ಬೆಂಗಳೂರು, (www.thenewzmirror.com) :
ದೊಡ್ಮನೆ ಕುಟುಂಬಕ್ಕೆ ಮತ್ತೊಂದು ಶಾಕ್ ಅಗಿದೆ. ಈಗಾಗಲೇ ಪುನೀತ್ ರಾಜ್ ಕುಮಾರ್ ನಿಧನದಿಂದ ಇಡೀ ಕರುನಾಡೇ ಶೋಕಸಾಗರದಲ್ಲಿ ಮುಳುಗಿದೆ. ಅದ್ರಲ್ಲೂ ದೊಡ್ಮನೆ ಕುಟುಂಬ ಅಂತೂ ದುಂಖ ಸಾಗರದಲ್ಲೇ ಇನ್ನೂ ಇದೆ.
ಪುನೀತ್ ಅಗಲಿ ಹತ್ರತ್ರ ಮೂರುವರೆ ತಿಂಗಳು ಕಳೀತಾ ಇದೆ. ದೊಡ್ಮನೆ ಕುಟುಂಬ ನಿಧಾನಕ್ಕೆ ಪುನೀತ್ ಅಗಲಿಕೆಯ ನೋವನ್ನ ಕಡಿಮೆ ಮಾಡಿಕೊಳ್ಳುತ್ತಾ ಬರ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಗಂಧದ ಗುಡಿ ಪ್ರೋಮೋ ರಿಲೀಸ್ ಆಯ್ತು.. ,ಇದ್ರ ಬೆನ್ನಲ್ಲೇ ಜೇಮ್ಸ್ ಟೀಸರ್ ಕೂಡ ಬಿಡುಗಡೆಯಾಗಿದೆ. ಹಾಗೆನೇ ಪುನೀತ್ ಕಸನಿನ PRK ಆಡಿಯೋ ಮೂಲಕ ಸಿನೆಮಾ ನಿರ್ಮಾಣದ ಕಾರ್ಯಗಳೂ ನಡೀತಾ ಇದೆ.
ಇನ್ನೇನು ಕನ್ನಡ ಚಿತ್ರರಂಗದ ಜತೆಗೆ ದೊಡ್ಮನೆ ಕುಟುಂಬ ನೋವನ್ನ ಮರೆತು ನಾರ್ಮಲ್ ಆಗಿ ಕಾಲ ಕಳೆಯುತ್ತಿದೆ ಅನ್ನುತ್ತಿರುವಾಗ್ಲೇ ಮತ್ತೊಂದು ಶಾಕಿಂಗ್ ನ್ಯೂಸ್ ಬಂದೆರಗಿದೆ.
ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ ಮಾವ, ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ತಂದೆ ಭಾಗಮನೆ ರೇವನಾಥ್ ಹೃದಯಾಘಾತದಿಂದ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದಿಂದ ದೊಡ್ಮನೆಯಲ್ಲಿ ಮತ್ತೆ ಶೋಕ ಮಡುಗಟ್ಟಿದೆ.
ಚಿಕ್ಕಮಗಳೂರು ಮೂಲದ ರೇವನಾಥ್ ಅವರಿಗೆ 78 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
20 ವರ್ಷಗಳ ಹಿಂದೆ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆಯಾಗಿ ಆ್ಯಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಎನ್ಹೆಚ್ಎಐ ಮುಖ್ಯ ಇಂಜಿನಿಯರ್ ಆಗಿ ರೇವನಾಥ್ ನಿವೃತ್ತಿ ಹೊಂದಿದ್ದರು. ಪುನೀತ್ ರಾಜ್ಕುಮಾರ್ ನಿಧನದ ನಂತರ ತೀವ್ರ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗುತ್ತಿದೆ.
ಕೆಲ ತಿಂಗಳ ಹಿಂದೆ ಪುನೀತ್ ರಾಜ್ಕುಮಾರ್ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದು, ಅವರ ಪತ್ನಿ ಅಶ್ವಿನಿ ಅವರಿಗೆ ತೀವ್ರ ಆಘಾತ ಉಂಟು ಮಾಡಿತ್ತು. ಆ ನೋವು ಇನ್ನೂ ಹಸಿಯಾಗಿರುವಾಗಲೇ ಮತ್ತೊಂದು ಆಘಾತ ಎದುರಾಗಿದೆ.
ಪುನೀತ್ ನಿಧನಕ್ಕೆ ಇಂದಿಗೂ ಕೂಡ ಹಲವರು ಅಶ್ವಿನಿ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ. ಪರಭಾಷೆಯ ಅನೇಕ ಸ್ಟಾರ್ ಕಲಾವಿದರು ಪುನೀತ್ ನಿವಾಸಕ್ಕೆ ಭೇಟಿ ನೀಡಿ, ಅಶ್ವಿನಿಗೆ ಧೈರ್ಯ ತುಂಬುತ್ತಿದ್ದಾರೆ. ಇನ್ನೇನು ಅವರು ಸಹಜ ಸ್ಥಿತಿಗೆ ಮರಳುತ್ತಿರುವಾಗಲೇ ಕುಟುಂಬದಲ್ಲಿ ಮತ್ತೊಂದು ಸಾವು ಸಂಭವಿಸಿದೆ.