ಬೆಂಗಳೂರು, (www.thenewzmirror.com):
ಸರ್ಕಾರ ಹಾಗೂ ಸಾರಿಗೆ ಸಂಸ್ಥೆ ವಿರುದ್ಧ ತಿರುಗಿ ಬಿದ್ದು 10 ಕ್ಕೂ ಹೆಚ್ಚು ದಿನ ಪ್ರತಿಭಟನೆ ನಡೆಸಿದ್ದ ನೌಕರರಿಗೆ ಇದೀಗ ಸಂಸ್ಥೆ ಹೊಸ ಬಗೆಯ ಟಾರ್ಚರ್ ಶುರುಮಾಡಿದೆ. ವಿನಾಕಾರಣ ಕಿರುಕುಳ ನೀಡುತ್ತಿರೋದು ಒಂದೊಂದೇ ಆಚೆ ಬರ್ತಿರೋದು ಶ್ರಮಿಕ ವರ್ಗದ ಆಕ್ರೊಶಕ್ಕೆ ಮತ್ತೊಮ್ಮೆ ಕಾರಣವಾಗುತ್ತಿದೆ.
ಸಣ್ಣಪುಟ್ಟದಕ್ಕೂ ನೊಟೀಸ್ ನೀಡುತ್ತಾ ಬರುತ್ತಿದ್ದ ಸಂಸ್ಥೆ ಇದೀಗ ಮತ್ತೊಂದು ರೀತಿಯ ತೊಂದರೆ ಕೊಡುತ್ತಿದೆ. ಸಂಸ್ಥೆ ನಿಗದಿಪಡಿಸಿದ ಆದಾಯ ಗುರಿ ಮುಟ್ಟದ ಡ್ರೈವರ್ ಮತ್ತು ಕಂಡಕ್ಟರ್ಗಳಿಗೆ ನೋಟಿಸ್ ನೀಡಲು ಶುರುಇಟ್ಟುಕೊಂಡಿದೆ.
ಮಹಾನಗರ ಸಾರಿಗೆ ಸಂಸ್ಥೆಯ ಟಾರ್ಗೆಟ್ಗೆ ಡ್ರೈವರ್ಸ್ ಹಾಗೂ ಕಂಡಕ್ಟರ್ಸ್ ಕಂಗಲಾಗಿದ್ದು, ಮುಂದಿನ ದಾರಿಯಾವುದಯ್ಯ ಅಂತ ಕಾಯುತ್ತಿದ್ದಾರೆ.
ಘಟಕ 34ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲಿಂಗಪ್ಪ ಕಾಂಬ್ಳೆ ರಾತ್ರಿ ಪಾಳಯದಲ್ಲಿ ಕಡಿಮೆ ಈ.ಪಿ.ಕೆ.ಎಂ ತಂದಿದ್ದೀರಿ. ಇದರಿಂದ ಸಂಸ್ಥೆಗೆ ನಷ್ಟ ಸಂಭವಿಸಿದೆ. ಈ ಹಿನ್ನೆಲೆ 3 ದಿನಗಳೊಳಗಾಗಿ ಸೂಕ್ತ ಸಮಜಾಯಿಶಿ ನೀಡಿ. ಇಲ್ಲದಿದ್ದರೆ ಏಕಪಕ್ಷೀಯವಾಗಿ ಕ್ರಮಕೈಗೊಳ್ಳುತ್ತೀವಿ ಅಂತ ಬಿಎಂಟಿಸಿ ನೊಟೀಸ್ ನೀಡಿದೆ.
ಕಣ್ಣಿಗೆ ಎಣ್ಣೆ ಬಿಟ್ಟುಕೊಂಡಿ ಕೆಲ್ಸ ಮಾಡುವ ಸಿಬ್ಬಂದಿಗೆ ಆದಾಯ ತರ್ತಾ ಇಲ್ಲ…, ನಿರ್ಲಕ್ಷ್ಯತನ, ಅಸಡ್ಡೆ, ಬೇಜವಾಬ್ದಾರಿ ಹಣೆಪಟ್ಟಿ ಕಟ್ಟಿ ಶಿಕ್ಷೆ ನೀಡುವ ಮುನ್ಸೂಚನೆ ನೀಡುತ್ತಿದೆ. ಮೊದಲೇ ಕರೋನಾ.., ಹೀಗಿಋಒ ಸಮಯದಲ್ಲಿ ಬಿಎಂಟಿಸಿ ಬಳಕೆ ಮಾಡೋರ ಸಂಖ್ಯೆನೇ ಕಡಿಮೆ ಇಂಥದ್ರಲ್ಲಿ ನಿರೀಕ್ಷಿತ ಆದಾಯ ತರುತ್ತಿಲ್ಲ…, ನಿಮ್ಮ ನಿರ್ಲಕ್ಷ್ಯದಿಂದ ನಿಗಮಕ್ಕೆ ನಷ್ಟವಾಗಿದೆ ಅಂತ ನೊಟೀಸ್ ನೀಡುತ್ತಿದೆ ಬಿಎಂಟಿಸಿ.
ಸಾಮಾನ್ಯ ಪಾಳಿಯಲ್ಲಿ ಕಾರ್ಯ ನಿರ್ವಹಿಸುವರಿಗೆ 7,500 ರೂ. ಆದಾಯ ಸಿಗುತ್ತದೆ. ರಾತ್ರಿ ತಂಗುವ ಪಾಳಿಯವರು 9 ರಿಂದ 10 ಸಾವಿರ ಆದಾಯ ದೊರೆಯುತ್ತದೆ. ರಾತ್ರಿ ಸೇವೆಯ ಬಸ್ಗಳಲ್ಲಿ ಕರ್ತವ್ಯ ನಿರ್ವಹಿಸುವರು 5 ಸಾವಿರ ಆದಾಯ ಸಂಗ್ರಹಿಸಿ ಡಿಪೋಗಳಲ್ಲಿ ಪಾವತಿ ಮಾಡಬೇಕು. ನಗರದಲ್ಲಿ ಖಾಸಗಿ ಬಸ್ ,ಮ್ಯಾಕ್ಸಿ ಕ್ಯಾಬ್ಗಳ ಹಾವಳಿ ಹೆಚ್ಚಿರೋದ್ರ ನಡುವೆ ಆದಾಯ ಹೇಗೆ ನಿರೀಕ್ಷೆ ಮಾಡೋಕೆ ಸಾಧ್ಯ ಅಂತ ಕೇಳುತ್ತಿದ್ದಾರೆ ಕಂಡಕ್ಟರ್ಸ್ ಹಾಗೂ ಡ್ರೈವರ್ಸ್.
ದಿನಕ್ಕೆ 20 ರಿಂದ 25 ಲಕ್ಷ ಪ್ರಯಾಣಿಕರು
ಕರೋನಾ ಲಾಕ್ ಡೌನ್ ಗಿಂತ ಮುಂಚೆ ಬಿಎಂಟಿಸಿಯಲ್ಲಿ ನಿತ್ಯ 52 ಲಕ್ಷ ಪ್ರಯಾಣಿಕರು ಓಡಾಡುತಿದ್ರು. ಆದ್ರೀಗ 20 ರಿಂದ 25 ಲಕ್ಷ ಪ್ರಯಾಣೀಕ್ರು ಮಾತ್ರ ಓಡಾಟ ಮಾಡ್ತಿದ್ದಾರೆ. ಇಂಥದ್ರಲ್ಲಿ ಆದಾಯ ಹೇಗೆ ಬರೋಕೆ ಸಾಧ್ಯ ಅಂತ ಸಿಬ್ಬಂದಿ ಪ್ರಶ್ನೆ ಮಾಡುತ್ತಿದ್ದಾರೆ.