ಬೆಂಗಳೂರು, ( www.thenewzmirror.com ) :
ಒಂದ್ಕಡೆ ಕರ್ನಾಟಕ, ಕನ್ನಡಾಂಬೆಗೆ ಮಾಡಿದ ಅಪಮಾನ.., ಮತ್ತೊಂದ್ಕಡೆ ಕನ್ನಡಿಗರ ಒಗ್ಗಟ್ಟು ಪ್ರದರ್ಶನ ಮಾಡೋ ಸಮಯ.., ಇದೆಲ್ಲಾದರ ನಡುವೆ ವಿವಿಧ ಕನ್ನಡ ಪರ ಸಂಘಟನೆಗಳು ಇದೇ 31 ರಂದು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿವೆ. ಇದೆಲ್ಲದ್ರ ನಡುವೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಬರೆದಿರೋ ಪತ್ರವೊಂದು ಭಾರೀ ಚರ್ಚೆಗೆ ಕಾರಣವಾಗೋ ಜತೆಗೆ ಹೋರಾಟಗಾರರ ಹೆಜ್ಜೆ ಹಿಂದೆ ಇಡುವಂತೆ ಮಾಡಿದೆ.
ಸಾಮಾಜಿಕ ಹೋರಾಟಗಾರ ಹೆಚ್. ಎಂ. ವೆಂಕಟೇಶ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಬರೆದ ಪತ್ರ ಇದೀಗ ಕನ್ನಡ ಹೋರಾಟಗಾರರು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ.
ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿರುವುದರಿಂದ ಬಂದ್ ನಿಂದ ಆಗುವ ನಷ್ಟಗಳನ್ನ ತುಂಬಿ ಕೊಡುವಂತೆ ಮುಚ್ಚಳಿಕೆಬರೆಸಿಕೊಳ್ಳುವ ಬಗ್ಗೆ ಎಂಬ ಶೀರ್ಷಿಕೆಯಡಿ ಇ- ಮೇಲ್ ಮಾಡಿರೋದು ಕನ್ನಡಿಗರ ಸ್ವಾಭಿಮಾನ ಕೆರಳುವಂತೆ ಮಾಡಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗ್ತಿದೆ.
ಕೊರೊನಾ ಸನ್ನಿವೇಶದಲ್ಲಿ ಜನರ ಬದುಕುಗಳಿಗೆ ಆರ್ಥಿಕ ಹಿಂಜರಿತ ಎನ್ನೋದು ಬಲವಾದ ಪೆಟ್ಟು ನೀಡಿದೆ.ಇಂಥಾ ಸಂದರ್ಭದಲ್ಲಿ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿರುವ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಪರ ಸಂಘಟನೆಗಳ ಧೋರಣೆ ಖಂಡಿತಾ ಸರಿಯಲ್ಲ..ಈ ಹೋರಾಟಗಾರರಿಗೆ ಕರ್ನಾಟಕ್ ಬಂದ್ ನಿಂದ ಆಗಬಹುದಾದ ನಷ್ಟ ತುಂಬಿಕೊಡಲಿಕ್ಕೆ ಸಾಧ್ಯವಿದೆಯಾ..? ಎಂದು ಪ್ರಶ್ನಿಸಿರುವ ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಪೊಲೀಸ್ ಕಮಿಷನರ್ ಗೆ ಕನ್ನಡಪರ ಹೋರಾಟಗಾರರಿಂದ ಮುಚ್ಚಳಿಕೆ ಬರೆಯಿಸಿಕೊಂಡೇ ಅನುಮತಿ ಕೊಡುವ ಬಗ್ಗೆ ಪರಿಶೀಲಿಸಿ ಎಂದು ಮನವಿ ಮಾಡಿದ್ದಾರೆ.
ಡಿಸೆಂಬರ್ 31 ರಂದು ರಾಜ್ಯದ ಜನತೆ ಹೊಸ ವರ್ಷದ ಸ್ವಾಗತ ಮಾಡುವ ತವಕದಲ್ಲಿರುವಾಗ್ಲೇ ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ, ಗಿರೀಶ್ ಗೌಡ ಸೇರಿಸಂತೆ ಹಲವು ಕನ್ನಡಪರ ಸಂಘಟನೆಗಳು ಅಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೂ ಕರ್ನಾಟಕ ಬಂದ್ ಗೆ ಕರೆಕೊಟ್ಟಿವೆ. ಕೂಡಲೇ ಎಂಇಎಸ್ ಅನ್ನ ನಿಷೇಧ ಮಾಡಬೇಕು ಎನ್ನುವುದು ಇವರ ಪ್ರಮುಖ ಬೇಡಿಕೆಯಾಗಿದೆ.
ಕನ್ನಡದ ಅಸ್ಮಿತೆಗೆ ಮರಾಠಿಗರಿಂದ ಅಪಮಾನವಾಗಿದೆ..ಇದು ಪ್ರತಿಯೋರ್ವ ಕನ್ನಡಿಗ ಖಂಡಿಸುವ ಸಂಗತಿ…, ಒಂದು ವೇಳೆ ಬಂದ್ ಆಗಿದ್ದೇ ಆದಲ್ಲಿ ಆಗುವಂಥಹ ನಷ್ಟ ಭರಿಸುವವರು ಯಾರು ಎನ್ನುವ ಪ್ರಶ್ನೆಗೆ ಕನ್ನಡ ಪರ ಸಂಘಟನೆಗಳಿಂದ ಯಾವುದೇ ಉತ್ತರ ಸಿಗೋದಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋ ಸತ್ಯನೇ…
ಇದೇ ವಿಚಾರವನ್ನ ಇಟ್ಟುಕೊಂಡು ಸಾಮಾಜಿಕ ಹೋರಾಟಗಾರ ನಗರ ಪೊಲೀಸ್ ಆಯುಕ್ತರಿಗೆ ಇ- ಮೇಲ್ ಮಾಡಿದ್ದು ಯಾರು ಬಂದ್ ಗೆ ಕರೆ ಕೊಡ್ತಾರೋ ಅವ್ರಿಂದ ನಷ್ಟ ತುಂಬಿಸಿಕೊಳ್ಳುವಂತೆ ಮುಚ್ಚಳಿಕೆ ಬರೆಸಿಕೊಳ್ಳಿ ಅಂತ ಮನವಿ ಮಾಡಿದ್ದಾರೆ.
ಕೋರ್ಟ್ ಕೂಡ ಯಾರು ಬಂದ್ ಗೆ ಕರೆಕೊಡ್ತಾರೋ ಅವ್ರಿಂದ ನಷ್ಟವನ್ನ ಭರಿಸಬೇಕೆಂಬ ಆದೇಶವಿದೆ. ಅದೇ ಆದೇಶವನ್ನ ಉಲ್ಲೇಖಿಸಿ ಸಾಮಾಜಿಕ ಹೋರಾಟಗಾರ ಈ ಪತ್ರ ಬರೆದಿದ್ದು ಕನ್ನಡ ಪರ ಹೋರಾಟಗಾರರ ಸಿಟ್ಟಿಗೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗ್ತಿದೆ.
ಬಂದ್ ಮಾಡುವುದರಿಂದ ಬೀದಿಬದಿ ವ್ಯಾಪಾರಿಗಳು, ಹೊಟೇಲ್, ವ್ಯಾಪಾರ ವಹಿವಾಟಿನ ಮೇಲೆ ಜೊಡೆತ ಬೀಳಲಿದೆ. ಹೀಗಾಗಿ ಬಂದ್ ವಾಪಾಸ್ ಪಡೆಯುವಂತೆ ಮನವಿ ಮಾಡಿ, ಒಂದು ವೇಳೆ ಒಪ್ಪದಿದ್ದರೆ ಬಂದ್ ನಿಂದ ಆಗುವ ನಷ್ಟವನ್ನ ಭರಿಸುವಂತೆ ಸೂಚನೆ ನೀಡಿ ಅಂತ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಈವರೆಗೂ ಕರ್ನಾಟಕ ಬಂದ್ ಗೆ ಅವಕಾಶ ನೀಡಬೇಕೆಂದು ಕನ್ನಡಪರ ಹೋರಾಟಗಾರರು ಮನವಿ ಸಲ್ಲಿಸಿಲ್ಲವಂತೆ ಒಂದು ವೇಳೆ ಮನವಿ ಸಲ್ಲಿಸಿದರೆ ಮುಚ್ಚಳಿಕೆ ಒತದರ ಬರೆಸಿಕೊಳ್ಳೋ ಅನಿವಾರ್ಯತೆಯಿದೆ. ಬಂದ್ ಗೆ ಮುಚ್ಚಳಿಕೆ ಬರೆಸಿಕೊಳ್ಳದೆ ಅವಕಾಶ ಕೊಟ್ಟರೆ ಅದು ಕೋರ್ಟ್ ಆದೇಶ ಉಲ್ಲಂಘನೆ ಮಾಡಿದಂತಾಗುತ್ತೆ. ಈ ನಿಟ್ಟಿನಲ್ಲಿ ಕಮಿಷನರ್ ಕಮಲಪಂತ್ ಆಲೋಚಿಸಬೇಕಿದ್ದು, ಕನ್ನಡಪರ ಹೋರಾಟಗಾರರನ್ನ ಕರೆಸಿ ಮನವೊಲಿಸುತ್ತಾರಾ ಇಲ್ಲಾ ಅನುಮತಿ ಕೊಟ್ಟು ಮುಚ್ಚಳಿಕೆ ಬರೆಸಿಕೊಳ್ತಾರಾ ಕಾದು ನೋಡ್ಬೇಕು.
ಸಾಮಾಜಿಕ ಕಾರ್ಯಕರ್ತ ಹೆಚ್. ಎಂ ವೆಂಕಟೇಶ್ ಬರೆದಿರುವ ಪತ್ರ ಕೆಲವರಿಗೆ ಅತಿ ಅನಿಸಿದರೂ ವಾಸ್ತವದಲ್ಲಿ ಪತ್ರ ಬರೆದಿದ್ದು ಮುಂದೆ ಯಾರಾದರೂ ಇಂಥ ನಿರ್ಧಾರ ಮಾಡುತ್ತಾರೆ ಅಂದರೆ ಯೋಚನೆ ಮಾಡುವ ಸ್ಥಿತಿ ನಿರ್ಮಾಣವಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.