ಬೆಂಗಳೂರು,(www.thenewzmirror.com):
ನಾಳೆ ಡೇಟ್ ಗೆ ಇವತ್ತೇ ನೊಟೀಸ್…?!! ಅರೇ ಇದೇನಿದು ಅಂತ ಹುಬ್ಬೇರಿಸ್ಬೇಡಿ.., ಹೀಗೆ ಒಂದು ದಿನ ಮುಂಚಿತವಾಗಿಯೇ ನೊಟೀಸ್ ಕೊಡುವ ಕೆಲ್ಸ ದೇಶದ ನಂಬರ್ ಒನ್ ಸಾರಿಗೆ ಸಂಸ್ಥೆಯಲ್ಲಿ ಆಗ್ತಿದೆ.
ಅರೇ ಇದೇನಪ್ಪಾ ಹಿಂಗೆ ಅಂತ ಯೋಚ್ನೇ ಮಾಡ್ತಾ ಇದ್ದೀರಾ..? KSRTC ಯಲ್ಲಿ ಅಪರಾಧ ಜ್ಞಾಪನಾ ಪತ್ರವನ್ನ ಒಂದು ದಿನ ಮುಂಚಿತವಾಗಿ ಡೇಟ್ ಹಾಕಿ ಸಿಬ್ಬಂದಿಗೆ ನಿಒಡುವ ಕೆಲ್ಸ ಆಗ್ತಿದೆ.
ಇದೆಂಥಾ ಹುಚ್ಚು ರೀ.., ಅಧಿಕಾರಿಗಳು ಏನು ಕಣ್ಣನ್ನ ನೆತ್ತಿ ಮೇಲೆ ಇಟ್ಟುಕೊಂಡು ಶ್ರಮಿಕ ವರ್ಗಕ್ಕೆ ನೊಟೀಸ್ ಕೊಡ್ತಾ ಇದ್ದಾರಾ ಅನ್ನೋ ಪ್ರಶ್ನೆ ಉದ್ಬವವಾಗ್ತಿದೆ.
ಹುಣಸೂರಿನಿಂದ ಮೈಸೂರಿಗೆ KSRTC ಬಸ್ ಓಡಾಟ ನಡೆಸ್ತಾ ಇತ್ತು. ಈ ವೇಳೆ ತನಿಖಾಧಿಕಾರಿ ಬಸ್ ಅನ್ನ ಹತ್ತಿ ಟಿಕೆಟ್ ಚೆಕ್ ಮಾಡುವ ಕೆಲ್ಸವನ್ನ ಮಾಡಿದ್ರು. ಚೆಕ್ ಮಾಡುವ ವೇಳೆ ಟಿಕೆಟ್ ಸರಿ ಇತ್ತೋ ಇಲ್ಲ ಹೆಚ್ಚಿತ್ತೋ..? ಅದನ್ನ ನಾವು ಪ್ರಶ್ನೆ ಮಾಡ್ತಾ ಇಲ್ಲ. ಬದ್ಲಾಗಿ ಟಿಕೆಟ್ ಪರಿಶೀಲನೆ ನಡೆಸಿದಾಗ ಈಗಾಗಲೇ ನೀಡಿರೋ ಟಿಕೆಟ್ ಕಂಡಕ್ಟರ್ ಬಳಿ ಇತ್ತಂತೆ.
ಬಸ್ ನಲ್ಲಿದ್ದ ಪ್ರಯಾಣಿಕರಿಗೂ ಟಿಕೆಟ್ ಗೂ ಸಂಬಂಧವಿಲ್ಲ ಅನ್ನೋದನ್ನ ಅರಿತ ಮಹಾನುಭಾವ ತನಿಖಾಧಿಕಾರಿಗಳಾದ ಪ್ರಶಾಂತಯ್ಯ ಹಾಗೂ ಮಲ್ಲೇಶ್ ಕಂಡಕ್ಟರ್ ಗೆ ನೊಟೀಸ್ ಕೊಟ್ಟರು.
ನೊಟೀಸ್ ಕೊಟ್ಟಿದ್ದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ ತಪಾಸಣೆ ಮಾಡಿದ್ದು ಇವತ್ತು ಅಂದರೆ ಜನವರಿ 28-01-2022 ರಂದು ಆದರೆ ನೊಟೀಸ್ ಕೊಟ್ಟಿದ್ದು 29-01-2022 ರಂದು ಎಂದು ಉಲ್ಲೇಖ ಮಾಡಿದ್ದಾರೆ.
ಇದ್ಯಾವ ಸೀಮೆ ತನಿಖೆ ಮಹಾನುಭಾವರೇ..? KSRTC ಯಲ್ಲಿ ಇಂಥ ರೀತಿಯಲ್ಲಿಯೇ ತನಿಖೆ ನಡೆಸ್ಬೇಕು ಅಂತ ಏನಾದರೂ ಆದೇಶವಿದೆಯಾ..? ಹೀಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರ್ತಿದೆ.
ನಿಯಮ ಹೇಳೋದು ಏನು.?
ತನಿಖಾಧಿಕಾರಿ ನಿರ್ದಿಷ್ಟ ನಿಗದಿತ ಸ್ಥಳದಲ್ಲಿ ಬಸ್ ಹತ್ತಬೇಕು ಆನಂತರ ತನಿಖೆ ನಡೆಸಬೇಕು.., ಈ ವೇಳೆ ಲೋಪವೇನಾದರೂ ಕಂಡು ಬಂದರೆ ನೊಟೀಸ್ ನೀಡಬೇಕು. ಯಾವ ದಿನ ತಪಾಸಣೆ ನಡೆಸುತ್ತಿರೋ ಅದೇ ದಿನವೇ ನೊಟೀಸ್ ನೀಡಬೇಕು ಎನ್ನುವ ನಿಯಮವಿದೆ.
ಆದರೆ ಈ ಎಲ್ಲಾ ನಿಯಮ ಗಾಳಿಗೆ ತೂರಿರೋ ದಿನಾಂಕವೇ ಗೊತ್ತಿಲ್ಲದ ತನಿಖಾಧಿಕಾರಿ ಮಹಾಶಯರು ಮಾರನೇ ದಿನದ ದಿನಾಂಕ ನಮೂದು ಮಾಡಿ ನೊಟೀಸ್ ಕೊಟ್ಟಿದ್ದು ಹಾಸ್ಯಕ್ಕೆ ಹಾಗೂ ಟೀಕೆಗೆ ಗುರಿಯಾಗಿದೆ.
ಕೇವಲ ಎಸಿ ರೂಮಿನಲ್ಲಿ ಕೂರುವ ಎಂಡಿಯಾದಿಯಾಗಿ ಇಂಥ ಅಸಡ್ಡೆ, ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.