ಬೆಂಗಳೂರು,(www.thenewzmirror.com):
ತೆರಿಗೆ ಹಣ ಕಟ್ಟದೆ ಕಳ್ಳಾಟ ಆಡ್ತಿದ್ದ ಮಂತ್ರಿ ಮಾಲ್ ಗೆ ಬಿಬಿಎಂಪಿ ಬಿಸಿ ಮುಟ್ಟಿಸಿದೆ. ಮೂರು ವರ್ಷಗಳಿಂದ ಕೋಟಿ ಕೋಟಿ ತೆರಿಗೆ ಬಾಕಿ ಉಳಿಸಿರೋ ಮಂತ್ರಿ ಮಾಲ್ ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ನಗರದ ಪ್ರತಿಷ್ಠಿತ ಮಾಲ್ ಗಳಲ್ಲಿ ಈ ಮಾಲು ಕೂಡ ಒಂದು.., ಈ ಮಾಲ್ ಕಳೆದ ಮೂರು ವರ್ಷಗಳಿಂದ ಬರೋಬ್ಬರಿ 27 ಕೋಟಿ ರೂಪಾಯಿ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿತ್ತು.., ತೆರಿಗೆ ಕಟ್ಟಿ ಕ್ಲಿಯರ್ ಮಾಡಿ ಅಂತ ನೋಟೀಸ್ ಗಳನ್ನ ಕೂಡ ಪಾಲಿಕೆ ಕೊಟ್ಟಿತ್ತು.., ಖುದ್ದು ಅಧಿಕಾರಿಗಳೇ ಬಂದು ವಾರ್ನಿಂಗ್ ಕೊಟ್ರೂ ಹೋಗಿದ್ರು.., ಒಮ್ಮೆಲೆ ಕಟ್ಟಲು ಸಾಧ್ಯವಿಲ್ಲ ಅಂತಾದ್ರೆ ಹಂತ ಹಂತವಾಗಿ ಕಟ್ಟಿ ಎಂದೂ ಹೇಳಿತ್ತು. ಆದರೆ ಯಾವುದಕ್ಕೂ ಸೊಪ್ಪು ಹಾಕದ ನಗರದ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಗೆ ಈಗ ಸಂಕಷ್ಟ ಎದುರಾಗಿದೆ. ತೆರಿಗೆ ಕಟ್ಟಿ ಇಲ್ಲ ಮುಚ್ಚಿ ಎಂದಿರುವ ಬಿಬಿಎಂಪಿ ಇಂದು ಮಂತ್ರಿ ಮಾಲ್‌ಗೆ ಬೀಗ ಜಡಿದಿದ್ದಾರೆ. ಬೆಳಗ್ಗೆಯೇ ಆಗಮಿಸಿದ್ದ ಬಿಬಿಎಂಪಿ ಪಶ್ಚಿಮ ವಲಯದ ಅಧಿಕಾರಿಗಳು ಹಿಂದೆ ಮುಂದೆ ನೋಡದೆ ಮಂತ್ರಿ ಮಾಲ್ ಗೆ ಬೀಗ ಹಾಕಿ ಸೀಲ್ ಮಾಡಿದ್ದಾರೆ.
ಮಂತ್ರಿ ಮಾಲ್ ಬಾಕಿ
- 2018-19 ರಲ್ಲಿ ಬಾಕಿ 6 ಕೋಟಿ 77 ಲಕ್ಷ
- 2019-20 ರಲ್ಲಿ ಬಾಕಿ 6ಕೋಟಿ 77 ಲಕ್ಷ
- 2020-21 ರಲ್ಲಿ ಬಾಕಿ 6ಕೋಟಿ 77 ಲಕ್ಷ
- 2021-22 ರಲ್ಲಿ ಬಾಕಿ 6 ಕೋಟಿ 88 ಲಕ್ಷ
- ಒಟ್ಟು ತೆರಿಗೆ ಬಾಕಿ 27 ಕೋಟಿ 22 ಲಕ್ಷ
ಕಳೆದ ನಾಲ್ಕು ವರ್ಷಗಳಿಂದ ಮಂತ್ರಿಮಾಲ್ ಆಸ್ತಿ ತೆರಿಗೆ ಪಾವತಿಯನ್ನೇ ಮಾಡಿಲ್ಲ. ನಾಲ್ಕು ವರ್ಷದಿಂದ ಮಂತ್ರಿಮಾಲ್ 32 ಕೋಟಿ ಆಸ್ತಿ ತೆರಿಗೆ ಕಟ್ಟಬೇಕಿತ್ತು. ಅಕ್ಟೋಬರ್ ನಲ್ಲಿ ಬೀಗ ಹಾಕಿದಾಗ ತಾತ್ಕಾಲಿಕ 5 ಕೋಟಿ ಕಟ್ಟಿ ಮಂತ್ರಿ ಮಾಲ್ ತಪ್ಪಿಸಿಕೊಂಡಿತ್ತು. ಉಳಿದ ಬಾಕಿ 27 ಕೋಟಿಯನ್ನ ಅಕ್ಟೋಬರ್ ಅಂತ್ಯಕ್ಕೆ ಪಾವತಿ ಮಾಡೋಕೆ ಡೆಡ್ ಲೈನ್ ಕೊಡಲಾಗಿತ್ತು. ಅಕ್ಟೋಬರ್ 31 ರ ಬಳಿಕ ಹಲವು ಬಾರಿ ಕೇಳಿದ್ರು ಬಾಕಿ ಪಾವತಿ ಮಾಡಿರಲಿಲ್ಲ. ಅಕ್ಟೋಬರ್ ಮುಗಿದ್ರೂ ತೆರಿಗೆ ಕಟ್ಟದೆ ಇದ್ದಿದ್ದಕ್ಕೆ ನವೆಂಬರ್ 15 ರಂದು ಮತ್ತೆ ಬೀಗ ಹಾಕೋಕೆ ಮುಂದಾಗಿತ್ತು ಪಾಲಿಕೆ. ಅದಾಗಿಯೂ ನವೆಂಬರ್ 15 ರಂದು ಮಂತ್ರಿಮಾಲ್ ಗೆ 15 ದಿನ ಕಾಲಾವಕಾಶ ಕೊಡಲಾಗಿತ್ತು. ಆದರೆ ನವೆಂಬರ್ ಕಳೆದು ಡಿಸೆಂಬರ್ ಬಂದರೂ ತೆರಿಗೆ ಕಟ್ಟದೆ ಮಂತ್ರಿ ಮಾಲ್ ತಪ್ಪಿಸಿಕೊಳ್ಳುತ್ತಿದೆ. ಹೀಗಾಗಿ ಇಂದು ಬಿಬಿಎಂಪಿ ಅಧಿಕಾರಿಗಳು ಸತತ ಮೂರನೇ ಬಾರಿಗೆ ಮಂತ್ರಿ ಮಾಲ್ ಗೆ ಬೀಗ ಜಡಿದು, ಉಳಿದ ತೆರಿಗೆ ಹಣ ಕಟ್ಟಿ ಎಂದು ವಾರ್ನಿಂಗ್ ಕೊಟ್ಟು ಬಂದಿದ್ದಾರೆ.
ತೆರಿಗೆ ಕಟ್ಟದಿದ್ರೆ ಕಟ್ಟದಿದ್ರೆ ಚರಾಸ್ಥಿ ಮುಟ್ಟುಗೋಲು ಹಾಕಲು ಅವಕಾಶವಿದೆ ಪಾಲಿಕೆಗೆ. ಏಕಾಏಕಿ ಮುಟ್ಟುಗೋಲು ಸರಿಯಲ್ಲ, ಹೀಗಾಗಿ ಬೀಗ ಹಾಕಿದ್ದೇವೆ. 27 ಕೋಟಿ ಕಂಪ್ಲೀಟ್ ಕಟ್ಟದಿದ್ರೆ ಓಪನ್ ಮಾಡಲು ಬಿಡುವುದಿಲ್ಲ. ಮತ್ತೆ ಅರ್ಧ ಕಟ್ಟಿ ಓಪನ್ ಮಾಡಲು ಅನುಮತಿ ಬೇಕು ಅಂದ್ರೆ ಅದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಬಿಟ್ಟಿದ್ದು. ಅವರೇನು ತೀರ್ಮಾನ ತೆಗೆದುಕೊಳ್ತಾರೋ ಅವರಿಗೆ ಬಿಟ್ಟಿದ್ದು ಎಂದು ವಲಯ ಜಂಟಿ ಆಯುಕ್ತರು ಮಾಹಿತಿ ನೀಡಿದ್ದಾರೆ.
ನಾಲ್ಕೈದು ವರ್ಷಗಳ ಕಾಲ ತೆರಿಗೆ ಹಣ ಪಾಲಿಕೆಗೆ ಕಟ್ಟದೆ ಉಂಡೇನಾಮ ಹಾಕಲು ಮುಂದಾಗಿದ್ದ ಮಂತ್ರಿ ಮಾಲ್ ವಿರುದ್ಧ ಪಾಲಿಕೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಇದುವರೆಗೂ ತಾಳ್ಮೆಯಿಂದ ಗಡುವು ನೀಡುತ್ತಾ ಬಂದಿದ್ದ ಬಿಬಿಎಂಪಿ ಇದೀಗ ಕಟ್ಟಲೇ ಬೇಕು ಎಂದು ಖಡಕ್ ನಿಲುವು ತಾಳಿದೆ. ಆದರೆ ಮುಂದೇನು ಎನ್ನುವುದನ್ನು ಕಾದು ನೋಡಬೇಕಿದೆ.