ಬೆಂಗಳೂರು, (www.thenewzmirror.com) :
ನೈಸ್ ರಸ್ತೆಯಲ್ಲಿ ಓಡಾಡುವವ ವಾಹನಗಳಿಗೆ ಹೊಸ ಆದೇಶ ಜಾರಿ ಮಾಡಲಾಗಿದೆ. ನೈಸ್ ರಸ್ತೆ ಅಂದ್ರೆ ಅಲ್ಲಿ ಆಕ್ಸಿಡೆಂಟ್ ಗಳು ಜಾಸ್ತಿ ಆಗ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು ಅನ್ನೋ ಒತ್ತಾಯಾನೂ ಕೇಳಿ ಬರ್ತಿತ್ತು. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜನವರಿ 16 ರಿಂದ ಹೊಸ ನಿಯಮ ಜಾರಿ ಮಾಡಲು ಮುಂದಾಗಿದೆ.
ಹೌದು, ಜನವರಿ 16 ರಿಂದ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆ ವರೆಗೂ ದ್ವಿಚಕ್ರ( ಟೂ ವೀಲ್ಹರ್) ಓಡಾಟ ಮಾಡೋದಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ. ರಾತ್ರಿ ವೇಳೆ ಟೂ ವೀಲ್ಹರ್ ನಲ್ಲಿ ವೀಲಿಂಗ್ ಮಾಡುವುದು ಸೇರಿದಂತೆ ಸಾಕಷ್ಟು ಆಕ್ಸಿಡೆಂಟ್ ಗಳೂ ಕೂಡ ಆಗ್ತಿತ್ತು.
ಈ ಎಲ್ಲಾ ಕಾರಣಗಳಿಂದಾಗಿ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಜತೆಗೆ ಬೆಂಗಳೂರು ನಗರ ಸಂಚಾರಿ ವಿಭಾಗದ ಜಂಟಿ ಆಯುಕ್ತರ ಸೂಚನೆ ಮೇರೆಗೆ ಈ ನಿರ್ಧಾರ ಅಂತ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.