ಬೆಂಗಳೂರು, (www.thenewzmirror.com):
ಪ್ರತಿನಿತ್ಯ ಗುಂಡಿ ಅವಾಂತರದಿಂದ ಒಂದಲ್ಲಾ ಒಂದು ಸಮಸ್ಯೆ ಆಗ್ತಿದೆ. ಎಷ್ಟೇ ಮನವಿ ಮಾಡಿದರೂ ಗುಂಡಿ ಮುಚ್ಚುವ ಕೆಲ್ಸ ಮಾಡುತ್ತಿಲ್ಲ.., ಇದರ ವಿರುದ್ಧ ಬೆಂಗಳೂರಿನಲ್ಲಿ ವಿನೂತನ ಪ್ರತಿಭಟನೆ ನಡೆಯಿತು.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ನೀತಿಯಿಂದ ಬೇಸತ್ತ ಸಾರ್ವಜನಿಕರು ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿ ಬಿಬಿಎಂಪಿ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.
ಯಲಹಂಕ ವ್ಯಾಪ್ತಿಯ ಕೆ.ಆರ್ ಪುರಂ ಮತ್ತು ಬೆಟ್ಟಗಳ್ಳಿ ರಸ್ತೆಯ ಗುಂಡಿಯೊಂದರಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹಾಗೂ ಚೀಫ್ ಎಂಜಿನಿಯರ್ ಹೆಸರಿನಲ್ಲಿ ಪಿಂಡ ಪ್ರದಾನ ಮಾಡಿ, ತಮ್ಮ ಆಕ್ರೋಶ ಹೊರಹಾಕಿದರು.
ಸಾಮಾಜಿಕ ಹೋರಾಟಗಾರ ಹೆ.ಎಂ ವೆಂಕಟೇಶ್ ಹಾಗೂ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸ್ಥಳೀಯರು ಭಾಗಿಯಾಗಿದ್ದರು. ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಬಳಿಕ ಸಾಮಾಜಿಕ ಹೋರಾಟಗಾರ ಹೆ.ಎಂ ವೆಂಕಟೇಶ್, ಅಭಿವೃದ್ಧಿ ಹೆಸರಲ್ಲಿ ಸಾವಿರಾರು ಕೋಟಿ ಖರ್ಚು ಮಾಡಿರುವುದಾಗಿ ಬಿಬಿಎಂಪಿ ಬಾಯಿ ಬಡಿದುಕೊಳ್ಳುತ್ತಿದೆ. ಆದರೆ ಯಲಹಂಕ ವ್ಯಾಪ್ತಿಯ ಒಂದೇ ಒಂದು ರಸ್ತೆಯೂ ಸರಿಯಿಲ್ಲ. ರಸ್ತೆ ಗುಂಡಿಗಳಿಂದ ಪ್ರತಿನಿತ್ಯ ಹತ್ತಾರು ಸವಾರರು ಬಿದ್ದು ಸಾವು ನೋವಿಗೀಡಾಗುತ್ತಿದ್ದಾರೆ. ಈ ಬಗ್ಗೆ ಹಲವು ಮಾರಿ ಮನವಿ ಮಾಡಿದ್ದರು ಪ್ರಯೋಜನವಾಗಿಲ್ಲ. ಹಾಗಾಗಿ ಇವತ್ತು ಅಧಿಕಾರಿಗಳಿಗೆ ಪಿಂಡ ಪ್ರದಾನ ಮಾಡುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.