ಬೆಂಗಳೂರು,(www.thenewzmirror.com):
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಕೆಲ್ಸದಿಂದ ಡಿಸ್ ಮಿಸ್ ಆಗಿದ್ದ 1610 ಮಂದಿ ನೌಕರರ ಪೈಕಿ ಏಳು ನೂರು ಜನರನ್ನ ಶೀಘ್ರದಲ್ಲೇ ಮರು ನೇಮಕ ಮಾಡಿಕೊಳ್ಳಲಾಗುವುದು. ಹೀಗಂತ ಅಭಯ ನೀಡಿದ್ದು ಸಾರಿಗೆ ಸಚಿವ ಶ್ರೀರಾಮುಲು.
ಇಂದು ತಮ್ಮ ನಿವಾಸದಲ್ಲಿ 100 ಸಿಬ್ಬಂದಿಗೆ ಮತು ನೇಮಕಾತಿ ಪ್ರತಿ ನೀಡುವ ವೇಳೆ ಈ ಭರವಸೆ ಕೊಟ್ಟ ಅವರು, ಕಾರ್ಮಿಕ ಇಲಾಖೆಯಲ್ಲಿ ನಡೆಯಲಿರೋ ಅದಾಲತ್ ನಲ್ಲಿ ಮತ್ತೆ ಇನ್ನೂರು ಹಾಗೂ ತಿಂಗಳಾಂತ್ಯಕ್ಕೆ 700 ಸಿಬ್ಬಂದಿ ಮರು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಳೆದ ವರ್ಷ ಆರನೇ ವೇತನ ಜಾರಿ ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ನಾಲ್ಕೂ ಸಾರಿಗೆ ನಿಗಮಗಳ ನೌಕರರು ಪ್ರತಿಭಟನೆ ನಡೆಸಿದ್ರು. ಈ ವೇಳೆ 1600 ಕ್ಕೂ ಹೆಚ್ಚು ನೌಕರರನ್ನ ಕೆಲ್ಸದಿಂದ ತೆಗೆದು ಹಾಕಲಾಗಿತ್ತು.
ಕೆಲ್ಸಕ್ಕೆ ಹಾಜರಾಗಿದ್ರೂ ವಜಾ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಮರು ನೇಮಕ ಮಾಡಿಕೊಳ್ಳಬೇಕೆಂಬ ಒತ್ತಾಯನೂ ಕೇಳಿ ಬರ್ತಾ ಇತ್ತು.
ಸಾರಿಗೆ ಸಚಿವ ಶ್ರೀರಾಮುಲು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಾನೂನು ತಜ್ಞರ ಜತೆ ನಡೆದ ಸರಣಿ ಸಭೆಗಳ ಬಳಿಕ ಇದೀಗ ಡಿಸ್ ಮಿಸ್ ಆದ ನೌಕರರ ಬಾಳಲ್ಲಿ ಆಶಾ ಕಿರಣ ಮೂಡಿದೆ. ಇದರ ಮೊದಲ ಹಂತದಲ್ಲಿ ನೂರು ಮಂದಿ ನೌಕರರಿಗೆ ಮರು ನೇಮಕಾತಿ ಭಾಗ್ಯ ಲಭಿಸಿದೆ.
ಇನ್ನು ಮರು ನೇಮಕಾತಿ ಆದ ಸಿಬ್ಬಂದಿ ಬಳಿ ಮುಚ್ಚಳಿಕೆ ಬರೆಸಿಕೊಂಡಿರೋ ನಿಗಮ, ಇನ್ಮುಂದೆ ಪ್ರತಿಭಟನೆ ಮಾಡೋದಿಲ್ಲ ಅಂತ ಬರೆದು ಸಹಿ ಹಾಕಿಸಿಕೊಳ್ಳಲಾಗಿದೆ.. ಸ್ವತಃ ಸಾರಿಗೆ ಸಚಿವರೇ ಇದನ್ನ ಹೇಳಿದ್ದು ಸಾಕಷ್ಟು ಅಸಮಧಾನಕ್ಕೆ ಕಾರಣವಾಗಿದೆ.
ಇದೇ ವೇಳೆ ಮಾತನಾಡಿದ ಬಿಎಂಟಿಸಿ ಎಂಡಿ ಅನ್ಬು ಕುಮಾರ್,ಇಂದುಪ್ರತಿಭಟನೆ ವೇಳೆ ವಜಾಗೊಂಡಿದ್ದ ನೌಕರರಿಗೆ ಮರು ನೇಮಕ ಭಾಗ್ಯ ಸಿಕ್ಕಿದೆ.. ಎಂದು ಮಾಹಿತಿ ನೀಡಿದ್ರು. ಹಾಗೇನೆ ನಾಳೆ ಮೆಗಾ ಅದಾಲತ್ ನಡೀತಾ ಇದೆ., ಕಾರ್ಮಿಕ ಇಲಾಖೆಯಲ್ಲಿ ನಡೀತಿರೋ ಮೆಗಾ ಅದಾಲತ್ ನಲ್ಲಿ ಇನ್ನೂ 200 ನೌಕರರನ್ನ ಮರು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ನೌಕರರಿಗೆ ಸಾರಿಗೆ ಸಚಿವರ ಅಭಯಗಳು
– ತಿಂಗಳಾಂತ್ಯಕ್ಕೆ ವೇತನ ನೀಡುವ ಕಾರ್ಯ
– ಹಂತ ಹಂತವಾಗಿ ಡಿಸ್ ಮಿಸ್ ಮರು ನೇಮಕ
– ತಿಂಗಳಾಂತ್ಯಕ್ಕೆ 700 ನೇಮಕಕ್ಕೆ ಸಿದ್ಧತೆ
– ಸಮಸ್ಯೆಗಳಿದ್ದರೆ ನಿಗಮವನ್ನ ಸಂಪರ್ಕಿಸಿ
– ಎಲೆಕ್ಟ್ರಿಕ್ ಬಸ್ ಓಡಾಟ ನಡೆಸಿದರೂ ಯಾರನ್ನೂ ಕೆಲ್ಸದಿಂದ ತೆಗೆಯೊಲ್ಲ