ಬೆಂಗಳೂರು, (www.thenewzmirror.com) :
ಚಿಟ್ ಫಂಡ್ ಪ್ರಕರಣವೊಂದರಲ್ಲಿ ಆರೋಪಿ ಜೊತೆ ಎಡಿಜಿಪಿ ಭಾಸ್ಕರ್ ರಾವ್ ಫೋನ್ ನಲ್ಲಿ ಮಾತನಾಡಿದ್ದನ್ನು ಕದ್ದಾಲಿಕೆ ಮಾಡಿದ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ.. ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳ ನಡುವಿನ ತಿಕ್ಕಾಟಕ್ಕೆ ಮತ್ತೆ ಟ್ವಿಸ್ಟ್ ಸಿಕ್ಕಿದೆ..
ಫೋನ್ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿತ್ತು.. ತನಿಖೆ ಕೈಗೆತ್ತಿಕೊಂಡ ಸಿಬಿಐ ಅಧಿಕಾರಿಗಳು ಎಡಿಜಿಪಿ ಅಲೋಕ್ ಕುಮಾರ್ ಹಾಗು ಪತ್ರಕರ್ತೆ ಹೆಸರನ್ನು ಕೈಬಿಟ್ಟು, ಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಸಿದ್ರು.. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಎಡಿಜಿಪಿ ಭಾಸ್ಕರ್ ರಾವ್ ಸಿಬಿಐ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ರು.. ಅರ್ಜಿಯಲ್ಲಿ ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್ ರದ್ದುಗೊಳಿಸಿ ಮರು ತನಿಖೆಗೆ ಮನವಿ ಮಾಡಿದ್ರು.. ಇದೀಗ ಸಿಬಿಐ ವಿಶೇಷ ನ್ಯಾಯಾಲಯ ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್ ರದ್ದುಗೊಳಿಸಿ ಮಹತ್ವದ ಆದೇಶ ನೀಡಿದೆ..
ಎಡಿಜಿಪಿ ಭಾಸ್ಕರ್ ರಾವ್ ಪರ ವಾದ ಮಂಡಿಸಿದ್ದ ವಕೀಲರು, ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್ ಸರಿಯಿಲ್ಲ.. ಫೋನ್ ಕದ್ದಾಲಿಕೆಗೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್ ಒಬ್ಬರು ಪೇನ್ ಡ್ರೈವ್ ಮೂಲಕ ಆಡಿಯೋ ಸಂಭಾಷಣೆಯನ್ನು ಎಡಿಜಿಪಿ ಅಲೋಕ್ ಕುಮಾರ್ ಗೆ ಕೊಟ್ಟಿರುವ ಬಗ್ಗೆ ನ್ಯಾಯಾಲಯದ ಗಮನ ಸೆಳೆದಿದ್ರು.. ವಾದ ಪ್ರತಿವಾದ ಆಲಿಸಿದ್ದ ಸಿಬಿಐ ನ್ಯಾಯಾಲಯ ಇಂದಿಗೆ ತೀರ್ಪು ಕಾಯ್ದಿರಿಸಿತ್ತು.. ಇಂದು ಆದೇಶ ಪ್ರಕಟಿಸಿದ ನ್ಯಾಯಾಲಯ, ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್ ರದ್ದುಗೊಳಿಸಿ ಮರು ತನಿಖೆ ನಡೆಸಿ ಕೋರ್ಟ್ ಗೆ ವರದಿ ನೀಡುವಂತೆ ಸಿಬಿಐ ಅಧಿಕಾರಿಗಳಿಗೆ ನಿರ್ದೇಶಿಸಿದೆ..
ಅಷ್ಟು ಮಾತ್ರವಲ್ಲ ಭಾಸ್ಕರ್ ರಾವ್ ವಕೀಲರು ಕೂಡ ತಮ್ಮ ಫೋನ್ ಕದ್ದಾಲಿಕೆ ಆಗಿದೆ.ಇಷ್ಟೊಂದು ಗಂಭೀರವಾದ ಪ್ರಕರಣದಲ್ಲಿ ಸಿಬಿಐ ಕೂಡ ಗಂಭೀರವಾಗಿ ವರ್ತಿಸಬೇಕು..ಆದ್ರೆ ಅದಾಗಿಲ್ಲ..ಹಾಗಾಗಿ ಮರು ತನಿಖೆಗೆ ಆದೇಶಿಸಲೇಬೇಕೆನ್ನುವ ಮನವಿಯನ್ನು ಮಾಡಿಕೊಂಡಿದ್ದರು.
ಒಟ್ಟಿನಲ್ಲಿ ಫೋನ್ ಕದ್ದಾಲಿಕೆ ವಿಚಾರದಲ್ಲಿ ಮರು ತನಿಖೆಗೆ ನ್ಯಾಯಾಲಯ ಆದೇಶಿಸಿರುವುದು,ಸಿಬಿಐಗೆ ದೊಡ್ಡ ಮುಖಭಂಗ ಉಂಟುಮಾಡಿದೆ. ಇದೀಗ ಸಿಬಿಐ ಮರು ತನಿಖೆ ನಡೆಸಬೇಕಾಗಿದ್ದು, ಕೋರ್ಟ್ ಗೆ ದೋಷರೋಪಣ ಪಟ್ಟಿ ಸಲ್ಲಿಸುತ್ತಾ ಅಥವಾ ಮತ್ತೆ ಬಿ ರಿಪೋರ್ಟ್ ಸಲ್ಲಿಸುತ್ತಾ ಕಾದು ನೋಡಬೇಕು.