ಬೆಂಗಳೂರು, (www.thenewzmirror.com) :
ಗ್ರಾಮೋದ್ಧಾರ ಕೇಂದ್ರ ಪ್ರತೀ ಗ್ರಾಮಪಂಚಾಯತ್ ನಲ್ಲೂ ನಿರೋದ್ಯೋಗಿಗಳನ್ನ ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಆರಂಭವಾಗಬೇಕಿದ್ದ ಕೇಂದ್ರ. ಆದರೆ ಆ ಕೇಂದ್ರ ಇದೀಗ ಅತಂತ್ರದ ಕೇಂದ್ರಬಿಂದುವಾಗಿದೆ.
ಪ್ರತಿ ಗ್ರಾಮಪಂಚಾಯತಿಯಲ್ಲಿ ಈ ಕೇಂದ್ರದ ಬಗ್ಗೆ ಆಸಕ್ತಿ ಹೊಂದಿದವರು ಲಕ್ಷಾಂತರ ರೂ ಹೂಡಿಕೆ ಮಾಡಿದ್ರು. ಇನ್ನೇನು ಕೇಂದ್ರ ಓಪನ್ ಆಗೇ ಬಿಡ್ತು ಅಂತ ಅನ್ಕೊಂಡಿದ್ದವ್ರಿಗೆ ಇದೀಗ ಕೇಂದ್ರ ಶಾಕ್ ಕೊಟ್ಟಿದೆ.

ಈ ಕುರಿತಂತೆ ಈ ಹಿಂದೆ ದಿ ನ್ಯೂಝ್ ಮಿರರ್ ಸುದ್ದಿಯನ್ನೂ ಪ್ರಸಾರ ಮಾಡಿತ್ತು. ಹಾಗೆನೇ ಇನ್ನಷ್ಟು ವಂಚನೆ ಬಗ್ಗೆ ಬಯಲು ಮಾಡುವ ಬಗ್ಗೆಯೂ ಮಾಹಿತಿ ನೀಡಿತ್ತು. ಅದೇ ರೀತಿ ಮತ್ತೊಂದು ವಂಚನೆಯ ಬಹ್ಗೆ ಹಾಗೆನೇ ಕೇಂದ್ರ ನಂಬಿ ಮೋಸಹೋದ ಯುವಕನ ಕುರಿತ ಸಣ್ಣ ಮಾಹಿತಿ ಇಲ್ಲಿದೆ.
ಆತ ಬೆಂಗಳೂರಿನಲ್ಲಿ ತಿಂಗಳಿಗೆ 60 ಸಾವಿರ ವೇತನ ಪಡೆಯುತ್ತಿದ್ದ ಟೆಕ್ಕಿ. ಕರೋನಾದ ಲಾಕ್ ಡೌನ್ ಆದಾಗ ಗ್ರಾಮೋದ್ಧಾರ ಕೇಂದ್ರದಿಂದ ಒಂದು ಕರೆ ಬರುತ್ತೆ. ಕೇಂದ್ರದ ಸಂಪೂರ್ಣ ಮಾಹಿತಿ ನೀಡುವ ಸಿಬ್ಬಂದಿ ಮಾತನ್ನ ನಂಬಿ ಎರಡೂವರೆ ಲಕ್ಷ ಹಣ ಹೂಡಿಕೆ ಮಾಡುತ್ತಾರೆ.
ಹೂಡಿಕೆ ಮಾಡುತ್ತಿದ್ದಂತೆ ಗ್ರಾಮೋದ್ಧಾರ ಕೇಂದ್ರದವರು ತಮ್ಮದೇ ಆದ ಒಂದಿಷ್ಟು ತಮಗಿಷ್ಟ ಬಂದಂತೆ ಕೆಲ ಕಂಡೀಷನ್ ಗಳನ್ನ ಹಾಕಿ ಅವ್ರಿಂದ ಸಹಿ ಹಾಕಿಸಿಕೊಳ್ತಾರೆ.
ಅಲ್ಲಿಗೆ ಮುಗಿತು ನೋಡಿ.. ಹಾಕಿದ ಹಣಕ್ಕೆ ದಿನಸಿ ಸೇರಿದಂತೆ ಎಲ್ ಇಡಿ ಬಲ್ಪ್ ಎಲ್ಲವನ್ನೂ ಕೇಂದ್ರದಿಂದ ಪೂರೈಕೆಯಾಗುತ್ತೆ. ಸದ್ಯ ಮೆಟಿರಿಯಲ್ ಬಂತು ಅಂತ ಖುಷಿಯಲ್ಲಿದ್ದ ಆ ಯುವಕನಿಗೆ ಅಲ್ಲಿಂದ ಶಾಕ್ ಮೇಲೆ ಶಾಕ್ ಎದುರಾಗ್ತಾ ಹೋಯ್ತು..
ಗ್ರಾಮೋದ್ಧಾರ ಕೇಂದ್ರದ ಸಿಬ್ಬಂದಿ ಕಳುಹಿಸಿದ್ದ ದಿನಸಿ ಸಾಮಾಗ್ರಿಗಳು ಕಳಪೆಯದ್ದಂತೆ.. ಕಡಿಮೆ ದರದಲ್ಲಿ ನೀಡುವ ಎಲ್ ಇಡಿ ಬಲ್ಪ್ ಗುಣಮಟ್ಟದಿಂದ ಕೂಡಿರಲಿಲ್ಲವಂತೆ.. ಈ ಬಗ್ಗೆ ಕೇಳೋಕೆ ಹೋದ್ರೆ ಬೆದರಿಕೆಯನ್ನೂ ಹಾಕ್ತಾರಂತೆ.
ಅಷ್ಟೇ ಅಲ್ದೆ ನಿಮ್ಮ ಮೆಲೇನೇ ಕೇಸ್ ಹಾಕಿಸುವ ಬೆದರಿಕೆಯನ್ನೂ ಹಾಕ್ತಾರಂತೆ. ಇನ್ನೂ ಹೆಚ್ಚಿಗೆ ಒತ್ತಾಯ ಮಾಡಿದ್ರೆ ಜಿಪಿ ಐಡಿಯನ್ನೇ( ಪ್ರತಿಯೊಂದು ಗ್ರಾ.ಪಂ. ಗೆ ಕೇಂದ್ರದ ವತಿಯಿಂದ ನೀಡುವ ಗುರುತಿನ ಸಂಖ್ಯೆ) ಬ್ಲಾಕ್ ಮಾಡ್ತಾರಂತೆ.
ಆಯ್ತು ಬಂದ ಕಳಪೆ ಗುಣಮಟ್ಟದ ದಿನಸಿ ಮಾರಾಟ ಮಾಡಿ ಅಂಗಡಿ ಕ್ಲೋಸ್ ಮಾಡ್ತೀವಿ ಕೊಟ್ಟಿರುವ ಹಣ ಕೊಡಿ ಅಂದ್ರೂ ಕೊಡದೇ ಸತಾಯಿಸುತ್ತಿದ್ದಾರಂತೆ. ಅತ್ತ ಹಾಕಿರುವ ಹಣವೂ ಇಲ್ಲ ಇತ್ತ ಇಷ್ಟ ಪಟ್ಟು ಮಾಡುತ್ತಿದ್ದ ಕೆಲ್ಸವೂ ಹೋಯ್ತು ಈಗೇನು ಮಾಡೋದು ಅನ್ನೋ ಅತಂತ್ರ ಸ್ಥಿತಿಯಲ್ಲಿ ಆ ಯುವಕ ಇದ್ದಾರೆ.
ಚೆಕ್ ಕೂಡ ಬೌನ್ಸ್..!
ಇನ್ನೊಂದು ಪ್ರಕರಣದಲ್ಲಿ ಗ್ರಾಮೋದ್ಧಾರ ಕೇಂದ್ರದ ಸಿಬ್ಬಂದಿ ಕೊಟ್ಟಿರುವ ಚೆಕ್ ಕೂಡ ಬೌನ್ಸ್ ಆಗ್ತಾ ಇದೆಯಂತೆ. ಚೆಕ್ ಬೌನ್ಸ್ ಆಗ್ತಾ ಇದೆಯಲ್ವಾ ಅಂತ ಕೇಳೋಕೆ ಹೋದ್ರೆ ಮನಸ್ಸಿಗೆ ಬಂದಂತೆ ಮಾತನಾಡುತ್ತಾರಂತೆ. ಪದೇ ಪದೇ ಹಣ ಕೊಡಿ ಅಂತ ಕೇಳಿದ್ರೆ ಫೋನ್ ರಿಸೀವ್ ಮಾಡೋದನ್ನೇ ನಿಲ್ಲಿಸುತ್ತಾರಂತೆ.
ಹೀಗೆ ಹೇಳುತ್ತಾ ಹೋದ್ರೆ ದೊಡ್ಡ ಪಟ್ಟಿಯೇ ಬೆಳೆಯುತ್ತಾ ಹೋಗುತ್ತೆ. ಇಡೀ ರಾಜ್ಯಾದ್ಯಂತ ನೂರಾರು ಮಂದಿಯ ಕನಸಿಗೆ ಮಣ್ಣೆರಚಿರೋ ಸಂಸ್ಥೆಯ ಮತ್ತಷ್ಟು ಹಗರಣ, ಗೋಲ್ಮಾಲ್ ಎಲ್ಲವೂ ಒಂದೊಂದಾಗಿಯೇ ಬೆಳಕಿಗೆ ತರುವ ಯತ್ನ ಮುಂದಿನ ದಿನಗಳಲ್ಲಿ ಆದರೂ ಅಚ್ಚರಿ ಪಡ್ಬೇಕಿಲ್ಲ.