ಬೆಂಗಳೂರು,(www.thenewzmirror.com):
ಮಾಜಿ ಮುಖ್ಯಮಂತ್ರಿ ಬಿ ಎಸ್ ವೈ ಪುತ್ರಿ ಪದ್ಮಾವತಿ ಮಗಳು ಸೌಂದರ್ಯ (30) ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೌಂದರ್ಯ ಅವರು ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದರು.
ಇಂದು ಬೆಳಗ್ಗೆ 8 ಗಂಟೆಗೆ ಸೌಂದರ್ಯ ಪತಿ ಆಸ್ಪತ್ರೆಗೆ ತೆರಳಿದ್ದರು. 9 ತಿಂಗಳ ಮಗುವನ್ನ ಬಿಟ್ಟು ಸೌಂದರ್ಯ ಆತಹತ್ಯೆಗೆ ಶರಣಾಗಿದ್ದಾರೆ.
ಮೇಲ್ನೋಟಕ್ಕೆ ಖಿನ್ನತೆಯೇ ಕಾರಣ ಅಂತ ಹೇಳಲಾಗುತ್ತಿದೆ..
ಇನ್ನು ಸೌಂದರ್ಯ ಅಗಲಿಕೆಗೆ ಪ್ರಧಾನಿ ಮೋದಿ ಕೂಡ ಬಿಎಸ್ ವೈಗೆ ಕರೆ ಮಾಡಿ ಸಾಂತ್ವಾನ ಮಾಡಿದ್ದಾರೆ. ಅಷ್ಟೇ ಅಲ್ದೆ ಮಾಜಿ ಸಿಎಂ ಬಾವುಕರಾಗಿ ಸಾಂತ್ವಾನ ಹೇಳಿದ್ದು ಮನಕಲುಕುವಂತಿದೆ.

ಸಿದ್ಧರಾಮಯ್ಯ ಟ್ವೀಟ್ ಹೀಗಿದೆ..
ನನ್ನ ಧೀರ್ಘ ಕಾಲದ ರಾಜಕೀಯ ಸಂಗಾತಿ ಬಿ.ಎಸ್ ಯಡಿಯೂರಪ್ಪ ಅವರ ಮೊಮ್ಮಗಳ ಸಾವಿನ ಸುದ್ದಿ ಕೇಳಿ ಮನಸಿಗೆ ಘಾಸಿಯಾಯಿತು. ಭುಜದೆತ್ತರಕ್ಕೆ ಬೆಳೆದ ಮಕ್ಕಳು, ಕುಟುಂಬ ಸದಸ್ಯರ ಅಗಲಿಕೆಯಿಂದಾಗುವ ನೋವು, ಸಂಕಟವನ್ನು ನಾನು ಕಂಡಿದ್ದೇನೆ, ಅನುಭವಿಸಿದ್ದೇನೆ.
ಸೌಂದರ್ಯ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.