ಬೆಂಗಳೂರು, ( www.thenewzmirror.com) :
ದೇಶದ ನಂಬರ್ ಓನ್ ಸಾರಿಗೆ ಸಂಸ್ಥೆ ಬಿಎಂಟಿಸಿ ಇನ್ನಷ್ಟು ಸ್ಮಾರ್ಟ್ ಆಗ್ತಿದೆ.., ಮೋದಿ ಅವ್ರ ಡಿಜಿಟಲ್ ಇಂಡಿಯಾಗೆ ಒತ್ತು ಕೊಡೋ ನಿಟ್ಟಿನಲ್ಲಿ ನಿಗಮ ಮಹತ್ವದ ಹೆಜ್ಜೆ ಇಟ್ಟಿದೆ…, ದೇಶದಲ್ಲಿಯೇ ಮೊದಲ ಬಾರಿಗೆ ಡಿಜಿಟಲ್ ಪಾಸ್ ಪರಿಚಯಿಸಿದ್ದು, ಕಂಪ್ಲೀಟ್ ಕ್ಯಾಶ್ ಲೆಸ್ ಆಗುವತ್ತ ನಿಗಮ ಮುಂದಾಗ್ತಿದೆ
ತಂತ್ರಜ್ಞಾನದಲ್ಲಿ ಯಾವಾಗಲೂ ಮುಂಚೂಣಿಯಲ್ಲಿರೋ ಬೆಂಗಳೂರು ಮತ್ತೊಂದು ಹೊಸ ಹೆಜ್ಜೆಗೆ ಸಾಕ್ಷಿಯಾಗ್ತಿದೆ. ಇದಕ್ಕೆ ಕಾರಣವಾಗ್ತಿರೋದು ಬಿಎಂಟಿಸಿ.., ದೇಶದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಬಸ್ ಪಾಸ್ ಅನ್ನ ತನ್ನ ಪ್ರಯಾಣಿಕ್ರಿಗೆ ಕೊಡೋಕೆ ಮುಂದಾಗಿದೆ.., ಅಂದ್ರೆ ಪ್ರಯಾಣೀಕ್ರು ತಾವು ಇದ್ದಲ್ಲಿಯೇ ಆನ್ ಲೈನ್ ಮೂಲಕ ದಿನದ, ವಾರದ ಹಾಗೂ ಮಾಸಿಕ ಪಾಸ್ ಅನ್ನ ಖರೀದಿ ಮಾಡೋಕೆ ಅವಕಾಶ ಕಲ್ಪಿಸಿದೆ..,,
ಟೂಮೋಕ್ ಎಂಬ ಸ್ಮಾರ್ಟ್ ಅಪ್ ಕಂಪನಿ ಜತೆಗೂಡಿರೋ ಬಿಎಂಟಿಸಿ ಇದೀಗ ಹೊಸ ಬಗೆಯ ಪಾಸ್ ನೀಡಲು ಮುಂದಾಗಿದ್ದು, ಇನ್ಮುಂದೆ ಬಸ್ ನಿಲ್ದಾಣಗಳಲ್ಲಿ ಗಂಟೆಗಟ್ಟಲೇ ಕ್ಯೂ ನಿಂತು ಬಸ್ ಪಾಸ್ ಪಡೆಯೋದಕ್ಕೆ ಬ್ರೇಕ್ ಹಾಕಲು ಹೊರಟಿದೆ..,
ಡಿಜಿಟಲ್ ಪಾಸ್ ಹೇಗೆ ಕೆಲ್ಸ ಮಾಡುತ್ತೆ..?
- ಪ್ಲೇ ಸ್ಟೋರ್ ನಿಂದ Tummoc ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು
- ಮಿನಿಮನ್ KYC ಅಪ್ ಲೋಡ್ ಮಾಡಿ ಮೊಬೈಲ್ ನಂಬರ್ ನಮೂದು ಮಾಡಬೇಕು
- ಪ್ರತಿ ಪಾಸ್ ನಲ್ಲಿ ಯೂನಿಕ್ ಐಡಿ, ಕ್ಯೂ ಆರ್ ಕೋಡ್ ಇರಲಿದೆ
- ಪ್ರಯಾಣ ಮಾಡುವಾಗ ನಿರ್ವಾಹಕರಿಗೆ ಪಾಸ್ ತೋರಿಸಬೇಕು
- ಪ್ರಯಾಣಿಕರ ಬಳಿಯ ಪಾಸ್ ಅನ್ನ ನಿರ್ವಾಹಕ ವ್ಯಾಲಿಡೇಷನ್ ಮಾಡ್ತಾರೆ
- ಪ್ರಯಾಣಿಕ್ರು ತಾವು ಕುಳಿತಲ್ಲಿಯೇ ದಿನದ, ಮಾಸಿಕ, ತಿಂಗಳ ಪಾಸ್ ಖರೀದಿ ಮಾಡಬಹುದು
- ಅತ್ಯಂತ ಭದ್ರತಾ ವೈಶಿಷ್ಟ್ಯಗಳನ್ನ ಡಿಜಿಟಲ್ ಪಾಸ್ ಹೊಂದಿರಲಿದೆ
ಸದ್ಯ ಬಿಎಂಟಿಸಿಯಿಂದ ಪ್ರಾಯೋಗಿಕವಾಗಿ ಈ ಸೇವೆಯನ್ನ ಇದೀಗ ಪ್ರಯಾಣಿಕ್ರಿಗೆ ನೀಡ್ತಿದೆ.., ಈ ಕುರಿಂತೆ ಪರಿಪೂರ್ಣವಾಗಿ ಪರಿಚಯಿಸೋಕೆ ಟೆಂಡರ್ ಕರೆದಿದ್ದು, ಇದ್ರ ಸಾಧಕ ಬಾಧಕಗಳನ್ನ ನೋಡಿಕೊಂಡು ಆನಂತ್ರ ಕೆಲ ಬದಲಾವಣೆ ಮಾಡೋಕೆ ಹೊರಟಿದೆ..,ಅದೇನೇ ಇರ್ಲಿ, ದೇಶದಲ್ಲೇ ನಂಬರ್ ಒನ್ ಸಾರಿಗೆ ಸಂಸ್ಥೆ ಬಿಎಂಟಿಸಿ ಇದೀಗ ಇನ್ನಷ್ಟು ಸ್ಮಾರ್ಟ್ ಆಗಲು ಹೊರಟಿರೋದು ನಿಜಕ್ಕೂ ಅದ್ಬುತ