ಬೆಂಗಳೂರು,(www.thenewzmirroe.com) :
ಮೆಟ್ರೋ ಪ್ರಯಾಣಿಕ್ರಿಗೊಂದು ಗುಡ್ ನ್ಯೂಸ್ ಸಿಕ್ಕಿದೆ. ಭಾನುವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ಮೆಟ್ರೋ ಓಡಾಟ ಬೆಳಗ್ಗೆ 5 ಗಂಟೆಯಿಂದಲೇ ಓಡಾಟ ಇರಲಿದೆ ಅಂತ ಮೆಟ್ರೋ ನಿಗಮ ಮಾಹಿತಿ ನೀಡಿದೆ..,
ಬೆಂಗಳೂರಿಗೆ ರಾಜ್ಯದ ಬೇರೆ ಬೇರೆ ಊರುಗಳಿಂದ ಬಂದಿದ್ದ ಪ್ರಯಾಣಿಕ್ರು ಮೆಟ್ರೋಗಾಗಿ ಬೆಳಗಿನ ಜಾವದಿಂದಲೇ ಕಾಯುತ್ತಿದ್ದರು.., ಮೆಟ್ರೋ ಆರಂಭದ ಅವಧಿಯನ್ನ ವಿಸ್ತರಿಸಿ ಅಂತಾಲೂ ಮನವಿ ಮಾಡುತ್ತಿದ್ದರು. ಇದೀಘ ಪ್ರಯಾಣಿಕರ ಒತ್ತಾಯಕ್ಕೆ ಮಣಿದ ನಿಗಮ, ಸೋಮವಾರದಿಂದ ಶನಿವಾರದ ವರೆಗೂ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆ ವರೆಗೂ ವಿಸ್ತರಣೆ ಮಾಡಿದೆ. ಭಾನುವಾರ ಎಂದಿನಂತೆ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದೆ ಅಂತ ಮೆಟ್ರೋ ತಿಳಿಸಿದೆ.