ನ್ಯೂ ಇಯರ್; ಪಬ್, ರೆಸ್ಟೋರೆಂಟ್ ಗಳಿಗೆ ಹೊಸ ಗೈಡ್ ಲೈನ್ಸ್

ಬೆಂಗಳೂರು, (www.thenewzmirror.com) :

ಸದ್ಯ ಕೊರೋನಾ ಮೂರನೆ ಅಲೆಗೆ ಕಾರಣವಾಗುವ ಒಮಿಕ್ರಾನ್ ವೈರಸ್ ಅಟ್ಟಹಾಸ ಹೆಚ್ಚಾಗ್ತಿದೆ. ಇದರ ಬೆನ್ನಲ್ಲೆ ರಾಜ್ಯ ಸರ್ಕಾರ ಕ್ರಿಸ್ ಮಸ್ ಹಾಗೂ ಹೊಸ ವರ್ಷಕ್ಕೆ ಹೊಸ ಗೈಡ್ ಲೈನ್ಸ್‌ ಬಿಡುಗಡೆ ಮಾಡಿದೆ.

RELATED POSTS

ಬೆಂಗಳೂರಿನಲ್ಲಿ ಹೊಸವರ್ಷಾಚರಣೆ ಅಂದ್ರೆ ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆಯೇ ಹೈಲೇಟ್ ಆಗಿರ್ತಾಇತ್ತು. ಆದ್ರೆ ಈ ಬಾರಿ ಅದಕ್ಕೆ ರಾಜ್ಯ ಬ್ರೇಕ್ ಹಾಕಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಾಚರಣೆಗೆ ಬ್ರೇಕ್ ಹಾಕಿದೆ. ಸಾರ್ವಜನಿಕ ಸ್ಥಳಗಳು ಸೇರಿದಂತೆ ರಸ್ತೆಗಳು, ಆಟದ ಮೈದಾನದಲ್ಲಿ ಸಂಭ್ರಮಾಚರಣೆಗೆ ನಿರ್ಬಂಧ ವಿಧಿಸಿದೆ.

ಕೇವಲ ಹೊಸ ವರ್ಷ ಅಷ್ಟೇ ಅಲ್ಲ ಕ್ರಿಸ್ ಮಸ್ ಆಚರಣೆಗೂ ಕೆಲ‌ ನಿರ್ಭಂಧ ಹೇರಿದೆ. ಚರ್ಚ್ ಆವರಣದದಲ್ಲಿ ಕೋವಿಡ್ ಮಾರ್ಗಸೂಚಿ ಅನ್ವಯ ಪ್ರಾರ್ಥನೆ ಮಾಡುವುದು.


ಪ್ರಾರ್ಥನೆಗಳನ್ನು ನಡೆಸಲು ಯಾವುದೇ ಸಾರ್ವಜನಿಕ ಸ್ಥಳಗಳು, ರಸ್ತೆಗಳು, ಉದ್ಯಾನವನಗಳನ್ನ ಬಳಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.

ಹೊಸ ವರ್ಷಾಚರಣೆಗೆ ಮಾರ್ಗಸೂಚಿಗಳು

  • ಸಾಮೂಹಿಕ ನೃತ್ಯ ಹಾಗೂ ಡಿ.ಜೆ ಕಾರ್ಯಕ್ರಮಗಳಿಗೆ ನಿರ್ಬಂಧ
  • ಕ್ಲಬ್ ಗಳು/ಪಬ್ ಗಳು. ರೆಸ್ಟೋರೆಂಟ್ ಗಳು/ಹೋಟೆಲ್ ಗಳು/ಉದ್ಯಾನವನಗಳು ಅಥವಾ ಖಾಸಗಿ ಸ್ಥಳಗಳಲ್ಲಿ ಡಿಜೆ / ಅರ್ಕೇಸ್ಟ್ರಾ / ಸಮೂಹ ನೃತ್ಯ ಸೇರಿದಂತೆ ಮುಂತಾದ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.
  • ಹೊಸ ವರ್ಷವನ್ನು ಆಚರಿಸಲು ಸಾರ್ವಜನಿಕ ಸ್ಥಳಗಳು ಸೇರಿದಂತೆ ರಸ್ತೆಗಳು, ಉದ್ಯಾನವನಗಳು, ಆಟದ ಮೈದಾನಗಳು ಇತ್ಯಾದಿಗಳನ್ನು ಬಳಸಬಾರದು.
  • ರೆಸ್ಟೋರೆಂಟ್ ಹಾಗೂ ಪಬ್ ಗಳಲ್ಲಿ ಸಿಬ್ಬಂದಿಗಳು ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯವಾಗಿ ಪಡೆದಿರಬೇಕು ಹಾಗೂ ಕೊರೊನಾ ಮಾರ್ಗಸೂಚಿ ಪಾಲನೆ ಕಡ್ಡಾಯ
  • ರೆಸ್ಟೋರೆಂಟ್ ಹಾಗೂ ಪಬ್ ಗಳಿಗೆ ಭೇಟಿ ನೀಡುವ ಸಾರ್ವಜನಿಕರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು.
  • ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವಿಕೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist