ಬೆಂಗಳೂರು, (www.thenewzmirror.com) :
ಪರಪ್ಪನ ಅಗ್ರಹಾರ ಜೈಲು ಅಂದ್ರೆ ಅಲ್ಲಿ ಕೈದಿಗಳು ದಿನ ಕಳೆಯೋದು ಅಂದ್ರೆ ಸಿಕ್ಕಾಪಟ್ಟೆ ಕಷ್ಟ ಇರುತ್ತೆ ಅನ್ನೋ ಮಾಹಿತಿ ಸಿಗ್ತಾ ಇತ್ತು. ಆದ್ರೆ ದಿನ್ಯೂಝ್ ಮಿರರ್ ಗೆ ಸಿಕ್ಕಿರೋ ವೈರಲ್ ಆದ ವೀಡಿಯೋದಲ್ಲಿ ಇದೆಲ್ಲವೂ ಸುಳ್ಳು ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.
ಇದು ಜೈಲಲ್ಲ ಬದಲಾಗಿ ಇದು ಇಲ್ಲಿರೋ ಕೈದಿಗಳಿಗೆ ಫೈವ್ ಸ್ಟಾರ್ ಹೊಟೇಲ್ ಅನ್ನೋದು ವೈರಲ್ ಆದ ವೀಡಿಯೋದಲ್ಲಿ ಬಟಾಬಯಲಾಗಿದೆ…, ಕೈದಿಗಳು ಹಣ ಕೊಟ್ರೆ ಇವ್ರಿಗೆ ಹೊರಗಿನ ಐಷಾರಾಮಿ ಹೋಟೆಲ್ ಗಿಂತಲೂ ಜೈಲಿನಲ್ಲಿ ಮಿಗಿಲಾಗಿ ರಾಜಾತಿಥ್ಯ ದೊರೆಯುತ್ತೆ ಬೆಳಕಿಗೆ ಬಂದಿದೆ.
ಇನ್ನೊಂದು ವಿಚಾರ ಅಂದ್ರೆ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಮೊಬೈಲ್ ಬಳಕೆ ಮಾಡಬಾರ್ದು ಅನ್ನೋ ನಿಯಮವೇನೋ ಇದೆ.., ಅದಕ್ಕಾಗಿಯೇ ಮೂರು ಜಾಮರ್ ಗಳನ್ನೂ ಅಳವಡಿಸಲಾಗಿದೆ. ಆದ್ರೆ ಅಲ್ಲಿರೋ ಕೈದಿಗಳು ಅದನ್ನೇ ಹ್ಯಾಕ್ ಮಾಡಿ ನಿಯಮ ಮೀರಿ ಮೊಬೈಲ್ ಬಳಸುತ್ತಿರೋದು ಗೊತ್ತಾಗಿದೆ.
ಜೈಲಿನ ಒಳಗೆ ರಾಜಾರೋಷವಾಗಿ ಕೈದಿಗಳು ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಜೈಲಿನಲ್ಲೆ ಕುಳಿದುಕೊಂಡು ಕೈದಿಗಳು ತಮ್ಮ ವಾಟ್ಸ್ ಆ್ಯಪ್ ಸ್ಟೇಟಸ್ ಅಪ್ಡೆಟ್ ಮಾಡುತ್ತಿದ್ದಾರೆ. ಈ ಮೂಲಕ ಜೈಲು ಕೈದಿಗಳಿಗೆ ಅರಮನೆಯಾಗಿದೆ. ಇದನ್ನು ಸಾಬೀತು ಪಡೆಸುವಂತೆ ವಿಡಿಯೋ ಈಗ ಲಭ್ಯವಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರೋ ಗೃಹ ಸಚಿವ ಅರಗ ಜ್ಞಾನೇಂದ್ರ, ಈ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇನೆ ಎನ್ನುವ ಭರವಸೆ ನೀಡಿದ್ದಾರೆ.