ಬೆಂಗಳೂರು (www.thenewzmirror.com) :
ಗ್ರಾಮೋದ್ಧಾರ ಕೇಂದ್ರದ ಬಗ್ಗೆ ಕೇಂದ್ರ ಹೇಗೆ ಸಾರ್ವಜನಿಕರನ್ನ ಮೋಸ ಮಾಡ್ತಿದ್ದಾರೆ ಅನ್ನೋದ್ರ ಕಂಪ್ಲೀಟ್ ಡಿಟೇಲ್ಸ್ ದಿ ನ್ಯೂಝ್ ಮಿರರ್ ಸವಿಸ್ತಾರ ವರದಿ ಪ್ರಸಾರ ಮಾಡಿತ್ತು. ಅದರ ಮುಂದುವರೆದ ಭಾಗ ಇಲ್ಲಿದೆ.
ಕಳೆದ ಹಲವು ವರ್ಷಗಳಿಂದ ನಂಬಿಕೆ ಇಟ್ಟವರ ತಲೆ ಮೇಲೆ ಚಪ್ಪಡಿಕಲ್ಲು ಹಾಕಿ ಮೋಸ ಮಾಡಿದ ವಂಚಕರ ತಂಡ ಇದೀಗ ಮತ್ತೊಮ್ಮೆ ಆಕ್ಟಿವ್ ಆಗಿದೆ.
ಮೊದಲು ಗ್ರಾಮೋದ್ಧಾರ ಕೇಂದ್ರ ಬಳಿಕ ಸ್ವದೇಶಿ ಅಂತ ಹೆಸರು ಬದಲಾವಣೆ ಮಾಡಿಕೊಂಡು ಸಾವಿರಾರು ಯುವಕರಿಗೆ ಮೋಸ ಮಾಡಿ ತಲೆಮರೆಸಿಕೊಂಡು ಓಡಾಡುತ್ತಿರೋ ಸಂಸ್ಥೆಯ ಸಿಇಓ ಕೌಶಿಕ್ ಇದೀಗ ಮತ್ತೊಮ್ಮೆ ವಂಚನೆಗೆ ಸ್ಕೆಚ್ ಹಾಕಿಕೊಂಡಂತೆ ಕಾಣುತ್ತಿದೆ.
ಗ್ರಾಮೋದ್ಧಾರ ಕೇಂದ್ರದ ಫೇಸ್ ಬುಕ್ ಫೇಜ್ ನಲ್ಲಿ ಮತ್ತೆ ನಿಮಗೆ ದುಡ್ಡು ಮಾಡುವ ದಾರಿ ಹೇಳಿಕೊಡ್ತೀನಿ ಅರ್ಥಾತ್ ಬ್ಯಾಂಕ್ ಬಗ್ಗೆ ತಿಳುವಳಿಕೆ ಇರುವವರಿಗೆ ಸುವರ್ಣಾವಕಾಶ ಅಂತ ಬರಹವೊಂದನ್ನ ಫೋಸ್ಟ್ ಮಾಡಲಾಗಿದೆ.
ಆಸಕ್ತರು ತಮ್ಮಮೊಬೈಲ್‌ನಂಬರ್ ನೀಡಿ ಅಂತ ಜಾಹೀರಾತು ನೀಡಲಾಗಿದೆ. ಗ್ರಾಮೋದ್ಧಾರ ಕೇಂದ್ರ, ಅದರ ಸೋ ಕಾಲ್ಡ್ ಮುಖ್ಯಸ್ಥ ಕೌಶಿಕ್, ಕಾವ್ಯ ಅವರ ಅಸಲಿ ಮುಖ ಗೊತ್ತಿರೋರು ಇದೊಂದು ಫ್ರಾಡ್ ಸಂಸ್ಥೆ ಇದಕ್ಕೆ ಹಣ ಹೂಡ ಬೇಡಿ ಅಂತ ಫೇಸ್ ಬುಕ್‌ನಲ್ಲೇ ಉಲ್ಲೇಖಿಸಿದ್ದಾರೆ.
ಆದರೆ ಪಾಪ ಫ್ರಾಡ್ ಕಂಪನಿಯ ಬಗ್ಗೆ ತಿಳುವಳಿಕೆ ಇಲ್ಲದ ಅದೆಷ್ಟೋ ನಿರುದ್ಯೋಗ ಯುವಕ, ಯುವತಿಯರು ತಮ್ಮ ಮೊಬೈಲ್ ನಂಬರ್ ಕೊಟ್ಟು ದುಡಿಮೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಅಮಾಯಕ ನಿರುದ್ಯೋಗಿಗಳಿಗೆ ಮಕ್ಮಲ್ ಟೋಪಿ ಹಾಕೋಕೆ ಇದೀಗ ಗ್ರಾಮೋದ್ಧಾರ ಕೇಂದ್ರದ ಸಿಬ್ಬಂದಿ ಸಿದ್ಧತೆ ನಡೆಸುತ್ತಿದ್ದಾರೆ ಎಂದೇ ಭಾವಿಸಲಾಗ್ತಿದ್ದು, ಕೇಂದ್ರ ನಂಬಿ ಯಾರೂ ಹಣ ಹೂಡಬೇಡಿ ಅಂತ ಮೋಸ ಹೋದವರು ಮನವಿ ಮಾಡಿಕೊಳ್ತಿದ್ದಾರೆ.
ಈಗಾಗಲೇ ಸಾವಿರಾರು ಮುಗ್ದರ ಬಾಳಿನಲ್ಲಿ ಆಟವಾಡ್ತಿರೋ ಕೌಶಿಕ್, ಕಾವ್ಯ ಸೇರಿದಂತೆ ಅವರ ಪಟಾಲಂ ಮತ್ತಷ್ಟು ಜನ್ರಿಗೆ ಹೇಗೆ ಮೋಸ ಮಾಡೋದು ಅಂತ ಪ್ಲಾನ್ ಮಾಡ್ತಿದ್ದಾರಂತೆ.
ನಿಮ್ಮ ಸಲಹೆ ಸೂಚನೆಗಳಿದ್ದರೆ ಕಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮಾಡಿ ಅಥವಾ email([email protected]) ಗೆ ಮೇಲ್ ಮಾಡಿ