ಬೆಂಗಳೂರು,(www.thenewzmirror.com) :
ಮಾಧ್ಯಮಗಳು ಇರೋದೇ ಸಮಸ್ಯೆಗಳನ್ನ ಬಗೆಹರಿಸೋಕೆ.., ತಪ್ಪು ದಾರಿಯಲ್ಲಿ ನುಗ್ಗುತ್ತಿರೋರನ್ನ ಎಚ್ಚರಿಸಿ ಸರಿಸಾರಿಹೆ ತರೋ ಪ್ರಯತ್ನವನ್ನ ಮಾಡ್ತಿದೆ..ಅದೇ ರೀತಿ ಅದೆಷ್ಟೋ ವರದಿಗಳು ಹಲವರ ಬದುಕನ್ನ ಬದಲಾವಣೆ ಮಾಡಿದ್ದಲ್ಲದೆ ಕೆಲವರ ಜೀವನ ಶೈಲಿಯನ್ನೇ ಬದಲಿಸಿ ಬಿಟ್ಡಿವೆ.
ಹೀಗೆ ಸಮಾಜಮುಖಿ ವರದಿಗಳಿಗೆ ಕೆಲವೆಡೆ ವಿರೋಧಾನೂ ಕೇಳಿ ಬರ್ತಿವೆ. ಇದೆಲ್ಲಾದರ ಹೊರತಾಗಿ ದಿ ನ್ಯೂಸ್ ಮಿರರ್ ವರದಿ ಮೂರೇ ದಿನದಲ್ಲಿ ಇಂಪ್ಯಾಕ್ಟ್ ಆಗಿದ್ದು, ಬಹುದೊಡ್ಡ ಅನಾಹುತವನ್ನ ತಪ್ಪಿಸಿದ ಖ್ಯಾತಿಗೆ ಒಳಗಾಗಿದೆ.
ಕಳೆದ ಮೂರು ದಿನಗಳ ಹಿಂದೆ ಡಿಪೋ 16 ಕ್ಕೆ ಸೇರಿದ್ದ ಬಸ್ ಎರಡೆರಡು ನಂಬರ್ ಪ್ಲೇಟ್ ನಲ್ಲಿ ಓಡಾಡ್ತಾ ಇದ್ದ ಬಗ್ಗೆ ವರದಿ ಪ್ರಕಟ ಮಾಡಲಾಗಿತ್ತು. ಡಿಪೋ ಮ್ಯಾನೇಜರ್ ಚಂದ್ರಕಲಾ ಅವರ ಗಮನಕ್ಕೂ ತರಲಾಗಿತ್ತು. ವರದಿ ಪ್ರಕಟವಾಗಿ ಮೂರು ದಿನ ಕಳೆಯುವಷ್ಟರಲ್ಲಿ ಗೊಂದಲದಲ್ಲಿದ್ದ ನಂಬರ್ ಪ್ಲೇಟ್ ಸರಿಪಡಿಸಲಾಗಿದೆ.
KA 01 F 8558 ಬಸ್ ನಂಬರ್ ಪ್ಲೇಟ್ ನಲ್ಲಿ ಇದ್ದ ಅವ್ಯವಸ್ಥೆಯ ವರದಿಯನ್ನ ಇದೇ ಡಿಸೆಂಬರ್ 19 ರಂದುಒಂದು ಬಸ್ ನಂಬರ್ ಮಾತ್ರ ಎರಡೆರಡು ಎಂಬ ಶೀರ್ಣಿಕೆಯಡಿ( https://thenewzmirror.com/?p=1365 ) ವರದಿ ಪ್ರಕಟವಾಗಿತ್ತು.
ವರದಿಯಿಂದ ಎಚ್ಚೆತ್ತ ಡಿಪೋ ಮ್ಯಾಜೇನರ್ ಚಂದ್ರಕಲಾ ಬಸ್ ನಂಬರ್ ಪ್ಲೇಟ್ ಗೊಂದಲ ಗಮನ ತಂದಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ತಕ್ಷಣದಲ್ಲೇ ಸರಿ ಮಾಡುವ ಭರವಸೆ ಕೊಟ್ಟಿದ್ದರು. ಅದರಂತೆ ಬಸ್ ನಂಬರ್ ಸರಿ ಪಡಿಸಿ ಅದರ ವೀಡಿಯೋವನ್ನೂ ಕಳುಹಿಸಿಕೊಟ್ಟಿದ್ದಾರೆ.