ಬೆಂಗಳೂರು, (www.thenewzmirror.com) :
ಚೀನಾ ವಸ್ತುಗಳಿ ಹಣೆ ಬರಹ ಎಲ್ಲರಿಗೂ ಗೊತ್ತೇ ಇದೆ. ಆ ದೇಶದ ವಸ್ತುಗಳಿಗೆ ಯಾವದೇ ಗ್ಯಾರಂಟಿ ಸಿಗೋದಿಲ್ಲ.., ಇದೀಗ ಚೀನಾ ಆಯ್ತು ಜಪಾನ್ ಕೂಡ ಅದೇ ಲೀಸ್ಟ್ ಗೆ ಸೇರುತಿದ್ಯಾ ಅನ್ನೋ ಅನುಮಾನ ಮೂಡುತ್ತಿದ್ದು, ಇದಕ್ಕೆ ಕಳೆದೊಂದುವರೆ ವರ್ಷದ ಹಿಂದೆ ಕಟ್ಟಿದ್ದ ಅಪಾರ್ಟ್ ಮೆಂಟ್ ಸೂಕ್ತ ಉದಾಹರಣೆ.
ಬಿನ್ನಿಮಿಲ್ ಪೊಲೀಸ್ ಕ್ವಾಟ್ರಸ್ ಉದ್ಘಾಟನೆಯಾಗಿ ಒಂದೂವರೆ ವರ್ಷ ಆಗಿರಬಹುದು.., ಕಟ್ಟಿ ಅಷ್ಟೇ ಸಮಯಕ್ಕೆ ವಾಲಿರೋದನ್ನ ನೋಡಿದ್ರೆ ಸಾಕಷ್ಟು ಅನುಮಾನ ಮೂಡುತ್ತಿದೆ. ಯಾಕಂದ್ರೆ ಜಪಾನ್ ಮಾದರಿಯಲ್ಲಿ ನಿರ್ಮಿಸಿದ್ದು ಅನ್ನೋ ಖ್ಯಾತಿ ಗಳಿಸಿದ್ದ ಕಟ್ಟಡವೇ ಇದೀಗ ಬಿರುಕು ಬಿಡುವ ಹಂತಕ್ಕೆ ಹೋಗಿದೆ.
ಬಿನ್ನಿಮಿಲ್ ಪೊಲೀಸ್ ಕ್ವಾಟ್ರಸ್ ನ ಬಿ ಬ್ಲಾಕ್ ಮಾತ್ರ ಬಿರುಕು ಬಿಟ್ಟಿತ್ತು. ದಿನಕಳೆದಂತೆ ಬಿರುಕು ಹೆಚ್ಚಾಗುತ್ತಿದ್ದರಿಂದ ತಾತ್ಕಾಲಿಕ ಪರಿಹಾರ ಎಂದು ರಬ್ಬರ್ ಗಳನ್ನ ಅಂಟಿಸಿ ಹಲಗೆಗಳನ್ನ ಜೋಡಿಸಿ ಮುಚ್ಚಲಾಗಿತ್ತು .ಆದ್ರೆ ಬಿರುಕಿನ ಪ್ರಮಾಣ ಹೆಚ್ಚಾಗ್ತಿರೋದ್ರಿಂದ ಬಿ ಬ್ಲಾಕ್ ನಲ್ಲಿರುವ 64ಕುಟುಂಬಗಳ ಪೈಕಿ 36 ಕುಟುಂಬಗಳನ್ನ ಸ್ಥಳಾಂತರ ಮಾಡಲಾಗಿದೆ.
ಇದ್ರ ಬೆನ್ನಲ್ಲೇ ಇಂದು ತಜ್ಞರ ತಂಡ ಪರಿಶೀಲನೆ ನಡೆಸುವ ಕಾರ್ಯವನ್ನ ಮಾಡಿತು. ಈ ಕಟ್ಟಡವನ್ನ ಪರಿಶೀಲನೆ ನಡೆಸಿದ ತಂಡ ಕ್ವಾಟ್ರಸ್ ಅನ್ನ ಕೆಡವಬೇಕಾ ಅಥವಾ ಮತ್ತೆ ಪ್ಯಾಚ್ ವರ್ಕ್ ಮಾಡಬೇಕಾ ಎಂಬುದರ ವರದಿಯನ್ನ ಸರ್ಕಾರಕ್ಕೆ ನೀಡಲಿದ್ದಾರೆ. ಅದೆನೇ ಇರ್ಲಿ, ಜಪಾನ್ ಮಾದರಿಯ ಕಟ್ಟಡ ಒಂದೂವರೆ ವರ್ಷಕ್ಕೇ ಬಿರುಕು ಬಿಟ್ಟಿದ್ದು, ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.