೋವಿಡ್ ಏರುತ್ತಿದೆ..
ಅದರಲ್ಲೂ ಬೆಂಗಳೂರಿನಲ್ಲಿ ನಿರೀಕ್ಷೆಗೂ ಮೀರಿ ಏರಿಕೆಯಾಗುತ್ತಿರುವುದು ಆರೋಗ್ಯ ಇಲಾಖೆಗೆ ಟೆನ್ಷನ್ ಶುರುವಾಗಿದೆ.
ಹೀಗಾಗಿ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲೆಯ ಕಚೇರಿಗಳು, ವಿದ್ಯಾಸಂಸ್ಥೆ, ಕಾಲೇಜುಗಳು ಹಾಗೂ ಅಪಾರ್ಮೆಂಟ್ ಗಳಲ್ಲಿ ಕೋವಿಡ್-19 ಪರೀಕ್ಷೆ, ಐಸೋಲೇಷನ್, ಚಿಕಿತ್ಸೆ ಹಾಗೂ ಕ್ವಾರಂಟೈನ್ ಗೆ ಸಂಬಂಧಿಸಿದಂತೆ ಪರಿಷ್ಕೃತ ಮಾರ್ಗಸೂಚಿಯನ್ನು ರಾಜ್ಯ ಆರೋಗ್ಯ ಇಲಾಖೆ ಪ್ರಕಟಿಸಿದೆ.
ಬೆಂಗಳೂರಿನಲ್ಲಿ ಕರೋನಾ ಸೋಂಕು ಹೆಚ್ಚಳ ಹಿನ್ನಲೆ
ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
ಬಿಬಿಎಂಪಿ,ಬೆಂಗಳೂರು ನಗರ ಜಿಲ್ಲೆಗೆ ಸೀಮಿತವಾಗುವಂತೆ ಮಾರ್ಗಸೂಚಿ
ಕಚೇರಿಗಳು, ವಿದ್ಯಾಸಂಸ್ಥೆ, ಕಾಲೇಜುಗಳು ಹಾಗೂ ಅಪಾರ್ಮೆಂಟ್ ಗಳಿಗೆ ಅನ್ವಯವಾಗುವಂತೆ ನಿಯಮ
ಹೊಸ ಮಾರ್ಗಸೂಚಿ ಕಡ್ಡಾಯ ಪಾಲನೆಗೆ ಸೂಚನೆ
ವಸತಿ ಸಮುಚ್ಛಯ, ಅಪಾರ್ಟ್ ಮೆಂಟ್ ಗಳ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳು
- 3-5 ಕೋವಿಡ್ ಪ್ರಕರಣಗಳು ವರದಿಯಾದಲ್ಲಿ ಸಣ್ಣ ಕ್ಲಸ್ಟರ್ ಎಂದು ಪರಿಗಣಿಸುವುದು.
- 15ಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ಕಂಡು ಬಂದ್ರೆ ಇಡೀ ಅಪಾರ್ಟ್ ಮೆಂಟ್ ನಲ್ಲಿ ಕೋವಿಡ್ ಪರೀಕ್ಷೆ ಮಾಡಿಸುವುದು
- ಪಾಸಿಟಿವ್ ವ್ಯಕ್ತಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಹೋಂ ಐಸೋಲೇಷನ್, ಸಿಸಿಸಿ, ಆಸ್ಪತ್ರೆಗೆ ದಾಖಲಿಸುವುದು
- ಆರ್ ಟಿ -ಪಿಸಿಆರ್ ಪರೀಕ್ಷೆಗೆ ಹೆಚ್ಚಿನ ಒತ್ತು ನೀಡುವುದು
- ಪಾಸಿಟಿವ್ ಬಂದ ಪ್ರಕರಣಗಳ ಶೇಕಡಾ ೨೫% ರಷ್ಟನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸುವುದು.
- ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ
- ಶಾಲಾ-ಕಾಲೇಜುಗಳಲ್ಲಿ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಪಡೆಯಲು ಬಾಕಿ ಇರುವವರನ್ನು ಲಸಿಕೆ ನೀಡುವುದು
ಶಾಲೆಗಳಲ್ಲಿ ಅನುಸರಿಸಬೇಕಾದ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಕ್ರಮಗಳು
- ಕೋವಿಡ್-19ರ ಲಕ್ಷಣಗಳನ್ನು ಹೊಂದಿರುವವರು ಶಾಲೆಗೆ ಹಾಜರಾಗದಂತೆ ಸೂಚಿಸುವುದು.
- ಕೋವಿಡ್ ಲಕ್ಷಣವಿರುವಂತ ವಿದ್ಯಾರ್ಥಿಯನ್ನು Rapid ಆಂಟಿಜೆನ್ ಪರೀಕ್ಷೆಗೆ ಒಳಪಡಿಸುವುದು
- ಪಾಸಿಟಿವ್ ಬಂದಲ್ಲಿ, ಶಿಷ್ಟಾಚಾರದ ಅನ್ವಯ ಐಸೋಲೇಷನ್ ನಲ್ಲಿ ಇರಿಸುವುದು
- Rapid ಆಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದ್ರೇ, ಆರ್ ಟಿ ಪಿಸಿಆರ್ ಪರೀಕ್ಷೆಗೆ ಮಾದರಿ ಸಂಗ್ರಹಿಸುವುದು
- ರೋಗ ಲಕ್ಷಣಗಳಿರುವವರಿಗೆ Rapid ಆಂಟಿಜೆನ್ ಪರೀಕ್ಷೆ ಮಾಡುವುದು.
- ಸೋಂಕಿತ ವ್ಯಕ್ತಿಯ ಆರೋಗ್ಯಕ್ಕೆ ಅನುಗುಣವಾಗಿ ಹೋಂ ಐಸೋಲೇಷನ್, ಸಿಸಿಸಿ, ಆಸ್ಪತ್ರೆಗೆ ದಾಖಲಿಸುವುದು
-ಶಾಲೆಯಲ್ಲಿ ಪಾಸಿಟಿವ್ ಪ್ರಕರಣ ಕಂಡುಬಂದ್ರೆ ಕೊಠಡಿಯನ್ನ ಶೇ.1ರಷ್ಟು ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದಿಂದ ಸ್ವಚ್ಛಗೊಳಿಸುವುದು. - ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಪಾಲಿಸುವುದು.
- ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಬಳಸುವುದು.
- ಜ್ವರ, ನೆಗಡಿ, ಕೆಮ್ಮು ಹಾಗೂ ಉಸಿರಾಟದ ತೊಂದರೆ ಗಳಿರುವವರನ್ನು ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಲು ಶಿಫಾರಸ್ಸು ಮಾಡುವುದು