ಬೆಂಗಳೂರು, ( www.thenewzmirror.com) ;
ಐಟಿ ಕಂಪನಿಗಳೇ ಹೆಚ್ಚಿರುವ ಬೆಂಗಳೂರಿನ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿಗಳಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್ ಕೊಟ್ಟಿದೆ. ಇದರ ಜತೆಗೆ ಐಟಿ ವಲಯದ ಹಲವು ವರ್ಷಗಳ ಬೇಡಿಕೆಗೆ ಈಡೇರಿಸಲು ಸ್ವತಃ ಪ್ರಧಾನಿ ಮೋದಿ ಅವ್ರೇ ಮುಂದಾಗಿದ್ದಾರೆ.
ಹೌದು, ಕೆ.ಆರ್. ಪುರಂ ನಿಂದ ವೈಟ್ ಫೀಲ್ಡ್ ವರೆಗಿನ ಲಿಂಕಿಂಗ್ ಮಾರ್ಗದಲ್ಲಿ ಮೆಟ್ರೋ ಓಡಿಸೋಕೆ ಕ್ಷಣಗಣನೆ ಆರಂಭವಾಗಿದ್ದು, ಇದೇ ತಿಂಗಳ 25 ರಂದು ಅಂದರೆ ಮಾರ್ಚ್ 25, 2023 ರಂದು ಉದ್ಘಾಟನೆ ಮಾಡೋಕೆ ನಮ್ಮ ಮೆಟ್ರೋ ( #ಬಿಎಂಆರ್ ಸಿಎಲ್) ಸಿದ್ಧತೆ ಮಾಡಿಕೊಂಡಿದೆ.
ಸ್ವತಃ ಪ್ರಧಾನಿ ಮೋದಿ ಅವರೇ ಈ ಮಾರ್ಗದಲ್ಲಿ ಓಡಾಡುವ ಮೆಟ್ರೋಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಮಾರ್ಚ್ 25 ಕ್ಕೆ ಚಾಲನೆ ಸಿಕ್ಕಿದ್ದರೂ ಮಾರನೇ ದಿನ ಅಂದರೆ ಮಾರ್ಚ್ 26 ರಿಂದ ವಾಣಿಜ್ಯ ಓಡಾಟ ನಡೆಸಲಿದೆ ಎಂದು ಮೆಟ್ರೋ ಅಧಿಕಾರಿಗಳು ದಿ ನ್ಯೂಝ್ ಮಿರರ್ ಗೆ ಮಾಹಿತಿ ನೀಡಿದ್ದಾರೆ.
ಸುಮಾರು 13 ಕಿಲೋ ಮೀಟರ್ ನೇರಳೆ ಮಾರ್ಗದಲ್ಲಿ ಹಲವು ಐಟಿ, ಬಿಟಿ ಕಂಪನಿಗಳಿದ್ದು, ಆ ಭಾಗದಲ್ಲಿ ಕೆಲಸ ಮಾಡುವ ಸಾವಿರಾರು ಐಟಿ ಉದ್ಯೋಗಿಗಳಿಗೆ ಮೆಟ್ರೋ ಓಡಾಟ ನೆಮ್ಮದಿ ತರಲಿದೆ.
ಸುಮಾರು 13 ಕಿಲೋ ಮೀಟರ್ ಮಾರ್ಗದಲ್ಲಿ ಮೆಟ್ರೋ ಓಡಾಟ ಮಾಡುವುದರಿಂದ ಕನಿಷ್ಠ ಮೂರರಿಂದ ನಾಲ್ಕು ಲಕ್ಷ ಪ್ರಯಾಣಿಕರಿಗೆ ಟ್ರಾಫಿಕ್ ಕಿರಿ ಕಿರಿ ತಪ್ಪಲಿದೆ ಎಂದು ಅಂದಾಜು ಮಾಡಲಾಗಿದೆ.
ಬೈಯಪ್ಪನಹಳ್ಳಿ ಟು ಕೆ.ಆರ್. ಪುರಂ ಯಾವಾಗ..?
ಸದ್ಯ ಕೆ.ಆರ್. ಪುರಂ ಟು ವೈಟ್ ಫೀಲ್ಡ್ ಮಾರ್ಗವನ್ನ ಸದ್ಯಕ್ಕೆ ಲಿಂಕಿಂಗ್ ಮಾರ್ಗ ಎಂದು ಕರೆಯಲಾಗುತ್ತಿದ್ದು, ಸದ್ಯ ಕೆಂಗೇರಿಯಿಂದ ಬೈಯ್ಯಪ್ಪನಹಳ್ಳಿ ವರೆಗೂ ಮಾತ್ರ ಓಡಾಟ ಮಾಡುತ್ತಿದೆ. ಬೈಯ್ಯಪ್ಪನಹಳ್ಳಿ ಟು ಕೆ.ಆರ್. ಪುರಂ ಮಾರ್ಗದ ಕಾಮಗಾರಿ ಶೇಕಡಾ 90 ರಷ್ಟು ಪೂರ್ಣಗೊಂಡಿದ್ದು, ಜುಲೈ ವೇಳೆಯಲ್ಲಿ ಕಾರ್ಯಾಚರಣೆ ಮಾಡುವ ಗುರಿಯನ್ನ ನಮ್ಮ ಮೆಟ್ರೋ ಹೊಂದಿದೆ.
ಸುಮಾರು 4500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮಾರ್ಗದಲ್ಲಿ ಸುಮಾರು 12 ನಿಲ್ದಾಣಗಳು ಬರಲಿವೆ.