ಬೆಂಗಳೂರು,(www.thenewzmirror.com):
ನವೆಂಬರ್ ಹತ್ರ ಬರ್ತಿದ್ದಂತೆ ಕನ್ನಡ ಸಾಹಿತ್ಯ ಪರಿಷತ್ ಪುಸ್ತಕ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕಗಳಿಗೆ ವಿಶೇಷ ರಿಯಾಯಿತಿ ಮಾರಾಟ ಮಾಡಲು ನಿರ್ಧಾರ ಮಾಡಿದೆ.
ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಪುಸ್ತಕಗಳಿಗೆ ಶೇ.10 ರಿಂದ ಶೇ. 75ರವರೆಗೆ ರಿಯಾಯಿತಿ ನೀಡಲು ಮುಂದಾಗಿದ್ದು, ನವೆಂಬರ್ 1ರಿಂದ 30ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ಎಲ್ಲಾ ರಜಾ ದಿನಗಳೂ ಸೇರಿದಂತೆ ಪುಸ್ತಕ ಮಾರಾಟ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಭರ್ತಿ ಒಂದು ತಿಂಗಳು ಈ ರಿಯಾಯಿತಿ ಇರಲಿದ್ದು, ಈ ವಿಶೇಷ ರಿಯಾಯಿತಿಯ ಪ್ರಯೋಜನವನ್ನು ಪುಸ್ತಕ ಮಾರಾಟಗಾರರು, ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು, ಸಂಶೋಧಕರು, ಜನಸಾಮಾನ್ಯರು ಉಪಯೋಗ ಪಡೆದುಕೊಳ್ಳಬೇಕೆಂದು ಕಸಾಪ ಮನವಿ ಮಾಡಿದೆ.
ಯಾವುದಕ್ಕೆ ಎಷ್ಟೆಷ್ಟು ರಿಯಾಯಿತಿ
ಕನ್ನಡ ರತ್ನಕೋಶ, ಸಂಕ್ಷಿಪ್ತ ಕನ್ನಡ ನಿಘಂಟು ಹಾಗೂ ಸಂಕ್ಷಿಪ್ತ ಕನ್ನಡ ಇಂಗ್ಲಿಷ್ ನಿಘಂಟಿಗೆ ಶೇಕಡ 10 ರಷ್ಟು
ಬೃಹತ್ ಕನ್ನಡ-ಕನ್ನಡ ನಿಘಂಟು (1-8ಸಂಪುಟ) ಶೇಕಡಾ 50 ರಷ್ಟು ರಿಯಾಯಿತಿ
ದಲಿತ ಸಾಹಿತ್ಯ ಸಂಪುಟಗಳು ಶೇಕಡಾ 50 ರಷ್ಟು ರಿಯಾಯಿತಿ
ಗದ್ಯಾನುವಾದ ಪುಸ್ತಕಗಳು, ಶತಮಾನೋತ್ಸವ ಮಾಲಿಕೆ, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳು, ಪರೀಕ್ಷೆ ಪುಸ್ತಕಗಳು ಹಾಗೂ ಇತರೆ ಹೊಸ ಪುಸ್ತಕಗಳಿಗೆ ಶೇಕಡಾ 35 ರಷ್ಟು ರಿಯಾಯಿತಿ
ಅಖಿಲ ಭಾರತೀಯ ಕನ್ನಡ ಸಾಹಿತ್ಯ ಪರಿಷತ್ ನ ಸಮ್ಮೇಳನ ಪುಸ್ತಕಗಳು ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಳನ ಪುಸ್ತಕಗಳು,ಪಿ.ಹೆಚ್.ಡಿ.ಮತ್ತು ಜೀವನ ಚರಿತ್ರೆ ಪುಸ್ತಕಗಳಿಗೆ ಶೇಕಡಾ 50 ರಷ್ಟು ರಿಯಾಯಿತಿ
ಸ್ಮರಣ ಸಂಚಿಕೆಗಳು, ಜಿಲ್ಲಾ ಸಾಹಿತ್ಯ ಸಮ್ಮೇಳನದ ಪುಸ್ತಕಗಳು ಹಾಗೂ ಬೀದರ್ ಸಮ್ಮೇಳನ ಪುಸ್ತಕಗಳಿಗೆ ಶೇಕಡಾ 75 ರಷ್ಟು ರಿಯಾಯಿತಿ ಇರಲಿದೆ.