ಬೆಂಗಳೂರು,(www.thenewzmirror.com):
ಬೆಂಗಳೂರಿನ ಜನರ ಪರ್ಯಾಯ ಸಾರೊಹೆ ವ್ಯವಸ್ಥೆಯಾಗಿರುವ ನಮ್ಮ ಮೆಟ್ರೋ ಮತ್ತೊಂದು ಸಾಧನೆ ಮಾಡಿದೆ. ಸುರಂಗ ಕೊರೆಯುತ್ತಿದ್ದ ಎರಡು ಟಿಬಿಎಂ ಯಂತ್ರಗಳು ಇದೀಗ ಹೊರ ಬಂದಿದ್ದು ಮೆಟ್ರೋ ಕಾಮಗಾರಿಗೆ ಮತ್ತಷ್ಟು ವೇಗ ಸಿಕ್ಕಂತಾಗಿದೆ.
ರುದ್ರ ಹಾಗೂ ವರದಾ ಎಂಬ ಎರಡು ಟಿಬಿಎಂ ಯಂತ್ರಗಳು ಹೊರ ಬಂದಿರುವ ಬಗ್ಗೆ ಮೆಟ್ರೋ ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ನೀಡಿದ್ದು ನಿರೀಕ್ಷೆಗೂ ಮೀರಿ ಕಾರ್ಯನಿರ್ವಹಿಸಿದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎರಡೂ ಟಿಬಿಎಂ ಯಂತ್ರ ಗಳು ಜರ್ಮನ್ ನಿಂದ ತರಲಾಗಿದ್ದು, ರಾಷ್ಟ್ರೀಯ ಮಿಲಿಟರಿ ನಿಲ್ದಾಣದಿಂದ ಲ್ಯಾಂಗ್ ಫೋರ್ಟ್ ನಿಲ್ದಾಣದ ವರೆಗೂ ಸುರಂಗ ಕೊರೆದ ವರದಾ, ಎಂಟು ತಿಂಗಳಲ್ಲಿ 594 ಮೀಟರ್ ಹಾಗೂ 614 ಮೀಟರ್ ಸುರಂಗ ಕೊರೆದ ಇಂದು ಹೊರಬಂದ ರುದ್ರ ಟಿಬಿಎಂ ಕಾರ್ಯಕ್ಕೆ ಮೆಟ್ರೋ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.