ಬೆಂಗಳೂರು, ( www.thenewzmirror.com ):
ರಾಜ್ಯದ ಮೊದಲ ಸೂಪರ್ ಎಕ್ಸ್ ಪ್ರೆಸ್ ಹೈವೇ ಅಂತ ಕರೆಸಿಕೊಳ್ಳುತ್ತಿರುವ ಬೆಂಗಳೂರು-ಮೈಸೂರು ಹೈವೇ ಪೃಯಾಣ ಬಲು ದುಬಾರಿಯಾಗಲಿದೆ.
ಒಂದೂವರೆ ಗಂಟೆಯಲ್ಲಿ ಪ್ರಯಾಣ ಮಾಡುವ ಈ ಸೂಪರ್ ಫಾಸ್ಟ್ ಹೈವೇಯಲ್ಲಿ ಸ್ವಂತ ಅಷ್ಟೇ ಅಲ್ಲ ಬಸ್ ನಲ್ಲೊ ಹೋದ್ರೂ ಜೇಬಿಗೆ ಕತ್ತರಿ ಬೀಳೋದ್ರಲ್ಲಿ ಅಚ್ಚರಿ ಪಡ್ಬೇಕಿಲ್ಲ.
ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೈವೇ ನಲ್ಲೊ ಇಂದಿನಿಂದ ಟೋಲ್ ಸಂಗ್ರಹ ಆರಂಭವಾಗಿದ್ದು, ವಾಹನ ಸವಾರರಿಂದ ಅಸಮಾಧಾನ ವ್ಯಕ್ತವಾಗಿದೆ. ಒಮ್ಮೆ ಬೆಂಗಳೂರಿನಿಂದ ಮೈಸೂರು ಗೆ ಹೋಗಿ ಬಂದರೆ ಹತ್ರತ್ರ 300 ರೂವರೆಗೂ ಟೋಲ್ ಕಟ್ಟಬೇಕಾಗಿದ್ದು ವಾಹನ ಸವಾರರು ಯಾಕಪ್ಪಾ ಎಕ್ಸ್ ಪ್ರೆಸ್ ಹೈವೇ ಬಂತು ಅಂತ ಪರಿತಪಿಸುತ್ತಿದ್ದಾರೆ.
ಇದರ ಬೆನ್ನಲ್ಲೇ ಪ್ರಯಾಣಿಕರಿಗೆ ದೇಶದ ಓನ್ ಸಾರಿಗೆ ಸಂಸ್ಥೆ ಬಿಗ್ ಶಾಕ್ ಕೊಡೋಕೆ ಹೊರಟಿದೆ. ಬೆಂಗಳೂರು-ಮೈಸೂರು ಹೈವೇನಲ್ಲಿ ಸಂಚರಿಸುವ ಸರ್ಕಾರಿ ಬಸ್ ಗಳ ಪ್ರಯಾಣ ದರ ಹೆಚ್ಚಳ ಮಾಡಲಾಗಿದೆ.
ಕೆಎಸ್ ಆರ್ ಟಿಸಿ 15 ರೂ. ಐಷಾರಾಮಿ ಬಸ್ ಗೆ 20 ರೂ, ರಾಜಹಂಸ ಬಸ್ ಗೆ 18 ರೂ ಹೆಚ್ಚಳ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಕೆಎಸ್ ಆರ್ ಟಿಸಿ, ವೋಲ್ವೋ, ರಾಜಹಂಸ ಬಸ್ ಗಳ ಪ್ರಯಾಣ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ KSRTC.
ಇಂದಿನಿಂದ ಬೆಂಗಳೂರು-ಮೈಸೂರು ಹೈವೇಯಲ್ಲಿ ಟೋಲ್ ಸಂಗ್ರಹದ ಹಿನ್ನಲೆಯಲ್ಲಿ 55 ಕಿಲೋಮೀಟರ್ ಗೆ 155 ರೂ. ಮತ್ತುಳಿದ 55 ಕಿಲೋಮೀಟರ್ ಗೆ 155 ರೂ. ಟೋಲ್ ನಿಗದಿಪಡಿಸಲಾಗಿದೆ.