ಬೆಂಗಳೂರು, (www.thenewzmirror.com):
ಈಗಾಗಲೇ ಸಾಕಷ್ಟು ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ BMTC ಇದೀಗ ಪರ್ಮನೆಂಟಾಗಿ ಬೀಳುತ್ತಾ ಬೀಗ ? ಅನ್ನೋ ಆತಂಕ ಎದುರಾಗಿದೆ.., ಆಡಳಿತ ವೈಫಲ್ಯ ಹಾಗೂ ದುಂದುವೆಚ್ಚಕ್ಕೆ ನಿಯಂತ್ರಣ ಹಾಕಲು ಸಾಧ್ಯವಾಗದೇ ಇರೋದ್ರಿಂದ ಇದೀಗ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ.
ಕಳೆದ ಹಲವು ವರ್ಷಗಳಿಂದ ಸಾಲದ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ರೂ ಅದನ್ನ ಮೇಲಕ್ಕೆತ್ತಲು ಸಾಧ್ಯವಾದಗ ಸ್ಥಿತಿಯಲ್ಲಿದ್ದಾರೆ ಸಾರಿಗೆ ಸಚಿವರು.., ಬಿಎಂಟಿಸಿ ಇಂತಹ ದಯನೀಯ ಪರಿಸ್ಥಿತಿಗೆ ನಿಜವಾದ ಕಾರಣ ಯಾರು ಅನ್ನುವ ಪ್ರಶ್ನೆಗೆ ಹಿಂದಿನ ಸಾರಿಗೆ ಸಚಿವರಾ ? ಅಥವಾ ಬಿಎಂಟಿಸಿ ಅಧಿಕಾರಿಗಳಾ ? ಅನ್ನುವ ಗೊಂದಲ ಮೂಡುತ್ತೆ…,
ಈ ಹಿಂದೆ ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ ಸವದಿ ಆಡಳಿತ ಅವಧಿಯಲ್ಲಿ BMTC ಇತಿಹಾಸದಲ್ಲೇ ಅತ್ಯಧಿಕ ಸಾಲ ಪಡೆದಿದೆ.., ಇದ್ರಿಂದಾಗಿ ಪ್ರಸ್ತುತ 400 ಕೋಟಿಗೂ ಅಧಿಕ ಸಾಲವನ್ನ ತನ್ನ ಮೇಲೆ ಹೊತ್ತುಕೊಂಡು ಕುಳಿತಿದೆ..
407 ಕೋಟಿಗೆ ಬರೋಬ್ಬರಿ 57 ಕೋಟಿ ಬಡ್ಡಿ ಕಟ್ಟುವ ಸ್ಥಿತಿಯಲ್ಲಿದೆ ದೇಶದ ನಂಬರ್ ಒನ್ ಸಾರಿಗೆ ಸಂಸ್ಥೆಯಾದ ಬಿಎಂಟಿಸಿ.., ಇನ್ನು ಸಾಲಕ್ಕಾಗಿ ಬಿಎಂಟಿಸಿಯ ಕೇಂದ್ರ ಕಚೇರಿ ಇರುವ ಶಾಂತಿನಗರದ ಟಿಟಿಎಂಸಿಯನ್ನೇ ಅಡಮಾನ ಇಟ್ಟಿದೆ.
ಬಿಎಂಟಿಸಿ ಪಡೆದ ಸಾಲದ ವಿವಿರ
2019-20- ರಲ್ಲಿ 160 ಕೋಟಿ ಸಾಲ
2020-21 ರಲ್ಲಿ 230 ಕೋಟಿ ಸಾಲ