ಮಹಾಕಾಳೇಶ್ವರ ದೇವಸ್ಥಾನ; .thenewzmirror.com ;
56 ಕೋಟಿ ರೂ. ವೆಚ್ಚದ ಮಧ್ಯಪ್ರದೇಶದ ‘ಮಹಾಕಾಲೇಶ್ವರ ದೇವಾಲಯ’ ಕಾರಿಡಾರ್ ಅಭಿವೃದ್ಧಿ ಯೋಜನೆಯ ಮೊದಲ ಹಂತದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ್ರು.
ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉಜ್ಜಯಿನಿಯಲ್ಲಿ ಪ್ರವಾಸೋದ್ಯಮ ಗಮನಾರ್ಹವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಮಹಾಕಾಲ ಲೋಕ ಕಾರಿಡಾರ್‌ನ ಮುಖ್ಯಗೇಟ್ ವೇ ‘ನಂದಿ ದ್ವಾರ’ದ ಕೆಳಗೆ ಬೃಹತ್ ಶಿವಲಿಂಗವನ್ನು ಪವಿತ್ರ ದಾರ (ಮೋಲಿ)ಯಿಂದ ಸುತ್ತಿ ಮುಚ್ಚಿಡಲಾಗಿದೆ. ಈ ಕಾರಿಡಾರ್ ಉದ್ಘಾಟನೆ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಈ ಶಿವಲಿಂಗವನ್ನು ಅನಾವರಣಗೊಳಿಸಿದ್ರು.
12 ಜೋತಿರ್ಲಿಂಗ ಕ್ಷೇತ್ರಗಳಲ್ಲಿ ಉಜ್ಜಯಿನಿ ಮಹಾಕಾಲೇಶ್ವರ ದೇಗುಲವೂ ಒಂದು. ಇದನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿ 2017ರಲ್ಲಿ ಕಾಮಗಾರಿ ಆರಂಭಿಸಲಾಯಿತು. 856 ಕೋಟಿ ವೆಚ್ಚದ 1ನೇ ಹಂತದ ಕಾಮಗಾರಿ ಇದೀಗ ಪೂರ್ಣಗೊಂಡಿದೆ. ಅಭಿವೃದ್ಧಿ ಯೋಜನೆಯಿಂದಾಗಿ ದೇಗುಲದ ವಿಸ್ತೀರ್ಣ 2.87 ರಿಂದ 47 ಹೆಕ್ಟೆರ್‌ಗೆ ವಿಸ್ತರಣೆಗೊಂಡಿದೆ. ದೇಶದಲ್ಲೇ ಅತಿ ಉದ್ದವಾದ 900 ಮೀಟರ್ ಕಾರಿಡಾರ್ ಇದಾಗಿದೆ.
ಏನಿದೆ ವಿಶೇಷತೆ?
- 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಮಹಾಕಾಲವೂ ಒಂದು
- ಇದರ ಜಾಗ ಇಕ್ಕಟ್ಟಿನಿಂದ ಕೂಡಿತ್ತು. ಭಕ್ತರು ಓಡಾಡುವುದು ಬಹಳ ಕಷ್ಟವಾಗುತ್ತಿತ್ತು
- ಇದನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿ 2017 ರಲ್ಲಿ ಕಾಮಗಾರಿ ಆರಂಭಿಸಲಾಯಿತು
- 856 ಕೋಟಿ ರೂ. ವೆಚ್ಚದ 1ನೇ ಹಂತದ ಕಾಮಗಾರಿ ಪೂರ್ಣ
- ಅಭಿವೃದ್ಧಿ ಯೋಜನೆಯಿಂದಾಗಿ ದೇಗುಲದ ವಿಸ್ತೀರ್ಣ 2.87 ರಿಂದ 47 ಹೆಕ್ಟೇರ್‌ಗೆ ಹೆಚ್ಚಾಗಿದೆ
- ದೇಶದಲ್ಲೇ ಅತಿ ಉದ್ದದಾದ 900 ಮೀಟರ್ ಕಾರಿಡಾರ್ ಅನ್ನು ನಿರ್ಮಾಣ ಮಾಡಲಾಗಿದೆ
- ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳೂ ಸಂಚರಿಸುವುದಕ್ಕೆ ಅವಕಾಶ ಕಲ್ಪಿಸಿರುವುದು ವಿಶೇಷ
- ಶಿವ ಪುರಾಣ ಆಧರಿಸಿ ಕಾರಿಡಾರ್‌ನ ಪ್ರಾರಂಭದಲ್ಲಿ 2 ಬೃಹತ್ ಹೆಬ್ಬಾಗಿಲು ಸೃಷ್ಟಿ
- ರಾಜಸ್ಥಾನದ ಮರಳುಕಲ್ಲುಗಳನ್ನು ಬಳಸಿ 3 ರಾಜ್ಯಗಳ ಕಲಾವಿದರಿಂದ ಕೆತ್ತನೆ ಕೆಲಸ
- ಪ್ರವಾಸಿಗರಿಗಾಗಿ ಪಾರ್ಕಿಂಗ್ ವ್ಯವಸ್ಥೆ ಸೇರಿ ವಿವಿಧ ಸೌಕರ್ಯ