ಬೆಂಗಳೂರು,(www.thenewzmirror.com) ;
ಯುವ ಕಿರುತೆರೆ ನಟಿ ಚೇತನಾ ರಾಜ್ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ನವರಂಗ್ ಸರ್ಕಲ್ ಡಾ.ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಫ್ಯಾಟ್ ಸರ್ಜರಿ ವೇಳೆ ಸಾವನ್ನಪ್ಪಿರುವ ಶಂಕೆಯನ್ನ ಪೋಷಕರು ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿ ವಾಸವಿದ್ದ ಚೇತನಾ ಕುಟುಂಬ ಎಂದು ಹೇಳಲಾಗುತ್ತಿದೆ.ನಟಿ ಪೋಷಕರಿಂದ ವೈದ್ಯರ ನಿರ್ಲಕ್ಷ್ಯದಿಂದಲೇ ಸಾವಾಗಿದೆ ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ.
ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಸಾವು ಸಂಭವಿಸಿರಬಹುದು ಎಂದು ಹೇಳಲಾಗುತ್ತಿದ್ದು, ಅಗತ್ಯ ಸಲಕರಣೆ ಹಾಗೂ ಪೋಷಕರ ಒಪ್ಪಿಗೆ ಇಲ್ಲದೆ ಸರ್ಜರಿಗೆ ಮುಂದಾಗಿದ್ದ ವೈದ್ಯರ ವಿರುದ್ಧ ಪೋಷಕರ ಕಿಡಿಕಾರಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಬರುವ ಗೀತಾ,ದೊರೆಸಾನಿ,ಒಲವಿನ ನಿಲ್ದಾಣ ಧಾರವಾಹಿಗಳಲ್ಲಿ ನಟನೆ ಮಾಡುತ್ತಿದ್ದ ನಟಿ ಇನ್ನೂ ಬಿಡುಗಡೆಯಾಗದ ಹವಾಯಾಮಿ ಸಿನಿಮಾದಲ್ಲೂ ಅಭಿನಯಿಸಿದ್ದರು.
ನವರಂಗ್ ನ ಡಾ, ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಳ್ತಿದ್ದ ಚೇತನಾ ರಾಜ್.ಫ್ಯಾಟ್ ಚಿಕಿತ್ಸೆ ಗೆಂದು ನಿನ್ನೆ ಬೆಳಗ್ಗೆ ಆಡ್ಮಿಟ್ ಆಗಿದ್ರಂತೆ.ಸಂಜೆ ನಾಲ್ಕು ಗಂಟೆ ಹೊತ್ತಿಗೆ ಸಿರಿಯಸ್ ಆಗಿ ಶಂಕರಮಠದ ಕಾಡೇ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಒಂದೇ ದಿನಗಳಲ್ಲಿ ಫ್ಯಾಟ್ ಗೆ ಚಿಕಿತ್ಸೆ ಕೊಡುವುದಾಗಿ ಆಸ್ಪತ್ರೆಯವರು ಭರವಸೆ ಕೊಟ್ಟದ್ದರಂತೆ ಪೋಷಕರಿಗೆ ಮಾಹಿತಿ ನೀಡದೇ ಫ್ಯಾಟ್ ಸರ್ಜರಿ ಮಾಡಿದ್ದಾರಂತೆ ಮಗಳ ಸಾವಿಗೆ ಆಸ್ಪತ್ರೆ ನಿರ್ಲಕ್ಷ್ಯವೇ ಕಾರಣ ಅಂತ ಚೇತನಾ ರಾಜ್ ದೊಡ್ಡಪ್ಪ ರಾಜಣ್ಣ ಆರೋಪ ಮಾಡುತ್ತಿದ್ದಾರೆ.