ಬೆಂಗಳೂರು(thenewzmirror.com):
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರ ಕೈ ಸುಡ್ತಿದೆ.., ಇದ್ರ ಬೆನ್ನಲ್ಲೇ ಇದೀಗ ವಿದ್ಯುತ್ ಗ್ರಾಹಕರಿಗೆ ಮತ್ತೊಂದು ಶಾಕ್ ಅನ್ನ ಎಸ್ಕಾಂಗಳು ನೀಡೋಕೆ ಸಿದ್ಧಮಾಡಿಕೊಂಡಿವೆ.., ಇಂಧನ ನಿರ್ವಹಣೆ ಸೇರಿದಂತೆ ಹಲವು ಬೇಡಿಗಳನ್ನ ಮುಂದಿಟ್ಟುಕೊಂಡು ವಿದ್ಯುತ್ ದರ ಪರಿಷ್ಕರಣೆಗೆ ಕೆಇಆರ್ಸಿ ಮುಂದೆ ದರ ಹೆಚ್ಚಳದ ಪ್ರಸ್ತಾವನೆ ಇಟ್ಟಿವೆ..
ರಾಜ್ಯದಲ್ಲಿ ಇನ್ನೂ ಬೇಸಿಗೆ ಆರಂಭವಾಗಿಲ್ಲ..ಆದ್ರೂ ಬೇಸಿಗೆ ಮುನ್ನವೇ ವಿದ್ಯುತ್ ಗ್ರಾಹಕರಿಗೆ ಬರೆ ಹಾಕಲು ಎಸ್ಕಾಂಗಳು ಮುಂದಾಗಿವೆ…ಅಗತ್ಯ ವಸ್ತುಗಳ ದರ ಹೆಚ್ಚಳದಿಂದ ಕಂಗಾಲಾಗಿರುವ ಮಂದಿಗೆ ಮತ್ತೆ ವಿದ್ಯುತ್ ಸರಬರಾಜು ಕಂಪನಿಗಳು ಬರೆ ಶಾಕ್ ನೀಡಿವೆ. ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಮೆಕ್ಕಾಂ, ಚೆಸ್ಕಾಂ ಸೇರಿದಂತೆ ಇತರೆ ಕಂಪನಿಗಳು ಪ್ರತಿಬಾರಿಯಂತೆ ಈ ಬಾರಿಯೂ ದರ ಹೆಚ್ಚಳದ ಪ್ರಸ್ತಾಪವನ್ನ ಕೆಇಆರ್ಸಿ ಮುಂದೆ ಇಟ್ಟಿವೆ. ಬೆಸ್ಕಾಂ ಕೂಡ ಈ ಬಾರಿ ಪ್ರತಿ ಯೂನಿಟ್ ಗೆ 1 ರೂ 50 ಹೆಚ್ಚಳಕ್ಕೆ ಮನವಿ ಮಾಡಿದೆ. ಕಳೆದ ಬಾರಿ 1 ರೂ 39 ರೂ ಹೆಚ್ಚಳಕ್ಕೆ ಪ್ರಸ್ತಾಪ ಇಟ್ಟಿತ್ತಾದ್ರೂ ದರ ಪರಿಷ್ಕರಣೆಯಾಗಿದ್ದು ಕೇವಲ 30 ಪೈಸೆ.
ವಿದ್ಯುತ್ ಸರಬರಾಜು ಕಂಪನಿಗಳ ಪ್ರಸ್ತಾಪನೆಗೆ ಸಾಧಕ ಭಾದಕಗಳನ್ನ ಪರಿಗಣಿಸಿ,ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ವಿದ್ಯುತ್ ದರ ಹೆಚ್ಚಳ ಮಾಡಲಿದೆ. ಪ್ರತಿ ಯೂನಿಟ್ ಗೆ ಇಂತಿಷ್ಟು ದರ ಹೆಚ್ಚಳ ಮಾಡಬೇಕು ಅನ್ನೋದುರಾಜ್ಯದ ಐದೂ ಎಸ್ಕಾಂಗಳ ಬೇಡಿಕೆಯಾಗಿದೆ. ಈ ಸಂಬಂಧ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಮಾಡಿ ಹೊಸ ದರ ಪರಿಷ್ಕರಣೆ ಪಟ್ಟಿಯಲ್ಲಿ ಬಿಡುಗಡೆ ಮಾಡಲಿದೆ..
ಫ್ಲೋ..
- ಈ ಹಿಂದೆ ದರ ಪರಿಷ್ಕರಣೆ ಎಚ್ಚಾಗಿತ್ತು..?
ವರ್ಷ ಹೆಚ್ಚಳ ಪ್ರತಿ ಯೂನಿಟ್ ಗೆ
2009 34 ಪೈಸೆ
2010 30 ಪೈಸೆ
2011 28 ಪೈಸೆ
2012 13 ಪೈಸೆ
2013 13 ಪೈಸೆ
2017 48 ಪೈಸೆ
2019 35 ಪೈಸೆ
2020 30 ಪೈಸೆ
ಪ್ರತಿ ವರ್ಷ ನವೆಂಬರ್ ನಲ್ಲಿ ಎಸ್ಕಾಂಗಳು ಪ್ರಸ್ತಾವೆಯನ್ನ ಸಲ್ಲಿಸಿವೆ.., ಅಳೆದು ತೂಗಿ KERC ಗ್ರಾಹಕ್ರಿಗೆ ಹೊರೆ ಆಗದ ರೀತಿಯಲ್ಲಿ ದರ ಪರಿಷ್ಕರಣೆ ಮಾಡಲಿದೆ.., ಒಂದು ವೇಳೆ ದರ ಪರಿಷ್ಕರಣೆ ಆಗಿದ್ದೇ ಆದಲ್ಲಿ ಏಪ್ರಿಲ್ ನಿಂದ ಹೊಸ ದರ ಜಾರಿಗೆ ಬರೋ ಸಾಧ್ಯತೆಯಿದೆ.